ಗರ್ಭಿಣಿ ಆನೆಯ ಕೊಲೆ : ಬಂಧಿತ ಆರೋಪಿ ಬಿಚ್ಚಿಟ್ಟ ಸತ್ಯ ಹೇಳಿದ್ರೆ ಶಾಕ್ ಆಗ್ತೀರಾ…!

ಗರ್ಭಿಣಿ ಆನೆಯ ಕೊಲೆಗೆ ಸಂಬಂಧಿಸಿದಂತೆ ಓರ್ವನನ್ನು ಅರಣ್ಯ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆ  ಬಂಧಿತ ಆರೋಪಿ ಕೆಲವು ರೋಚಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾನೆ.

ಹೌದು… ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಮೃತಪಟ್ಟ ಗರ್ಭಿಣಿ ಆನೆ ತೆಂಗಿನಕಾಯಿಯಲ್ಲಿ ತುಂಬಿದ ಸ್ಫೊಟಕಗಳನ್ನು ಸೇವಿಸಿದೆ ಎಂದು ಮನ್ನಾರ್ಕಡ್ ವಿಭಾಗೀಯ ಅರಣ್ಯ ಅಧಿಕಾರಿ ಸುನಿಲ್ ಕುಮಾರ್ ತಿಳಿಸಿದರು. ಈ ವೇಳೆ ಅನೇಕ ವಿಚಾರಗಳು ಹೊರಬಂದಿವೆ.

“ಅಧಿಕಾರಿಗಳು ಸಾಕ್ಷ್ಯ ಸಂಗ್ರಹದ ವೇಳೆ ಬಂಧಿತ ವ್ಯಕ್ತಿ ಸ್ಫೋಟಕಗಳನ್ನು ತಯಾರಿಸಲು ಸಹಾಯ ಮಾಡುತ್ತಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ. ಜೊತೆಗೆ ಬಂಧಿತ ವ್ಯಕ್ತಿಯನ್ನು ಪ್ಲಾಂಟೇಶನ್ ಶೆಡ್ಗೆ ಕರೆದೊಯ್ಯಲಾಯಿತು, ಅಲ್ಲಿ ಅವನಿಗೆ ಕ್ರ್ಯಾಕರ್ ತಯಾರಿಸಲು ಇತರ ಇಬ್ಬರು ಸಹಾಯ ಮಾಡುತ್ತಾರೆ.  ಈ ವಿಚಾರ ತಿಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆಂದು” ಎಂದು ಅರಣ್ಯ ಅಧಿಕಾರಿ ಆಶಿಕ್ ಅಲಿ ಯು ಹೇಳಿದರು.

ಸ್ಥಳೀಯವಾಗಿ ತಯಾರಿಸಿದ ಸ್ಫೋಟಕಗಳನ್ನು ಹಣ್ಣುಗಳು ಅಥವಾ ಪ್ರಾಣಿಗಳ ಕೊಬ್ಬಿನಲ್ಲಿ ಸ್ಥಳೀಯರು ತಮ್ಮ ಉತ್ಪನ್ನಗಳನ್ನು ರಕ್ಷಿಸುವ ಉದ್ದೇಶದಿಂದ ಹಂದಿಗಳಂತಹ ಕಾಡು ಪ್ರಾಣಿಗಳನ್ನು ಹೆದುರಿಸಲು ತುಂಬಿಸುತ್ತಾರೆ.

ಅಧಿಕಾರಿಗಳ ಪ್ರಕಾರ, ಆನೆ ತೆಂಗಿನಕಾಯಿ ತಿನ್ನುವಾಗ ಸ್ಫೋಟಕ ವಸ್ತುವನ್ನು ತಿಂದಿದೆ. ಇದರಿಂದ ಆನೆಯ ಬಾಯಿ ಸಂಪೂರ್ಣವಾಗಿ ಗಾಯಗೊಂಡಿದೆ. ಆನೆ ಬಾಯಿ ತೀವ್ರವಾಗಿ ಗಾಯಗಗೊಂಡು ಕೆಲ ದಿನಗಳು ಕಳೆದಿವೆ. ದಿನಗಟ್ಟಲೆ ತಿನ್ನಲು ಕುಡಿಯಲು ಸಾಧ್ಯವಾಗದೇ ಆನೆ ನರಳಾಡಿದೆ. ಹಸಿವಿನಿಂದ, ಗಾಯದ ನರಳಾಟದಿಂದ ಪಾಲಕ್ಕಾಡ್‌ನ ವೆಲ್ಲಿಯಾರ್ ನದಿಯಲ್ಲಿ ನಿಂತು ಪ್ರಾಣಬಿಟ್ಟಿದೆ ಎಂದಿದ್ದಾರೆ.

ಈ ಪ್ರಾಣಿ 20 ದಿನಗಳ ಹಿಂದೆ ಗಾಯವನ್ನು ಅನುಭವಿಸಿರಬಹುದು ಮತ್ತು ಅಂದಿನಿಂದ ಹಸಿವಿನಿಂದ ಬಳಲುತ್ತಿದೆ ಎಂದು ಅಧಿಕಾರಿಗಳು ಆನೆ ದೇಹಸ್ಥಿತಿಯನ್ನು ನೋಡಿ ಊಹಿಸಿದ್ದಾರೆ.

ಒಟ್ಟಿನಲ್ಲಿ ಗರ್ಭಿಣಿ ಆನೆಯನ್ನು ಕೊಂದವರ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. “ನ್ಯಾಯವು ಮೇಲುಗೈ ಸಾಧಿಸುತ್ತದೆ” ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಟ್ವೀಟ್‌ಗಳಲ್ಲಿ ಭರವಸೆ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights