ಎರಡು ಪ್ರತ್ಯೇಕ ರಸ್ತೆ ಅಪಘಾತ : 14 ಮಂದಿ ವಲಸೆ ಕಾರ್ಮಿಕರು ಸಾವು! :50 ಮಂದಿಗೆ ಗಾಯ
ಕಳೆದ ಆರು ದಿನಗಳ ಹಿಂದೆಯಷ್ಟೇ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಗೂಡ್ಸ್ ರೈಲು ಹಳಿ ಮೇಲೆ ಹರಿದು 16 ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿರುವ ಧಾರುಣ ಘಟನೆ ನಡೆದಿತ್ತು. ಇದರ ಬೆನ್ನಲ್ಲೆ ಕಳೆದ ತಡರಾತ್ರಿ ಮುಜಾಫರ್ ನಗರ-ಶಹರಾನ್ ಪುರ ಹೆದ್ದಾರಿಯಲ್ಲಿ 6 ಮಂದಿ ವಲಸೆ ಕಾರ್ಮಿಕರು ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬರುತ್ತಿದ್ದ ಬಸ್ ಹರಿದು ಮೃತಪಟ್ಟಿದ್ದಾರೆ. ಅನಾಮಧೇಯ ಬಸ್ ಚಾಲಕನ ವಿರುದ್ಧ ಕೇಸು ದಾಖಲಾಗಿದೆ. ಘಲೌಲಿ ಚೆಕ್ ಪೋಸ್ಟ್ ಹತ್ತಿರ ಈ ಘಟನೆ ನಡೆದಿದೆ.
Madhya Pradesh: 8 labourers dead & around 50 injured after the truck they were travelling in, collided with a bus in Cantt PS area in Guna last night. Injured persons shifted to district hospital.All the 8 killed labourers were going to their native places in UP from Maharashtra. pic.twitter.com/OaB9SCLpjY
— ANI (@ANI) May 14, 2020
ಇತ್ತ ಮಧ್ಯಪ್ರದೇಶದ ಗುಣದಲ್ಲಿ ಬುಧವಾರ ರಾತ್ರಿ ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದ ಲಾರಿ ಹಾಗೂ ಬಸ್ಸೊಂದರ ನಡುವೆ ಡಿಕ್ಕಿ ಆಗಿ ಅಪಘಾತಕ್ಕಿಡಾಗಿದೆ. ಈ ಅಪಘಾತದಲ್ಲಿ 8 ಮಂದಿ ಕಾರ್ಮಿಕರು ಮೃತಪಟ್ಟಿದ್ದು, 50 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟ 8 ಮಂದಿ ಉತ್ತರ ಪ್ರದೇಶದವರಾಗಿದ್ದು, ಕೆಲಸ ಅರಸಿ ಮಹಾರಾಷ್ಟ್ರಕ್ಕೆ ಬಂದಿದ್ದರು. ಆದರೆ ಲಾಕ್‍ಡೌನ್ ಪರಿಣಾಮ ಕೆಲಸವಿಲ್ಲದೆ ಕಷ್ಟದಲ್ಲಿದ್ದ ಕಾರ್ಮಿಕರು ತಮ್ಮೂರಿಗೆ ವಾಪಸ್ ತೆರೆಳುತ್ತಿದ್ದರು. ಈ ವೇಳೆ ಗುಣದಲ್ಲಿ ಈ ದುರಂತ ಸಂಭವಿಸಿದೆ.
6 migrant workers who were walking along the Muzaffarnagar-Saharanpur highway killed after a speeding bus ran over them late last night, near Ghalauli check-post. Case registered against unknown bus driver. pic.twitter.com/s81e7gpYkH
— ANI UP (@ANINewsUP) May 14, 2020
ವಲಸೆ ಕಾರ್ಮಿಕರು ಮಾರ್ಗ ಮಧ್ಯೆ ತಮ್ಮೂರಿಗೆ ಹೋಗುತ್ತಿರುವಾಗ ಸಾಯುವ ಪ್ರಕರಣಗಳಲ್ಲಿ ಗೂಡ್ಸ್ ಹಳಿ ಮೇಲೆ ಮಲಗಿದ್ದ 17 ಜನ ಕಾರ್ಮಿಕರ ಸಾವು ಪ್ರಕರಣ ಸೇರಿ ಒಟ್ಟು 31 ಜನ ಈವರೆಗೆಗೆ ತಮ್ಮೂರಿಗೆ ಹೋಗದೇ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

