ಪ್ರಧಾನಮಂತ್ರಿಗಳು ಯಾರಿಗೂ ನಾಮ‌ ಹಾಕಿಲ್ಲ : ಕಾಂಗ್ರೆಸ್ ವಿರುದ್ಧ ಜಿಗಜಿಣಗಿ ವಾಗ್ದಾಳಿ….

ಕಾಂಗ್ರೆಸ್ ವಿರುದ್ಧ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ವಾಗ್ದಾಳಿ ಮಾಡಿದ್ದಾರೆ.

ಪ್ರಧಾನ ಮಂತ್ರಿಗಳ ಬಗ್ಗೆ ಮಾತಾಡುವ ಕಾಂಗ್ರೆಸ್ಸಿಗರೇ ಮೊದಲು ನಿಮ್ಮದು ನೀವು ನೋಡಿಕೊಳ್ಳಿ. ಪ್ರಧಾನಮಂತ್ರಿಗಳು ಯಾರಿಗೂ ನಾಮ‌ ಹಾಕಿಲ್ಲ. ನೀವು ದಡ್ಡರು, ನೀವು ನಾಮ ಹಾಕಿಕೊಂಡಿದ್ದೀರಿ ಎಂದು ಹರಿಹಾಯ್ದಿದ್ದಾರೆ.

ಪ್ರಧಾನಿಗೆ ನಾಮ ಹಾಕುವ ಧೈರ್ಯ ಇದೆಯೇ ನಿಮಗೆ? ಅನರ್ಹರ ತೀರ್ಪು ಬಗ್ಗೆ ತೀರ್ಮಾನ ಪಕ್ಷ ಮಾಡುತ್ತದೆ. ಟಿಕೆಟ್ ಗೊಂದಲ ಎಲ್ಲಾ ಕಡೆನೂ ಇರುತ್ತೆ. ಸಿದ್ಧರಾಮಯ್ಯ ಅವರು ಮತ್ತೊಮ್ಮೆ ಸಿಎಂ ಆಗೋದು ಮರೆತು ಬಿಡಬೇಕು. ಅವರು ಅಹಿಂದ ನಾಯಕ ಎಂದು ಎಲ್ಲರೂ ಅವಕಾಶ ನೀಡಿದರು. ಆದರೆ, ಇದೀಗ ಆ ಭಾವನೆ ಅವರ ಪಕ್ಷದಲ್ಲಿಯೇ ಉಳಿದಿಲ್ಲ. ಆನೆ ಹೋಗುತ್ತೆ, ಹಿಂದೆ ಶ್ವಾನ ಬೆನ್ನು ಹತ್ತುತ್ತೆ. ಹಾಗೆಯೇ, ಈಗ ಬೀಳುತ್ತೆ ಆಗ ಬೀಳುತ್ತೆ ಅಂತ ಕಾಯ್ತಿತ್ತಂತೆ ಹಾಗಾಗಿದೆ ಕಾಂಗ್ರೆಸ್ ಸ್ಥಿತಿ. ಯತ್ನಾಳ ಮಂತ್ರಿ ಆದ್ರೆ ನಾನೇನು ಉಪವಾಸ ಇರ್ತೇವಾ? ಶಾಸಕ ಯತ್ನಾಳ‌ ಮಂತ್ರಿ ಆದ್ರೆ ನಮ್ಮ ಜಿಲ್ಲಾದವರು ಮಂತ್ರಿ ಆಗ್ತಾರೆ ಎಂಬ ಖುಷಿ ನಮಗೂ ಇದೆ. ಅದೆಲ್ಲ ನೀವು ತಲೇಲಿ ಇಟ್ಕೋಬೇಡಿ. ಯತ್ನಾಳಂದು ನಂದು ಜಗಳಾ ತಲೇಲಿ ಇಟ್ಕೋಬೇಡಿ ಎಂದು ಕಿಡಿ ಕಾರಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights