ಪ್ರವಾಸಿಗರನ್ನು ತನ್ನತ್ತಾ ಕೈಬೀಸಿ ಕರೆಯುತ್ತಿದೆ ರಂಗನತಿಟ್ಟು ಪಕ್ಷಿಧಾಮ..

ಸಕ್ಕರೆನಾಡು ಮಂಡ್ಯದ ರಂಗನತಿಟ್ಟು ಪಕ್ಷಿಧಾಮ ಇದೀಗ ಪ್ರವಾಸಿಗರನ್ನು ತನ್ನತ್ತಾ ಕೈಬೀಸಿ ಕರೆಯುತ್ತಿದೆ. ಕಾವೇರಿ ನದಿಯ ಮಡಿಲಲ್ಲಿ ನಿಸರ್ಗದ ಸೊಬಗು ಸವಿಯುತ್ತಾ ಪಕ್ಷಿಗಳ ಕಲರವ ಕೇಳಲು ಪ್ರವಾಸಿಗರು ಪ್ರಸಿದ್ದ ರಂಗನತಿಟ್ಟುಪಕ್ಷಿಧಾಮಕ್ಕೆ ಬರುತ್ತಿದ್ದು,ಪಕ್ಷಿಗಳ ಚಿಲಿಪಿಲಿಯ ಕಲರವ ಕೇಳ್ತಾ ನಿಸರ್ಗದ ರಮ್ಯ ಸೊಬಗನ್ನು ಅನುಭವಿಸುತ್ತಿದ್ದರೆ, ದೂರದೂರದಿಂದ ಪಕ್ಷಿಗಳು ಕೂಡ ರಂಗನತಿಟ್ಟು ಪಕ್ಷಿಧಾಮಕ್ಕೆ ಬಂದು ಗೂಡುಗಟ್ಟಿ ಮರಿಗಳೊಂದಿಗೆ ಚಿಲಿಪಿಲಿಗುಟ್ಟುತ್ತಿವೆ.

ಹೌದು ಸಕ್ಕರೆನಾಡು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರೋ ರಂಗನತಿಟ್ಟು ಪಕ್ಷಿಧಾಮದಕ್ಕೆ ಪ್ರವಾದಿಗರ ಸಂಖ್ಯೆ ಹಡಚ್ಚಾಗ್ತಿದೆ. ಪಕ್ಷಿಧಾಮವನ್ನು ನೋಎಲು ಪ್ರವಾಸಿಗರು ಮುಗೀಬೀಳ್ತಾ ಇದ್ದಾರೆ. ಚಳಿಗಾಲ ಆರಂಭವಾಗಿದ್ದಿ ದೇಶ ವಿದೇಶಗಳಿಂದ ವಿವಿಧ ಪ್ರಭೇಧದ ಪಕ್ಷಿಗಳು ರಂಗನತಿಟ್ಟು ಪಕ್ಷಿಧಾಮಕ್ಕೆ ಆಗಮಿಸುತ್ತಿವೆ. ಸದ್ಯ ಪಕ್ಷಿಧಾಮದಲ್ಲಿ ಸುಮಾರು 2 ಸಾವಿರ ಪಕ್ಷಿಗಳುಗಳಿದ್ದು 50 ಕ್ಕೂ ಮೊಸಳೆಗಳಿವೆ. ಅಲ್ದೆ ಇನ್ನು ಸಾವಿರಾರು ಸಂಖ‍್ಯೆಯಲ್ಲಿ ವಿವಿಧ ಪ್ರಭೇಧದ ಪಕ್ಷಿಗಳು ಇಲ್ಲಿಗೆ ಆಗಮಿಸಲಿವೆ. ಇಲ್ಲಿಗೆ ಬರೋ ಪಕ್ಷಿಗಳ ಕಲವರ ಮತ್ತು ಪಕ್ಷಿಗಳನ್ನು ನೋಡಲು ರಾಜ್ಯ ಮತ್ತು ಹೊರ ರಾಜ್ಯದಿಂದ ಸಾಕಷ್ಟು ಸಂಖ್ಯೆಯ ಪಕ್ಷಿ ಪ್ರಿಯರು ಆಗಮಿಸಿ ಪಕ್ಷಿಗಳನ್ನು ನೋಡಿ ಸಖತ್ತಾಗಿ ಎಂಜಾಯ್ ಮಾಡ್ತಿದ್ದಾರೆ.

ಇನ್ಬು ನವೆಂಬರ್ ತಿಂಗಳಿನಿಂದ ಈ ಪಕ್ಷಿಧಾಮಕ್ಕೆ ಸಾಕಷ್ಟು ಸಂಖ್ಯೆಯ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ.ಇಲ್ಲಿಗೆ ಬರುವ ಪಕ್ಷಿಗಳು ಈ ಸಮಯದಲ್ಲಿ ಬಂದು ಗೂಡು ಕಟ್ಟಿ ಈ ಮೊಟ್ಟೆ ಇಟ್ಟು ಮರಿ ಮಾಡಿ ಆ ಮರಿಗಳಿಗೆ ಹಾರಾಟ ಕಲಿಸಿ ಮತ್ತೆ ತಮ್ಮ ಮೂಲ ಸ‍್ಥಾನಕ್ಕೆ ಕರೆದೊಯ್ಯುತ್ತವೆ. ಸದ್ಯ ಪಕ್ಷಿಧಾಮದಲ್ಲಿ ಪೆಲಿಕಾನ್, ಪೆಂಟೆಂಡ್ ಸ್ಟಾರ್ಕ್, ಓಪನ್ ಬಿಲ್ ಸ್ಟಾರ್ಕ್, ಸ್ಪೂನ್ ಬಿಲ್ ಸ್ಟಾರ್ಕ್ ಆಗಮನವಾಗುತ್ತಿದ್ದು, ಇದೀಗ ಗಣನೀಯವಾಗಿ ಹೆಚ್ಚುತ್ತಿದೆ.

ಈ ಸಾಲಿನಲ್ಲೂ ಕೂಡ ಸುಮಾರು 5 ಸಾವಿರ ಪಕ್ಷಿಗಳು ಆಗಮಿಸುವ ನಿರೀಕ್ಷೆ ಇದ್ದು ಸದ್ಯಇವುಗಳೊಂದಿಗೆ ಪ್ರಸ್ತುತ ಪಕ್ಷಿಧಾಮದಲ್ಲಿ ರಿವರ್‌ಟರ್ನ್, ಸ್ಟೋನ್ ಬರ್ಡ್, ಲವರ್ಬರ್ಡ್ ಸೇರದಂತೆ ಹಾಗೂ ಕೆಲವು ಪೆಲಿಕಾನ್, ನೀರುಕಾಗೆ, ಬಾವಲಿಗಳು ಸಹ ಸಾಮಾನ್ಯ ಕಂಡು ಬರುತ್ತವೆ. ಪ್ರತಿದಿನ ಇಲ್ಲಿರೋ ಪಕ್ಷಿಗಳನ್ನು ನೋಡಲು ಸಾವಿರಾರು ಸಂಖ್ಯೆಯ ಪ್ರವಾಸಿಗರು ಕ್ರಿಸ್ಮಸ್ ಪ್ರಯುಕ್ತ ಇಲ್ಲಿಗೆ ಆಗಮಿಸುತ್ತಿದ್ದು, ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ, ಪ್ರವಾಸಿಗರ ಅನೂಕೂಲಕ್ಕೆ ಹೆಚ್ಚಿನ ದೋಣಿಗಳನ್ನು ಇಲ್ಲಿಗೆ ವ್ಯವಸ್ಥೇ ಮಾಡಿದ್ದು, ಹೊಸದಾಗಿ ಐದಾರು ಬೋಟುಗಳನ್ನು ಕೂಡ ತರಿಸಲಾಗಿದೆ.. ಜೊತೆಗೆ ಪ್ರವಾಸಿಗರ ಸುರಕ್ಷತೆ ಕಡೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.

ಒಟ್ಟಾರೆ ವಿಶ್ವ ಪ್ರಸಿದ್ದ ರಂಗನತಿಟ್ಟು ಪಕ್ಷಿಧಾಮದಲ್ಲಿ ಇದೀಗ ವಿವಿಧ ಬಗೆಯ ಪಕ್ಷಿಗಳ ಕಲವರ ಕೇಳಿ ಬರ್ತಿದ್ದು, ಪ್ರವಾಸಿಗರು ಕೂಡ ಪಕ್ಷಿಗಳ ಕಲರವ ಕೇಳಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾವೇರಿ ನದಿಯ ಪ್ರಕೃತಿ ಸೌಂದರ್ಯ ಸವಿಯುತ್ತಾ ಪಕ್ಷಿಧಾಮದಲ್ಲಿನ ನಿಸರ್ಗದ ಸೊಬಗಿಗೆ ಮಾರು ಹೋಗಿರೋದಂತು ಸುಳ್ಳಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights