ಕ್ವಾರೆಂಟೈನ್ ಮುಗಿಸಿದ ಖುಷಿಯಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಬಳಿಕ ಕಾಣಿಸಿಕೊಂಡ ಕೊರೊನಾ..!

ಮುಂಬೈನಿಂದ ಹಿಂದಿರುಗಿದ ಬೆಳಗಾವಿ ನಿವಾಸಿ ಕ್ವಾರೆಂಟೈನ್ ಮುಗಿಸಿ ಸ್ನೇಹಿತರೊಂದಿಗೆ ಸಂಭ್ರಮಿಸಿದ ಬಳಿಕ ಕೊರೊನಾ ವೈರಸ್ ಪತ್ತೆಯಾಗಿದ್ದು ಆಪ್ತರನ್ನು ಬೆಚ್ಚಿಬೀಳಿಸಿದೆ.

ಹೌದು… ಬೆಳಗಾವಿಯ ಹುಕ್ಕೇರಿ ತಾಲ್ಲೂಕಿನ ಬೀದರೆವಾಡಿಯಲ್ಲಿರುವ ಕ್ಯಾರೆಂಟೈನ್ ಸೌಲಭ್ಯದಿಂದ ಬಿಡುಗಡೆಯಾದ 35 ವರ್ಷದ ವ್ಯಕ್ತಿ ಕೋವಿಡ್ 19 ರಿಂದ ಮುಕ್ತನಾಗಿದ್ದಾನೆಂದು ಊಹಿಸಿ ತನ್ನ ಎಲ್ಲ ಸ್ನೇಹಿತರನ್ನು ಒಟ್ಟುಗೂಡಿಸಿಕೊಂಡು ಮನೆಯಲ್ಲಿ ತನ್ನ ಬಿಡುಗಡೆಯನ್ನು ಆಚರಿಸಿದ ಬಳಿಕ ಆತನಲ್ಲಿ ಸೋಂಕು ಕಾಣಿಸಿಕೊಂಡ ಘಟನೆ ಆಪ್ತರನ್ನು ಬೆಚ್ಚಿ ಬೀಳಿಸಿದೆ.

ಕ್ಯಾರೆಂಟೈನ್ ಅವಧಿಯನ್ನು ಸರ್ಕಾರ ಇತ್ತೀಚೆಗೆ 14 ದಿನಗಳಿಂದ ಏಳಕ್ಕೆ ಕಡಿತಗೊಳಿಸಿದ ನಂತರ ಕೇವಲ ಏಳು ದಿನಗಳ ಕಾಲ ಅವರನ್ನು ನಿರ್ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಸೋಂಕಿತನನ್ನು ಕ್ವಾರಂಟೈನ್ ನಿಂದ ಕೊರೊನಾ ವರಿದಿ ಬರುವ ಮುನ್ನವೇ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆ ಮಾಡುವ ವೇಳೆ ಆತನಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ. ಈ ಎಡವಟ್ಟಿನಿಂದಾಗಿ ಸದ್ಯ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದ್ದು ಪರೀಕ್ಷಗೆ ಒಳಪಡಿಸಲಾಗಿದೆ.

ಸೋಂಕಿತ ವ್ಯಕ್ತಿ 13ರಿಂದ 14 ಸ್ನೇಹಿತರೊಂದಿಗೆ ಪಾರ್ಟಿ ಮಾಡುವುದಲ್ಲಿದೇ ಹಳ್ಳಿಯಲ್ಲಿ ಅನೇಕರೊಂದಿಗೆ ಬೆರೆತಿದ್ದಾನೆ. ಗ್ರಾಮದಲ್ಲಿ ತನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲ ಜನರನ್ನು ಪತ್ತೆಹಚ್ಚಲು ಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಗ್ರಾಮಕ್ಕೆ ಧಾವಿಸಿದ್ದು, ಅವರು ಆಯೋಜಿಸಿದ್ದ ಪಾರ್ಟಿಗೆ ಆಹಾರ ಮತ್ತು ಮದ್ಯವನ್ನು ಸರಬರಾಜು ಮಾಡಿದವರು ಕೂಡ ಆತಂಕಕ್ಕೊಳಗಾಗಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights