ಆತ ಕುಡುಕನಲ್ಲ, ಕುಡಿದಿರಲೂ ಇಲ್ಲ.. ಆದರೂ ಆತನ ಹೊಟ್ಟೆಯಲ್ಲಿತ್ತು ಮದ್ಯ! ಏನಿದು ರಹಸ್ಯ
2019 .. ಅಮೆರಿಕದ ನ್ಯೂಜೆರ್ಸಿಯ ಡ್ಯಾನಿ ಜಿಯಾನೊಟ್ಟೊ ಕುಡಿದು ವಾಹನ ಚಲಾಯಿಸುವಾಗ ಪೋಲೀಸರ ಕೈಗೆ ಸಿಕ್ಕುಬಿದ್ದಿದ್ದಾನೆ. ಆದರೆ, ನಾನು ಒಂದು ಹನಿ ಮದ್ಯ ಕೂಡ ಕುಡಿದಿಲ್ಲ ಎಂದು ಪೊಲೀಸರೊಂದಿಗೆ ಬಲವಾಗಿ ಆತ ವಾದಿಸಿದ್ದ. ಅವನ ಮಾತುಗಳು ಎಷ್ಟು ನಿಜವೆಂದು ನೋಡಲು ಪೋಲೀಸರು ಬ್ರೀತ್ ಅನಾಲೈಜರ್ ಪರೀಕ್ಷೆ ಮಾಡಿದರೆ ಆತ ಹೊಟ್ಟೆ ತುಂಬಾ ಕುಡಿದಿದ್ದಾನೆಂದು ತೋರಿಸಿದೆ. ಮೂರು ಬಾರಿ ಪರೀಕ್ಷಿಸಿದರೂ ಕುಡಿದಿದ್ದಾನೆ ಎಂದೇಯೇ ತೋರಿಸಿದ್ದು, ಆತ ಕುಡಿದಿದ್ದಾನೆಂದೆ ಸಾಬೀತು ಪಡಿಸಲಾಗಿತ್ತು.
ಇನ್ನೇನಿದೆ .. ಸಾಕ್ಷಿಗಳು ಅವನ ಕಣ್ಣ ಮುಂದೆಯೇ ಕಾಣಿಸಿಕೊಂಡಿದ್ದರಿಂದ ಅವನು ಹೇಳಿದ್ದನ್ನು ನಿರ್ಲಕ್ಷಿಸಿ ಆತನನ್ನು ಬಂಧಿಸಲಾಯಿತು. ಆದರೆ, ಮತ್ತಾತನನ್ನು ಪರೀಕ್ಷಿಸಿದಾಗ ಅವನು ನಿಜವಾಗಿಯೂ ಕುಡಿಯಲಿಲ್ಲ ಎಂದೇ ತಿಳಿಯುತ್ತದೆ. ಬಂಧನಕ್ಕೊಳಗಾದ ಒಂದು ತಿಂಗಳ ನಂತರ ಆಸ್ಪತ್ರೆಗೆ ಹೋದಾಗ ಕಂಡುಬಂದದ್ದು ಒಂದು ಅಚ್ಚರಿ, ಅದೇನೆಂದರೆ ಡ್ಯಾನಿಯ ಹೊಟ್ಟೆಯಲ್ಲಿಯೇ ಆಲ್ಕೋಹಾಲ್ ತಯಾರಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನು ಆಟೋ ಬ್ರೂವರಿ ಸಿಂಡ್ರೋಮ್ (ಎಬಿಎಸ್) ಎಂದು ಕರೆಯಲಾಗುತ್ತದೆಯಂತೆ. ಎಂದರೆ ಆತನ ಹೊಟ್ಟೆಯಲ್ಲಿರುವ ಕಾರ್ಬೋಹೈಡ್ರೇಟ್ಗಳು ತಮ್ಮಷ್ಟಕ್ಕೆ ತಾವೆ ಮದ್ಯವಾಗಿ ಬದಲಾಗುತ್ತವೆ. ವಿಶೇಷವಾಗಿ ಆತ ಕೇಕ್, ಬ್ರೆಡ್ ಮತ್ತು ಪಿಜ್ಜಾಗಳಂತಹ ಆಹಾರವನ್ನು ಸೇವಿಸಿದಾಗ, ಹೊಟ್ಟೆಯಲ್ಲಿ ಆಲ್ಕೋಹಾಲ್ ಮಟ್ಟವು ಹೆಚ್ಚಾಗುತ್ತದೆ. ಇದರಿಂದ ಆತ ಅವುಗಳನ್ನು ತ್ಯಜಿಸಲು ನಿರ್ಧರಿಸಿದರು. ಬದಲಾಗಿ ಆತ ಮಾಂಸ, ಮೀನು ಮತ್ತು ಸೊಪ್ಪು ತರಕಾರಿಗಳನ್ನು ತೆಗೆದುಕೊಳ್ಳುತ್ತಿದ್ದಾನೆ.
ಡ್ಯಾನಿ ಈ ಬಗ್ಗೆ ಮಾತನಾಡುತ್ತಾ “ಪೊಲೀಸರು ನನ್ನನ್ನು ಬಂಧಿಸಿದಾಗ ನನಗೆ ಷಾಕ್ ಆಯಿತು. ನಾನು ಎಣ್ಣೆ ಕುಡಿದಿಲ್ಲ ಎಂದು ಎಷ್ಟು ಬಡಿದುಕೊಂಡರು ಸಹ ಅವರು ಕೇಳಲಿಲ್ಲ. ನಾನು ಮದ್ಯ ಕುಡಿಯದಿದ್ದರೂ ಸಹ ಮಧ್ಯ ಸೇವನೆಯ ಅಪರಾಧದಡಿಯಲ್ಲಿ ಬಂಧಿಸಿದ್ದು ಹುಚ್ಚು ಹಿಡಿದಂತಾಯಿತು ” ಎಂದು ಅವರು ಹೇಳಿದರು. ಈಗಲೂ ಸಹ ನಾನು ಮದ್ಯಪಾನ ಮಾಡಿಲ್ಲ ಎಂದು ಯಾರೂ ನಂಬುವುದಿಲ್ಲ ಹೊರತಾಗಿ ತಮಾಷೆ ಮಾಡುತ್ತಿದ್ದೇನೆ ಎಂದು ಭಾವಿಸುತ್ತಾರೆ ಎಂದು ಹೇಳಿದ್ದಾರೆ

