ಭೀಕರ ಅಪಘಾತ : ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಮುಗ್ಗರಿಸಿ ಬಿದ್ದ ಲಾರಿ…!

ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದ ಲಾರಿಯೊಂದು ಮುಗ್ಗರಿಸಿ ಬಿದ್ದ ಘಟನೆ ಗದಗ- ಬಾಗಲಕೋಟೆ ರಸ್ತೆಯಲ್ಲಿ ತಡರಾತ್ರಿ ನಡೆದಿದೆ.

ಬಾದಾಮಿ ಪಟ್ಟಣದ ಹೊರವಲಯ ಕೋಣಮ್ಮ ದೇಗುಲದ ಬಳಿಯಿಂದ ಈರುಳ್ಳಿ ತುಂಬಿಕೊಂಡು ಹಾಸನಕ್ಕೆ ಹೊರಟಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿ ಮುಗ್ಗರಿಸಿ ಬಿದ್ದಿದೆ. ಸೂಚನಾ ಫಲಕ,ರಸ್ತೆ ತಿರುವು ಫಲಕ ಹಾಕದಕ್ಕೆ ಅಪಘಾತವಾಗಿದೆ ಎಂದೇಳಲಾಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ದಾವಣಗೆರೆ ಮೂಲದ ಲಾರಿ ಚಾಲಕ ನಿಂಗರಾಜ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights