ಮೊಸರಲ್ಲಿ ಕಲ್ಲಿರುವುದು ಹಗಲಿನಷ್ಟೇ ಸ್ಪಷ್ಟ: ಕೇಂದ್ರದ ವಿರುದ್ಧ ರಮ್ಯಾ
ಮಾಜಿ ಸಂಸದೆ, ಕನ್ನಡ ಚಿತ್ರರಂಗದ ನಟಿ ರಮ್ಯಾ ಅವರು ವರ್ಷದ ಬಳಿಕ ಟ್ವಿಟ್ಟರ್ ಮತ್ತೆ ಪೋಸ್ಟ್ ಹಾಕಿದ್ದು, ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಪ್ರಹಾರ ನಡೆಸಿದ್ದಾರೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಮಾಡಿದ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ರಮ್ಯಾ ಮತ್ತೆ ಟ್ವಿಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಪಿಎಂ ಕೇರ್ಸ್ ನಿಧಿಯ ಸಿಂಧುತ್ವವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದಿದೆ. ಪಿಎಂ ಕೇರ್ಸ್ ಪಂಡ್ನ ಹಣವನ್ನು ಎನ್ಡಿಆರ್ಎಫ್ಗೆ ವರ್ಗಾಯಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಲು ಕೋರ್ಟ್ ನಿರಾಕರಿಸಿದೆ. ಕೋರ್ಟ್ನ ಈ ಸಂದೇಶ ಸ್ಪಷ್ಟವಾಗಿ ಗೊತ್ತಾಗಿರಬೇಕು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ರಮ್ಯಾ, “ಕ್ಲಿಯರ್ ಆ್ಯಸ್ ಬ್ರಾಡ್ಲೈಟ್ – ದಾಲ್ ಮೇ ಡಿಫಿನೆಟ್ಲಿ ಕುಚ್ ಕಾಲಾ ಹೈ” (ಮೊಸರಲ್ಲಿ ಕಲ್ಲು ಇರುವುದು ಹಗಲಿನಷ್ಟೇ ಸ್ಪಷ್ಟವಿದೆ) ಎಂದು ವ್ಯಂಗ್ಯವಾಡಿದ್ದಾರೆ.
Clear as daylight- dal mein definitely kuch kaala hai. https://t.co/dassY9a1El
— Divya Spandana/Ramya (@divyaspandana) August 18, 2020
ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಉಸ್ತುವಾರಿಯಾಗಿದ್ದ ರಮ್ಯಾ, ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಪ್ರಹಾರ ನಡೆಸುವುದರಲ್ಲಿ ಹೆಸರು ವಾಸಿಯಾಗಿದ್ದರು. ಈ ಕಾರಣಕ್ಕಾಗಿಯೇ ಹಲವು ಬಾರಿ ವಿವಾದಕ್ಕೂ ಸಿಲುಕಿಕೊಂಡಿದ್ದರು. ಆದರೆ, ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ರಮ್ಯಾ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಟೀಕಾತ್ಮಕ ಪೋಸ್ಟ್ ಹಾಕುವ ಮೂಲಕ ಟ್ವಿಟರ್‌ಗೆ ಮರಳಿಸಿದ್ದಾರೆ.
ಇತ್ತೀಚೆಗೆ ಫೇಸ್‌ಬುಕ್, ಇನ್ಸ್ಟಾಗ್ರಾಮ್‌ಗಳಲ್ಲಿ ಪೋಸ್ಟ್ ಹಾಕಿದ್ದ ರಮ್ಯಾ, ಅಯೋಧ್ಯೆ ಭೂಮಿಪೂಜೆ ಸಂದರ್ಭದಲ್ಲಿ ಇಡೀ ದೇಶದ ಮಾದರಿಯಾಗುವಂತಹ ಸಂದೇಶ ರವಾನಿಸಿದ್ದರು.
Read Also: ಸಂತಸವು ಮಂದಿರ – ಮಸೀದಿಗಳಲ್ಲಿಲ್ಲ; ಅದು ನಿಮ್ಮೊಳಗೇ ಇದೆ ಇಣುಕಿ ನೋಡಿ: ರಮ್ಯಾ

