ಸಿಲಿಕಾನ್ ಸಿಟಿ ಮಂದಿಗೆ ಬಿಗ್ ಶಾಕ್ : 268 ಜನರಲ್ಲಿ ಡೆಲ್ಟಾ ವೈರಸ್ ಪತ್ತೆ!
ಕೊರೊನಾ ಮೂರನೇ ಅಲೆಯ ಆತಂಕದ ಮಧ್ಯೆ ಬಿಬಿಎಂಪಿ ಬೆಂಗಳೂರಿನಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಿ ನೀಡಿದ ವರದಿಯಿಂದ ಸಿಲಿಕಾನ್ ಸಿಟಿ ಮಂದಿಗೆ ಆಘಾತ ಎದುರಾಗಿದೆ. ನಗರದಲ್ಲಿ ಒಟ್ಟು 268 ಜನರಿಗೆ ಡೆಲ್ಟಾ ವೈರಸ್ ಪತ್ತೆಯಾಗಿದೆ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
268 ಜನರಿಗೆ ಡೆಲ್ಟಾ ವೈರಸ್ ಪ್ರಕರಣಗಳ ಪೈಕಿ ಇಬ್ಬರಲ್ಲಿ ಕಪ್ಪಾ ವೈರಸ್ ಹಾಗೂ 38 ಜನರಲ್ಲಿ ಡೆಲ್ಟಾ ವೈರಾಣುವಿನ ಮತ್ತೊಂದು ಪ್ರಭೇದ ದೃಢಪಟ್ಟಿದೆ.
ಸದ್ಯ ನಗರದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಇತ್ತ ನಿಫಾ ವೈರಸ್ ಆತಂಕ ಕೂಡ ಹೆಚ್ಚಾಗುತ್ತಿದ್ದು, ಬೆಂಗಳೂರಲ್ಲಿ ಡೆಲ್ಟಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.
ಬಿಬಿಎಂಪಿ ನಡೆಸಿದ ಮನೆ ಮನೆ ಆರೋಗ್ಯ ಸರ್ವೇಯಲ್ಲಿ 22,362 ಜನರಿಗೆ ಕೊರೊನಾ ಸೋಂಕು ಕಂಡುಬಂದಿದೆ.