ಜೂಜಾಟದ ಅಡ್ಡೆ ಮೇಲೆ ದಾಳಿ : ಇಬ್ಬರು ಪೊಲೀಸ್ ಪೇದೆಗಳ ಅಮಾನತು

ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಿ ಹಣ ವಸೂಲಿ ಮಾಡಿ, ಈ ವಿಷಯ ಮುಚ್ಚಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿದಂತೆ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಿರೋ ಘಟನೆ ಗದಗನಲ್ಲಿ ನಡೆದಿದೆ.

ಗದಗನ‌ ನಗರ ಠಾಣೆಯ ಹನುಮಂತ ಯಡಿಯಾಪುರ್ ಹಾಗೂ ಬೆಟಗೇರಿ ಬಡಾವಣೆ ಠಾಣೆಯ ಪರಶು ದೊಡ್ಡಮನಿ ಅಮಾನತಾಗಿರುವ ಪೊಲೀಸ್ ಪೇದೆಗಳಾಗಿದ್ದಾರೆ. ಆಗಷ್ಟ್ ೯ ರಂದು ನಗರದ ಪ್ರತಿಷ್ಠಿತ ಖಾಸಗೀ ಹೋಟೆಲ್ ನಲ್ಲಿ ನಡೆಸಲಾಗುತ್ತಿದ್ದ ಜೂಜಾಟದ ಅಡ್ಡೆ ಮೇಲೆ ಇವರಿಬ್ಬರು ದಾಳಿ ನಡೆಸಿ, ಜೂಜಾಟಕ್ಕಿಟ್ಟಿದ್ದ ಹಣ ವಸೂಲಿ ಮಾಡಿದ್ರು.

ನಂತರ ಈ ಪ್ರಕರಣವನ್ನೇ ಮುಚ್ಚಿ ಹಾಕಲಾಗಿತ್ತು. ಬಡಾವಣೆ ಠಾಣೆ ವ್ಯಾಪ್ತಿಗೆ ಬರುವ ಈ ಹೋಟೆಲ್ ಗೆ ನಗರ ಠಾಣೆಯ ಪೇದೆ ಹನುಮಂತ ಯಡಿಯಾಪುರ್ ಯಾಕೆ ದಾಳಿ ನಡೆಸಿದ್ರು ಎನ್ನೋ ವಿಚಾರ ಪೊಲೀಸ್ ವಲಯದಲ್ಲೇ ಅನುಮಾನಕ್ಕೆಡೆ ಮಾಡಿಕೊಟ್ಟಿತ್ತು. ಗದಗ ಎಸ್ಪಿ ಶ್ರೀನಾಥ್ ಜೋಶಿ ಈ ಇಬ್ಬರೂ ಪೇದೆಗಳನ್ನು ಅಮಾನತು ಮಾಡಿ ಆದೇಶ ಹೊರಡಿಸೋ ಮೂಲಕ ಎಲ್ಲಾ ಅನುಮಾನಗಳಿಗೆ ಫುಲ್ ಸ್ಟಾಪ್‌ ಇಟ್ಟಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights