ಪಿ ಎಂ ಕೇರ್ಸ್ ಪ್ರಶ್ನಿಸಿ ಟ್ವೀಟ್: ಶಿವಮೊಗ್ಗದಲ್ಲಿ ಸೋನಿಯ ಗಾಂಧಿ ವಿರುದ್ಧ ಪ್ರಕರಣ ದಾಖಲು

ಮೇ 11 ರಂದು @INCIndia ಟ್ವಿಟ್ಟರ್ ಖಾತೆಯಿಂದ ಪಿ ಎಂ ಕೇರ್ಸ್ ನಿಧಿಯ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಸೋನಿಯಾ ಗಾಂಧಿ ವಿರುದ್ಧ ಶಿವಮೊಗ್ಗ ಜಿಲೆಯ ಸಾಗರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲಿನ ವಕೀಲ ಕೆ ವಿ ಪ್ರವೀಣ್ ಕುಮಾರ್ ಎಂಬುವವರು ದೂರು ದಾಖಲಿಸಿದ್ದಾರೆ.

“ಪಿ ಎಂ ಕೇರ್ಸ್ ಹೆಸರಿನಲ್ಲಿಯೇ ಇರುವಂತೆ ಇದು ಜನರಿಗಾಗಿ ಇರುವ ನಿಧಿಯಲ್ಲ ಪ್ರಧಾನಿಯವರ ಕೇರ್ ಗಾಗಿ ಇರುವಂತದ್ದು. ಸರ್ಕಾರ ಜನರ ಕೇರ್ ತೆಗೆದುಕೊಂಡಿದ್ದರೆ ಬೀದಿಯಲ್ಲಿ ಇಷ್ಟು ಜನ ವಲಸೆ ಕಾರ್ಮಿಕರು ಸರತಿ ಸಾಲಿನಲ್ಲಿ ನಿಲ್ಲುತ್ತಿರಲಿಲ್ಲ” ಎಂದು ಮೇ 11 ರಂದು ಐ ಎನ್ ಸಿ ಇಂಡಿಯಾ ಖಾತೆ ಟ್ವೀಟ್‌ ಮಾಡಿತ್ತು ಎಂದು ಆರೋಪಿಸಲಾಗಿದೆ.

ಐ ಎನ್ ಸಿ ಇಂಡಿಯಾ ಖಾತೆಯನ್ನು ಹೊಂದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾನ್ಯ ಪ್ರಧಾನಮಂತ್ರಿಗಳು ಪಿ ಎಂ ಕೇರ್ಸ್ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಟ್ವೀಟ್ ಮಾಡಿರುವುದರಿಂದ, ಅವರ, ಅವರ ಕಚೇರಿ ಮತ್ತು ನೌಕರರ ವಿರುದ್ಧ ದೂರು ಕಾನೂನು ಕ್ರಮ ಜರುಗಿಸಲು ಕೋರಿ ದೂರು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಐಪಿಸಿ ಸೆಕ್ಷನ್ 153 ಮತ್ತು 505ರ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights