ದೇಶಾದ್ಯಂತ ಮುಂದಿನ ಒಂದು ವರ್ಷದಲ್ಲಿ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಳ- ಯುನಿಸೆಫ್ ಎಚ್ಚರಿಕೆ
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ನಿಯಮಿತ ಆರೋಗ್ಯ ಸೇವೆಗಳಲ್ಲಿ ಅಡ್ಡಿ ಉಂಟಾದ ಪರಿಣಾಮವಾಗಿ ಮುಂದಿನ ಒಂದು ವರ್ಷದಲ್ಲಿ 1.2-6 ಲಕ್ಷ ಮಕ್ಕಳ ಸಾವಿಗೆ ಭಾರತ ಸಾಕ್ಷಿಯಾಗಬಹುದು ಎಂದು ಯುನಿಸೆಫ್ ಎಚ್ಚರಿಸಿದೆ.
ಲ್ಯಾನ್ಸೆಟ್ನಲ್ಲಿ ಪ್ರಕಟವಾದ ಜಾನ್ಸ್ ಹಾಪ್ಕಿನ್ಸ್ ಬ್ಲೂಮ್ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ನ ಸಂಶೋಧಕರ ವಿಶ್ಲೇಷಣೆ ಅಧ್ಯಯನದಲ್ಲಿ ಸೇರಿಸಲಾದ 118 ದೇಶಗಳಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ತಮ್ಮ ಐದನೇ ಹುಟ್ಟುಹಬ್ಬದ ಮೊದಲು ಸಾಯುವ 2.5 ಮಿಲಿಯನ್ ಮಕ್ಕಳು ಹೆಚ್ಚುವರಿಯಾಗಲಿದ್ದಾರೆ.

ಇದರ ಅರ್ಥವೇನೆಂದರೆ, ಅವರ ಐದನೇ ಹುಟ್ಟುಹಬ್ಬದ ಮೊದಲು ಸಾಯುತ್ತಿರುವ ಮಕ್ಕಳ ಜಾಗತಿಕ ಮರಣ ಪ್ರಮಾಣ, ಎಲ್ಲಾ ಜಾಗತಿಕ ಅಭಿವೃದ್ಧಿಯ ಪ್ರಮುಖ ಪ್ರಗತಿ ಸೂಚಕಗಳಲ್ಲಿ ಒಂದಾಗಿದೆ. 1960 ರ ನಂತರ ಮೊದಲ ಬಾರಿಗೆ ಡೇಟಾವನ್ನು ಸಂಗ್ರಹಿಸಿದಾಗ ಸಂಭಾವ್ಯವಾಗಿ ಹೆಚ್ಚಾಗಬಹುದು.
2017 ರಲ್ಲಿ ಭಾರತದಲ್ಲಿ 5 ವರ್ಷ ಒಳಗಿನ 1.04 ಮಿಲಿಯನ್ ಮಕ್ಕಳ ಸಾವುಗಳು ಸಂಭವಿಸಿದೆ. ಅದರಲ್ಲಿ ಸುಮಾರು 50% (0.57 ಮಿಲಿಯನ್) ನವಜಾತ ಶಿಶುಗಳ ಸಾವುಗಳಾಗಿವೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಾವುಗಳು ಉತ್ತರ ಪ್ರದೇಶದಲ್ಲಿ 312,800 ಆದರೆ ಇದರಲ್ಲಿ 165,800 ನವಜಾತ ಶಿಶುಗಳ ಸಾವು ಸೇರಿವೆ. ಬಿಹಾರ 141,500 ರಲ್ಲಿ 75,300 ನವಜಾತ ಶಿಶುಗಳ ಸಾವುಗಳು ಸೇರಿವೆ.


ಕುಟುಂಬ ಯೋಜನೆ, ಪ್ರಸವಪೂರ್ವ ಆರೈಕೆ, ಹೆರಿಗೆ ಆರೈಕೆ, ವ್ಯಾಕ್ಸಿನೇಷನ್ ಮತ್ತು ಬಾಲ್ಯದ ತಡೆಗಟ್ಟುವ ಆರೈಕೆಯಂತಹ ಸೇವೆಗಳನ್ನು ಒದಗಿಸುವಲ್ಲಿ ಎಡವಿರುವುದೇ ಇದಕ್ಕೆ ಕಾರಣ ಎಂದು ಸಂಶೋಧಕರು ಮೂರು ಸನ್ನಿವೇಶಗಳನ್ನು ಗಮನಿಸಿ ಹೇಳಿದ್ದಾರೆ. ಮಕ್ಕಳ ಸಾವಿನ ಅಂಕಿ ಅಂಶವನ್ನು ಮೂರು ತಿಂಗಳು, ಆರು ತಿಂಗಳು ಮತ್ತು 12 ತಿಂಗಳ ಅವಧಿಗೆ ರೂಪಿಸಲಾಗಿದೆ.
ಸನ್ನಿವೇಶ -1 ರಲ್ಲಿ ಎಲ್ಲಾ ಸೇವೆಗಳ ವ್ಯಾಪ್ತಿಯನ್ನು 10-18% ರಷ್ಟು ಕಡಿತಗೊಳಿಸಲಾಗಿದೆ. ಹೆಚ್ಚುವರಿ ಮಕ್ಕಳ ಸಾವಿನ ಸಂಖ್ಯೆ ಮೂರು ತಿಂಗಳ ಅವಧಿಯಲ್ಲಿ 30,000 ಜೊತೆಗೆ, ಆರು ತಿಂಗಳಲ್ಲಿ 60,000 ಕ್ಕಿಂತ ಹೆಚ್ಚು ಮತ್ತು ಮುಂದಿನ 12 ತಿಂಗಳಲ್ಲಿ 120,000 ಕ್ಕಿಂತ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.
ಸನ್ನಿವೇಶ -2 ಕ್ಕೆ ಎಲ್ಲಾ ನಿಯಮಿತ ಸೇವೆಗಳಲ್ಲಿ 18-28% ಕುಸಿತದೊಂದಿಗೆ, ಕ್ರಮವಾಗಿ ಮಕ್ಕಳ ಸಾವಿನ ಸಂಖ್ಯೆ ಮೂರು ತಿಂಗಳ ಅವಧಿ 55,000 ಆರು ತಿಂಗಳಲ್ಲಿ 109,000 ಮತ್ತು 12 ತಿಂಗಳಿಗೆ 219,000 ಏರಿತು.


ಆದರೆ 40-50% ರಷ್ಟು ಸೇವೆಗಳು ಲಭ್ಯವಿಲ್ಲದಿರುವ ಕೆಟ್ಟ ಪರಿಸ್ಥಿತಿಯಲ್ಲಿ, ಮೂರು ತಿಂಗಳ ಅಲ್ಪಾವಧಿಯಲ್ಲಿ ಸಾವುಗಳ ಸಂಖ್ಯೆ 1.5 ಲಕ್ಷಕ್ಕೆ ಏರಿತು.
ಹೀಗೆ ಒಂದು ವರ್ಷದಲ್ಲಿ ಸುಮಾರು ಆರು ಲಕ್ಷ ಹೆಚ್ಚಿನ ಸಂಖ್ಯೆಯ ಮಕ್ಕಳ ಸಾವು ಸಂಭವಿಸುವ ಹತ್ತು ದೇಶಗಳು ಬಾಂಗ್ಲಾದೇಶ, ಬ್ರೆಜಿಲ್, ಕಾಂಗೋ, ಇಥಿಯೋಪಿಯಾ, ಭಾರತ, ಇಂಡೋನೇಷ್ಯಾ, ನೈಜೀರಿಯಾ, ಪಾಕಿಸ್ತಾನ, ಉಗಾಂಡಾ ಮತ್ತು ಟಾಂಜಾನಿಯಾ ಎಂದು ಗುರುತಿಸಲಾಗಿದೆ.
ಈಗಾಗಲೇ ದುರ್ಬಲ ಆರೋಗ್ಯ ವ್ಯವಸ್ಥೆಗಳನ್ನು ಹೊಂದಿರುವ ದೇಶಗಳಲ್ಲಿ, COVID-19 ವೈದ್ಯಕೀಯ ಪೂರೈಕೆ ಸರಪಳಿಗಳಲ್ಲಿ ಅಡ್ಡಿ ಉಂಟುಮಾಡುತ್ತಿದೆ. ಆರ್ಥಿಕ ಮತ್ತು ಮಾನವ ಸಂಪನ್ಮೂಲವನ್ನು ತಗ್ಗಿಸುತ್ತಿದೆ. ಲಾಕ್ಡೌನ್ಗಳು, ಕರ್ಫ್ಯೂಗಳು ಮತ್ತು ಸಾರಿಗೆ ಅಡೆತಡೆಗಳು ಮತ್ತು ಸಮುದಾಯಗಳಲ್ಲಿ ಸೋಂಕಿನ ಭಯದಿಂದಾಗಿ ಆರೋಗ್ಯ ಕೇಂದ್ರಗಳಿಗೆ ಭೇಟಿ ಕಡಿಮೆಯಾಗುತ್ತಿದೆ. ಇಂತಹ ಅಡೆತಡೆಗಳು ತಾಯಿಯ ಮತ್ತು ಮಕ್ಕಳ ಸಾವುಗಳಲ್ಲಿ ವಿನಾಶಕಾರಿ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಯುಎನ್ ಸಂಸ್ಥೆ ಎಚ್ಚರಿಸಿದೆ.

