ಬಾಗಲಕೋಟೆಯಲ್ಲಿಂದು 13 ಕೊರೊನಾ ಕೇಸ್ : ರಾಜ್ಯದಲ್ಲಿ 692ಕ್ಕೇರಿದ ಸೋಂಕಿತರ ಸಂಖ್ಯೆ!
ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವುದು ಕಡಿಮೆಯಾಗುವ ಲಕ್ಷಣಗಳು ಗೋಚರವಾಗುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಇಂದು ಹೊಸದಾಗಿ 19 ಜನರಿಗೆ ಸೋಂಕು ದೃಢಪಟ್ಟಿದೆ.
ಹೌದು… ರಾಜ್ಯದಲ್ಲಿಂದು ಹೊಸದಾಗಿ 19 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು. ಬಾಗಲಕೋಟೆಯಲ್ಲೇ 13 ಕೇಸ್ ದೃಢಪಟ್ಟಿವೆ. ದಕ್ಷಿಣ ಕನ್ನಡ 3, ಬೆಂಗಳೂರು 2, ಕಲಬುರಗಿ 1 ಜನ ಹೊಸದಾಗಿ ಸೋಂಕಿತರಿರುವುದು ದಾಖಲಾಗಿದೆ. p607 ಗರ್ಭಿಣಿಯಿಂದ 12 ಮಂದಿಗೆ ಸೋಂಕು ಹರಡಿದೆ ಎನ್ನಲಾಗಿದೆ. ಗರ್ಭಿಣಿಯ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 13 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 692ಕ್ಕೇರಿಕೆಯಾಗಿದೆ. ಈವರೆಗೆ 345 ಡಿಸ್ಚಾರ್ಜ್ ಆಗಿದ್ದು, 29 ಜನ ಸಾವನ್ನಪ್ಪಿದ್ದಾರೆ.
ಮಂಗಮ್ಮನಪಾಳ್ಯದ ಕೂಲಿ ಕಾರ್ಮಿಕನಿ(ರೋಗಿ ನಂಬರ್ 654)ಗೆ ಸೋಂಕು ತಗುಲಿರೋದು ದೃಢವಾಗ್ತಿದ್ದಂತೆ ಆತನ ಕುಟುಂಬಸ್ಥರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಕಾರ್ಮಿಕನ ಪುತ್ರ ಮತ್ತು ಪತ್ನಿಗೆ ಸೋಂಕು ತಗುಲಿದೆ. ಕಾರ್ಮಿಕನ ಪುತ್ರ ನಗರದಲ್ಲಿ ಡೆಲಿವರಿ ಬಾಯ್ (ರೋಗಿ ನಂಬರ್ 678) ಆಗಿ ಕೆಲಸ ಮಾಡಿಕೊಂಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಇದೀಗ ಆರೋಗ್ಯ ಇಲಾಖೆಗೆ ಡೆಲಿವರಿ ಬಾಯ್ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡೋದು ಮತ್ತು ಆತನ ಸಂಪರ್ಕದಲ್ಲಿರುವ ಜನರನ್ನು ಪತ್ತೆ ಹಚ್ಚೋದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಒಟ್ಟಾರೆಯಾಗಿ ಕೊಡಗು, ಹಾವೇರಿ ತಲಾ ಒಂದು, ಧಾರವಾಡ 10, ಗದಗ 5, ಬೆಂಗಳೂರು 155, ವಿಕ್ಕಬಳ್ಳಾಪುರ 21, ಉಡುಪಿ 3, ದಾವಣಗೆರೆ 44, ಮಂಡ್ಯ 28, , ಮೈಸೂರು 88, ಉತ್ತರ ಕನ್ನಡ 12, ಬಾಗಲಕೋಡೆ 48, ವಿಜಯಪುರ 47, ಬೀದರ್ 22, ದಕ್ಷಿಣ ಕನ್ನಡ 22, ಕಲಬುರಗಿ 64, ತುಮಕೂರು 7, ಬೆಳಗಾವಿ 71, ಬೆಂಗಳೂರು ಗ್ರಾಮಾಂತರ 6, ಬಳ್ಳಾರಿ 14 ಜನ ಸೇರಿ ರಾಜ್ಯದಲ್ಲಿ ಒಟ್ಟು 692 ಸೋಂಕಿತರಿದ್ದಾರೆ.

