ಚೀನಾ ಉತ್ಪನ್ನಗಳ ತಿಸ್ಕರಿಸಲು ಸರ್ಕಾರ ಕರೆ; ಟಿಕ್‌ಟಾಕ್‌ನಲ್ಲಿದೆ ಕೇಂದ್ರ ಸರ್ಕಾರ ಅಧಿಕೃತ ಖಾತೆ

ಚೀನೀಯ ಉತ್ಪನ್ನಗಳನ್ನು ತ್ಯಜಿಸುವಂತೆ ಸುಮಾರು ವರ್ಷಗಳಿಂದ ಆಗಿಂದಾಗ್ಗೆ ದೇಶದ ಕೆಲವರು ಕರೆಕೊಡುತ್ತಲೇ ಇದ್ದಾರೆ. ಕಳೆದ ಕೆಲವು ದಿನಗಳಿಂದ ಭಾರತ-ಚೀನಾ ಗಡಿಯಲ್ಲಿ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿದೆ. ಆ ಕಾರಣಕ್ಕಾಗಿ ಈಗ ಮತ್ತೆ ಟಿಕ್‌ಟಾಕ್‌ ಸೇರಿದಂತೆ ಚೀನೀಯ ಉತ್ಪನ್ನಗಳನ್ನು ತಿರಸ್ಕರಿಸಿ ಬಾಯ್‌ಕಾಟ್‌ ಮಾಡಲು ಕೆಲವು ಸ್ವಘೋಷಿತ ಅಂದ ಭಕ್ತರು ಕರೆ ನೀಡಿದ್ದಾರೆ.

ಅಲ್ಲದೆ, ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆತ್ಮ ನಿರ್ಭರ ಭಾರತ ಎಂಬ ಸ್ವಾವಲಂಭನೆಗೆ ಕರೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಭಾರತ ಸರ್ಕಾರವು @mygovindia ಯುಸರ್‌ ಐಡಿ ಇರುವ ಅಧಿಕೃತ ಟಿಕ್‌ಟಾಕ್‌ ಖಾತೆಯನ್ನು ತೆರೆದಿದ್ದು,  ಟ್ವಿಟರ್‌ ಬಳಕೆದಾರರು ಆಘಾತಕ್ಕಳಗಾಗಿದ್ದಾರೆ.

ಟಿಕ್‌ಟಾಕ್‌ನ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚು ಸಾಮಾಜಿಕ ಜಾಲತಾಣ ಬಳಕೆದಾರರು ಟಿಕ್‌ಟಾಕ್‌ ಬಳಸುತ್ತಿರುವುದರಿಂದಾಗಿ, ಕೊರೊನಾ ವೈರಸ್‌ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಟಿಕ್‌ಟಾಕ್‌ ಖಾತೆ ರಚಿಸಿದೆ ಎಂದು ಹೇಳಲಾಗಿದೆ. ಸರ್ಕಾರದ ಪ್ರೊಫೈಲ್‌ನ ಹೇಳಿಕೆಯು ಹೀಗಿದೆ, “Citizen engagement platform of Government of India” (ನಾಗರಿಕರನ್ನು ಸಂಪರ್ಕಿಸುವ ಭಾರತ ಸರ್ಕಾರ ಸಾಮಾಜಿಕ ವೇದಿಕೆ”.

ಟಿಕ್‌ಟಾಕ್‌ನಲ್ಲಿನ @mygovindia ಖಾತೆಯು ಸುಮಾರು 909.1 ಸಾವಿರ ಅನುಯಾಯಿಗಳನ್ನು ಹೊಂದಿದೆ, 6.5 ಮಿಲಿಯನ್ ಲೈಕ್‌ಗಳನ್ನು ಪಡೆದಿದೆ ಮತ್ತು ಅದು ಬೇರೆ ಯಾವುದೇ ಇತರ ಖಾತೆಗಳನ್ನು ಫಾಲೋ ಮಾಡುತ್ತಿಲ್ಲ. ಇಲ್ಲಿಯವರೆಗೂ ಆ ಖಾತೆಯಲ್ಲಿ ಯೋಗ, ಕೊರೊನಾ ಸೋಂಕು ಕುರಿತ ಜಾಗೃತಿ ಹಾಗೂ ಸರ್ಕಾರದ ಸಾಧನೆಗಳನ್ನು ಒಳಗೊಂಡ ವಿಡಿಯೋಗಳನ್ನು ಅಪ್‌ಲೋಡ್‌ ಮಾಡಲಾಗಿದೆ.

@mygovindia ಟಿಕ್‌ಟಾಕ್‌ ಖಾತೆಯನ್ನು ಪರಿಶೀಲಿಸಲಾಗಿದೆ, ಏಕೆಂದರೆ ಬಳಕೆದಾರರ ಹೆಸರಿನೊಂದಿಗೆ ನೀಲಿ ಟಿಕ್ ಬ್ಯಾಡ್ಜ್ ಇದೆ.

ಸರ್ಕಾರವು ಭಾರತೀಯರಿಗೆ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕೇಳಿಕೊಳ್ಳುತ್ತಿರುವ ಸಮಯದಲ್ಲಿ ಮತ್ತು ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಪ್ರಾರಂಭಿಸಿ ಎಂದು ‘ಆತ್ಮಾ ನಿರ್ಭರ್’ ಆಗಲು ಕರೆಕೊಟ್ಟಿರುವ ಸಂದರ್ಭದಲ್ಲಿ ಈ ಸುದ್ದಿ ವಿಶೇಷವಾಗಿ ಜನರನ್ನು ಆಘಾತಕ್ಕೀಡು ಮಾಡಿದೆ.

ಅಲ್ಲದೆ, ಚೀನಾದ ಟಿಕ್‌ಟಾಕ್‌ ಬದಲಾಗಿ, ಭಾರತದ ಮಿತ್ರೋನ್‌ ಆಪ್‌ ಬಳಸುವಂತೆ ಕರೆಕೊಡಲಾಗಿತ್ತು. ಮಿತ್ರೋನ್‌ ಅಪ್ಲಿಕೇಷನ್‌ ಕೂಡ ಹೆಚ್ಚು ಡೌನ್‌ಲೋಡ್‌ ಆಗಿತ್ತು. ಆದರೆ, ಮಿತ್ರೋನ್‌ ಅಪ್ಲಿಕೇಷನ್ಅನ್ನು ಪಾಕಿಸ್ಥಾನದ ಟಿಕ್‌ಟಿಕ್‌ ಆಪ್‌ನ ರೂಪಾಂತರವಾಗಿದ್ದು, ಅದೂ ಕೂಡ ಸ್ವದೇಶಿ ಅಲ್ಲ ಎಂದು ಫ್ಯಾಕ್‌ಚೆಕ್‌ ಹಾಗೂ ವಿವಿಧ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಅನೇಕ ಬಳಕೆದಾರರು ಸರ್ಕಾರದ ಬೂಟಾಟಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಮತ್ತು ಟಿಕ್‌ಟಾಕ್ ಖಾತೆಯನ್ನು ಅಳಿಸಲು ಟ್ವಿಟರ್‌ನಲ್ಲಿ ಒತ್ತಾಯಿಸಿದ್ದಾರೆ.

https://twitter.com/indian_spain/status/1269863710765563904

https://twitter.com/ydv_kalpana/status/1269584995024162816

https://twitter.com/sabo_03/status/1269503340531990528

https://twitter.com/San4u8793/status/1269529158742421505

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights