ಪ್ರೀತಿಸಿ ಹಾರ ಬದಲಾಯಿಸಿಕೊಂಡವನ ಮನೆ ಎದುರು ರಾತ್ರಿಯಿಡೀ ಕಾದ ಯುವತಿ…!
ಪ್ರೀತಿಸಿ ಹಾರ ಬದಲಾಯಿಸಿಕೊಂಡವನ ಮನೆ ಎದುರು ಯುವತಿ ರಾತ್ರಿಯಿಡೀ ಕಳೆದ ಘಟನೆ ಕೊಪ್ಪಳದ ಕುಕನೂರು ತಾಲೂಕಿನ ಭಾನಾಪುರದಲ್ಲಿ ನಡೆದಿದೆ.
ಶಕುಂತಲಾ ಎಂಬ ಯುವತಿ ವಸಂತ ಎಂಬಾತನನ್ನ ಪ್ರೀತಿಸಿ ಸರ್ವಸ್ವ ಅರ್ಪಿಸಿದ್ದಳು. ಆದರೆ ಮದುವೆಯ ಭರವಸೆ ನೀಡಿದ್ದ ಯುವಕ ನಾಪತ್ತೆಯಾಗಿದ್ದಾನೆ. ಪೊಲೀಸ್ ಅಧಿಕಾರಿಗಳ ಅಣತಿಯಂತೆ ಹಾರ ಬದಲಾಯಿಸಿಕೊಂಡಿದ್ದ ಯುವತಿಯನ್ನು ಮದುವೆ ನೋಂದಣಿ ಮಾಡಿಸಬೇಕೆನ್ನುವಾಗ ಯುವಕನ ನಿರಾಕರಣೆ ಮಾಡಿದ್ದಾನೆ.
ಯುವತಿಯ ಚಾರಿತ್ರ್ಯ ಶಂಕಿಸಿ ತಲೆಮರೆಸಿಕೊಂಡಿರುವ ಯುವಕ ಬಂದು ಕಾರಣ ಹೇಳುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದ ಯುವತಿ ಪಟ್ಟು ಹಿಡಿದಿದ್ದಾಳೆ.

