FACT CHECK | ಆಸ್ಪತ್ರೆಯಲ್ಲಿರುವ ನಟ ಸೈಫ್ ಅಲಿ ಖಾನ್ನನ್ನು ಭೇಟಿಯಾದ್ರಾ ಅಸಾದುದ್ದೀನ್ ಓವೈಸಿ?
ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲಿನ ಮಾರಣಾಂತಿಕ ದಾಳಿಯಿಂದಾಗಿ ಭಾರೀ ಸುದ್ದಿಯಲ್ಲಿದ್ದಾರೆ. ಇದೀಗ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನಟ ಸೈಫ್ ಅಲಿ ಖಾನ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ವೈರಲ್ ಚಿತ್ರಗಳಲ್ಲಿ, ನಟ ಸೈಫ್ ಅಲಿ ಖಾನ್ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದರೆ, ಅಸಾದುದ್ದೀನ್ ಓವೈಸಿ ಅವರ ಬಳಿ ಕುಳಿತು ನಟನ ಯೋಗಕ್ಷೇಮವನ್ನು ವಿಚಾರಿಸುತ್ತಿರುವುದನ್ನು ಕಾಣಬಹುದು. ಅಸಾದುದ್ದೀನ್ ಓವೈಸಿ ಅವರು ಆಸ್ಪತ್ರೆಗೆ ಬಂದ ನಂತರ ಸೈಫ್ ಅಲಿ ಖಾನ್ ಅವರನ್ನು ಭೇಟಿಯಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹೇಳಿಕೊಂಡಿದ್ದಾರೆ.
ಇದೇ ಫೋಟೋದಲ್ಲಿ ಮಿಯಾ ಭಾಯಿ ಶೋ ಎಂಬ ಬಳಕೆದಾರರು ತಮ್ಮ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರವನ್ನು ಹಂಚಿಕೊಳ್ಳುವಾಗ ಅವರು ಅಸಾದುದ್ದೀನ್ ಓವೈಸಿ ಸೈಫ್ ಅಲಿ ಖಾನ್ ಅವರನ್ನು ಭೇಟಿಯಾದರು ಎಂದು ಬರೆದಿದ್ದಾರೆ. ಇದೇ ರೀತಿ ಅನೇಕ ಬಳಕೆದಾರರು ಅಸಾದುದ್ದೀನ್ ಓವೈಸಿ ಮತ್ತು ಸೈಫ್ ಅಲಿ ಖಾನ್ ಅವರ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಹಾಗಿದ್ದರೆ ನಿಜವಾಗಿಯೂ ಲೀಲಾವತಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಸೈಫ್ ಅಲಿ ಖಾನ್ ಅವರನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಭೇಟಿಯಾಗಿದ್ದಾರೆ ಎಂಬುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಫೋಟೊವನ್ನು ಪರಿಶೀಲಿಸಿದಾಗ, ಈ ಚಿತ್ರಗಳಲ್ಲಿ ಸೈಫ್ ಅಲಿ ಖಾನ್ ಅವರ ಕಣ್ಣುಗಳು ಸಾಮಾನ್ಯ ವ್ಯಕ್ತಿಯಂತೆ ಕಾಣುತ್ತಿಲ್ಲ ಎಂಬ ಅಂಶವನ್ನು ಗಮನಿಸಬಹುದು. ಹಾಗಾಗಿ ಈ ಫೋಟೋ ನಿಜವೇ ಎಂಬ ಅನುಮಾನ ಸಹಜವಾಗಿ ಮೂಡಿತು. ಮುಂದುವರೆದು AI ಟೂಲ್ನಲ್ಲಿ ಫೋಟೋವನ್ನು ಪರಿಶೀಲನೆ ನಡೆಸಿದಾಗ, ಮೊದಲಿಗೆ decopy.ai ನಲ್ಲಿ ಅಪ್ಲೋಡ್ ಮಾಡಿದೆ. ಇದರ ಫಲಿತಾಂಶದ ಪ್ರಕಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಫೋಟೋ 99.99 ಪ್ರತಿಶತ ನಕಲಿಯಾಗಿದೆ ಪತ್ತೆಮಾಡಲಾಗಿದೆ.
![]()
ಇದೇ ರೀತಿ ಸೈಫ್ ಅಲಿ ಖಾನ್ ಅವರನ್ನು ಕ್ರಿಕೆಟಿಗರು, ಬಾಲಿವುಡ್ ನಟರು ಆಸ್ಪತ್ರೆಗೆ ತೆರಳಿ ಭೇಟಿ ಮಾಡಿದ್ದಾರೆ ಎಂಬ ಹಲವು ಫೋಟೋಗಳು ಎಐ ನಿಂದ ರಚಿಸಲಾಗಿದೆ. ಇವೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಸಾದುದ್ದೀನ್ ಓವೈಸಿ ಮತ್ತು ಸೈಫ್ ಅಲಿ ಖಾನ್ ಅವರನ್ನು ಲೀಲಾವತಿ ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾರೆ ಎಂದು AI ಮೂಲಕ ರಚಿಸಿದ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಈ AI ನಿಂದ ರಚಿಸಿದ ಚಿತ್ರವನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಯೋಗಿ ಮತ್ತು ಅಖಿಲೇಶ್ ಒಟ್ಟಿಗೆ ಇರುವ ಸೆಲ್ಫಿ ಚಿತ್ರದ ಅಸಲೀಯತ್ತೇನು ಗೊತ್ತೆ?

