ಕೋವಿಡ್-19: ಆಸ್ಪತ್ರೆಗೆ ದಾಖಲಾದ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್
ಕೊರೊನ ಸೋಂಕು ಪತ್ತೆಯಾದ ಮೇಲೆ ಹತ್ತು ದಿನಗಳವರೆಗೆ ಬಿಡದೆ ಲಕ್ಷಣಗಳು ತೋರಿರುವ ಹಿನ್ನಲೆಯಲ್ಲಿ ಇಂಗ್ಲೆಂಡಿನ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸರ್ಕಾರವನ್ನು ಅವರೇ ಮುನ್ನಡೆಸಲಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.
10 ದಿನಗಳಾದರೂ ಇನ್ನೂ ದೇಹದ ಉಷ್ಣಾಂಶ ಇಳಿಯದ ಕಾರಣ ಮುಂಜಾಗ್ರತಾ ಕ್ರಮವಾಗಿ ಹೆಸರು ಬಹಿರಂಗಪಡಿಸಿದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
“ವೈದ್ಯರ ಸಲಹೆಯಂತೆ ಹೆಚ್ಚಿನ ಪರೀಕ್ಷೆಗಳಿಗೆ ಪ್ರಧಾನಮಂತ್ರಿಯವರನ್ನು ಆಸ್ಪತ್ರೆಗೆ ಇಂದು ದಾಖಲು ಮಾಡಲಾಗಿದೆ. ಅವರು ಅಲ್ಲಿ ಒಂದು ರಾತ್ರಿ ಉಳಿದು ಹಿಂದಿರುಗುವ ಸಾಧ್ಯತೆ ಇದೆ” ಎಂದು ಜಾನ್ಸನ್ ಅವರ ಡೌನಿಂಗ್ ಸ್ಟ್ರೀಟ್ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
55 ವರ್ಷದ ಜಾನ್ಸನ್ ಆರೋಗ್ಯದಲ್ಲಿ ಸ್ಥಿರವಾಗಿದ್ದಾರೆ ಎಂದು ಅವರ ಕಚೇರಿ ಹೇಳಿದ್ದು ಮುಂಜಾಗ್ರತಾ ಕ್ರಮವಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ತಿಳಿಸಿದ್ದಾರೆ. ಇಂಗ್ಲೆಂಡಿನಲ್ಲಿ ಇಲ್ಲಿಯವರೆಗೂ ಸುಮಾರು 47 ಸಾವಿರ ಜನ ಕೊರೊನ ಸೋಂಕಿಗೆ ಗುರಿಯಾಗಿದ್ದು ಮೃತರ ಸಂಖ್ಯೆ 4900ಕ್ಕೂ ಹೆಚ್ಚಿದೆ.

