ಚೀನಾ ಜೊತೆಗಿನ 5,000 ಕೋಟಿ ಹೂಡಿಕೆಯ ಮೂರು ಒಪ್ಪಂದಗಳಿಗೆ ತಡೆ ನೀಡಿದ ಮಹಾರಾಷ್ಟ್ರ ಸರ್ಕಾರ!

ಚೀನಾ ಮತ್ತು ಭಾರತದ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆಯೂ ಮಹಾರಾಷ್ಟ್ರದ ಉದ್ದವ್ ಠಾಕ್ರೆ ನೇತೃತ್ವದ ಸರ್ಕಾರ ಚೀನಾ ಮೂಲದ ಸಂಸ್ಥೆಗಳೊಂದಿಗೆ 5 ಸಾವಿರ ಕೋಟಿ ರೂ ಗಳ ಹೂಡಿಕೆ ಒಪ್ಪಂದ ಮಾಡಿಕೊಂಡಿತ್ತು. ಕಳೆದ ವಾರ ಈ ಒಪ್ಪಂದ ಸಹಿ ಹಾಕಿದ್ದ ಸರ್ಕಾರದ ವಿರುದ್ಧ ಟೀಕೆ ಎದುರಾಗಿದ್ದು, ಎಚ್ಚೆತ್ತುಕೊಂಡಿರುವ ಸರ್ಕಾರ ಯೋಜನೆಗಳಿಗ ತಡೆ ನೀಡಿದೆ.

ಚೀನಾದ ಸಂಸ್ಥೆಗಳ ಜೊತೆ ಮಾಡಿಕೊಂಡಿದ್ದ ಸುಮಾರು 5000 ಕೋಟಿಯ ಮೂರು ಒಪ್ಪಂದಗಳಿಗೆ ಮಹಾರಾಷ್ಟ್ರ ಸರ್ಕಾರ ತಡೆ ನೀಡಿದೆ. ಕೇಂದ್ರ ಸರ್ಕಾರದ ಜೊತೆಗಿನ ಮಾತುಕತೆ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೈಗಾರಿಕಾ ಸಚಿವ ಸುಭಾಷ್‌ ದೇಸಾಯಿ ತಿಳಿಸಿದ್ದಾರೆ.

ಕೊರೋನಾ ಬಳಿಕದ ಆರ್ಥಿಕ ಪುನಶ್ಚೇತನಕ್ಕಾಗಿ ಮಹಾರಾಷ್ಟ್ರ ಸರ್ಕಾರ ಮ್ಯಾಗ್ನೇಟಿಕ್‌ ಮಹಾರಾಷ್ಟ್ರ 2.0 ಅಭಿಯಾನ ಆರಂಭಿಸಿತ್ತು. ಇದರ ಅಡಿಯಲ್ಲಿ ಚೀನಾದ ಹೆಂಗ್ಲಿ ಇಂಜಿನಿಯರಿಂಗ್‌, ಪಿಎಂಐ ಎಲೆಕ್ಟ್ರೋ ಮೊಬಿಲಿಟಿ ಸೊಲ್ಯೂಷನ್‌ ಜೆವಿ ಅಂಡ್‌ ಫೋಟಾನ್‌, ಗ್ರೇಟ್ ವಾಲ್‌ ಮೋಟಾರ್‌ನೊಂದಿಗೆ ಜೂ.17ರಂದು ಪುಣೆಯ ತಲೆಗಾಂವ್‌ನಲ್ಲಿ 5,000 ಕೋಟಿ ಹೂಡಿಕೆ ಸಂಬಂಧ ಮೂರು ಒಪ್ಪಂದಗಳನ್ನ ಮಾಡಿಕೊಂಡಿತ್ತು. ಇದೀಗ ಈ ಒಪ್ಪಂದಕ್ಕೆ ಮಹಾ ವಿಕಾಸ ಅಘಾಡಿ ಸರ್ಕಾರ ತಡೆ ನೀಡಿದೆ.

ಫೋಟಾನ್‌ ಮತ್ತು ಗ್ರೇಟ್‌ ಮೋಟಾರ್‌-3,770 ಕೋಟಿ ರೂ ಹೂಡಿಕೆ ಮಾಡಿದ್ದು, ಎಲೆಕ್ಟ್ರೋ ಮೊಬಿಲಿಟಿ ಸೊಲ್ಯೂಷನ್‌ ಜೆವಿ ಮತ್ತು ಫೋಟಾನ್‌-1,000 ಕೋಟಿ ಮತ್ತು ಹೆಂಗ್ಲಿ ಇಂಜಿನಿಯರಿಂಗ್‌ -250 ಕೋಟಿ  ರೂ ಹೂಡಿಕೆ ಮಾಡಿವೆ.

ಲಡಾಕ್‌ನ ಗ್ವಲಾನ್‌ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ 20 ಸೈನಿಕರ ಹತ್ಯೆಯಾಗಿತ್ತು. ಸಂಘರ್ಷದ ನಡುವೆ, ಚೀನಾ ವಸ್ತುಗಳನ್ನು ತ್ಯಜಿಸಿ ಎಂದು ಬಾಯ್‌ಕಾಯ್‌ ಚೀನಾ ಘೋಷಣೆಗಳು ಮತ್ತೆ ಭುಗಿಲೆದ್ದಿದೆ. ಇದರ ಹಿನ್ನೆಲೆಯೂ ಈ ರದ್ದತಿಗೆ ಕಾರಣವಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights