1990 ರಿಂದ ಸಕ್ರಿಯವಾಗಿ ಸರಣಿ ಕಳ್ಳತನ ಮಾಡಿದ್ದ ಖದೀಮರ ಬಂಧನ…

1990 ರಿಂದ ಸಕ್ರಿಯವಾಗಿರುವ ಸರಣಿ ಕಳ್ಳತನ ಮಾಡಿದ್ದ ಖದೀಮರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮನೆ ಕೆಲಸಕ್ಕಾಗಿ ಸೇರಿಕೊಳ್ಳುತ್ತಿದ್ದ ಕಳ್ಳಿ ತನ್ನ ಕೈಚಳಕ ತೋರಿಸಿ ಪರಾರಿಯಾಗುತ್ತಿದ್ದಳು. ಕೆಲಸ ಪ್ರಾರಂಭಿಸಿದ ಕೆಲವೇ ಗಂಟೆಗಳಲ್ಲಿ ಹಣ, ಚಿನ್ನ ಮತ್ತು ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದರು.

ಬಾಂದ್ರಾ ಉದ್ಯಮಿ ನೀಡಿದ ದೂರಿನ ನಂತರ ಪೊಲೀಸರು ಕಳ್ಳತನದ ಆರೋಪದ ಮೇಲೆ ಖಾರ್ ಪೊಲೀಸರು 34 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಅಕ್ಟೋಬರ್ 19 ರಂದು ಆರೋಪಿ ವನಿತಾ ಗೈಕ್ವಾಡ್ ಅವರು ಬಾಂದ್ರಾದಲ್ಲಿರುವ ಉದ್ಯಮಿಯೊಬ್ಬರ ಮನೆಯಿಂದ 1.8 ಲಕ್ಷ ರೂಪಾಯಿ ಮೌಲ್ಯದ ನಗದು, ಚಿನ್ನ ಮತ್ತು ವಜ್ರದ ಆಭರಣಗಳನ್ನು ಕದ್ದಿದ್ದಾಳೆ. ಅವಳು ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ಅಪರಾಧ ಮಾಡಿದ್ದು ಈಕೆಯ ಸಹಚರರನ್ನೂ ಪೊಲೀಸರು ಬಂಧಿಸಿದ್ದಾರೆ.

34 ವರ್ಷದ ವ್ಯಕ್ತಿಯನ್ನು ಉದ್ಯಮಿ ಮನೆಯಲ್ಲಿರುವ ಕ್ಯಾಮೆರಾಗಳ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಗುರುತಿಸಲಾಗಿದೆ. ಪೊಲೀಸರು ಕದ್ದ ನಗದು, ಆಭರಣಗಳನ್ನು ಆರೋಪಿಗಳ ಬಳಿಯಿಂದ ವಶಪಡಿಸಿಕೊಂಡಿದ್ದಾರೆ.

ಆಗಸ್ಟ್ನಲ್ಲಿ ಅಂಧೇರಿಯಲ್ಲಿ ಇದೇ ರೀತಿಯ ಅಪರಾಧಕ್ಕಾಗಿ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಆಕೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. “ಅವರು 1990 ರಿಂದ ಕನಿಷ್ಠ 44 ಅಪರಾಧಗಳನ್ನು ಮಾಡಿದ್ದಾರೆ. ಇವರು ನಗರದಾದ್ಯಂತ ಪೊಲೀಸರಿಂದ ಬಂಧಿಸಲ್ಪಟ್ಟರು” ಎಂದು ಮುಂಬೈ ಕಾಪ್ ಅನ್ನು ದಿನಪತ್ರಿಕೆ ಉಲ್ಲೇಖಿಸಿದೆ.

ಜನವರಿಯಲ್ಲಿ ಸ್ಯಾಂಟಾಕ್ರೂಜ್‌ನ ಫ್ಲ್ಯಾಟ್‌ವೊಂದರಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಎರಡು ಗಂಟೆಗಳಲ್ಲಿ 5.3 ಲಕ್ಷ ರೂ.ಗಳ ಆಭರಣವನ್ನು ಕದ್ದಿದ್ದಕ್ಕಾಗಿ 2019 ರ ಮಾರ್ಚ್‌ನಲ್ಲಿ ಸಹ ಬಂಧಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights