‘ಶಾಲೆಗಳನ್ನು ತೆರೆಯಬೇಡಿ’ ಎಂದು ಶಿಕ್ಷಣ ಸಚಿವರಿಗೆ ಮನವಿ ಮಾಡಿದ ಬಾಲೆ!

ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭಿಸುವುದಕ್ಕಾಗಿ ಖಾಸಗಿ ಶಾಲೆಗಳು ತುದಿಗಾಲಲ್ಲಿ ನಿಂತಿವೆ. ಕಾತುರದಲ್ಲಿವೆ ಎಂದ ಮಾತ್ರಕ್ಕೆ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವುದಕ್ಕಾಗಿ ಎಂದೇನೂ ಅಲ್ಲ, ಈ ವರ್ಷದ ತಮ್ಮ ಡೊನೇಷನ್ ಸುಲಿಗಾಗಿ ಅಷ್ಟೇ.

ಈ ನಡುವೆ, ಕರ್ನಾಟಕ ಇಲಾಖೆ ಜುಲೈನಿಂದ ಶಾಲೆಗಳನ್ನು ಆರಂಭಿಸುವುದರ ಬಗ್ಗೆ ಚರ್ಚೆ ನಡೆಸುತ್ತಿದ್ದು, ಜುಲೈನಿಂದ ಶಾಲಾ-ಕಾಲೇಜುಗಳು ಆರಂಭಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.  ಆದರೆ, ರಾಜ್ಯದಲ್ಲಿ ದಿನೇದಿನೇ ಕೊರೊನಾ ಪ್ರಕರಣ ಹೇರಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಕೊರೊನಾ ಮುಕ್ತವಾಗುವವರೆಗೂ ಶಾಲೆಗಳನ್ನು ಆರಂಭಿಸಬೇಡಿ ಎಂದು ಮಕ್ಕಳ ಪೋಷಕರು ಆನ್‌ಲೈನ್‌ ಪಿಟಿಷನ್‌ ಅಭಿಯಾನವನ್ನೇ ಆರಂಭಿಸಿದ್ದಾರೆ. ರಾಜ್ಯದ 5 ಲಕ್ಷಕ್ಕೂ ಹೆಚ್ಚು ಪೋಷಕರು ಶಾಲೆಗಳನ್ನು ಆರಂಭಿಸದಂತೆ ಸರ್ಕಾರಕ್ಕೆ ಒತ್ತಡ ಹೇರುತ್ತಿದ್ದಾರೆ.

ಒಂದೆಡೆ ಪೋಷಕರೇ ಮಕ್ಕಳ ಆರೋಗ್ಯದ ಬಗ್ಗೆ ಗಂಭೀರವಾಗಿದ್ದರೆ, ಇನ್ನೊಂದೆಡೆ ಮಕ್ಕಳು ಕೂಡ ಶಾಲೆಗಳನ್ನು ತೆರೆಯದಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಒಂದು ಪಟ್ಟ ಬಾಲೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರನ್ನು ಎದುಗೊಂಡು ಶಾಲೆಗಳನ್ನು ಕೊರೊನಾ ನಿಲ್ಲುವವರೆಗೂ ತೆರೆಯದಂತೆ ಒತ್ತಾಯಿಸಿದ್ದಾಳೆ.

ಪುಟ್ಟ ಬಾಲೆಯನ್ನು ಎದುರುಗೊಂಡ ಸಂದರ್ಭವನ್ನು ಸುರೇಶ್‌ ಕುಮಾರ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಕೆಯೊಂದಿಗಿನ ಸಂಭಾಷಣೆ ಹೀಗಿದೆ:

‘ನಾನು ವಿಧಾನಸೌಧಕ್ಕೆ ಹೊರಟಿದ್ದೆ. ಈ ಯಂಗ್‌ ಫ್ರೆಂಡ್ ಬಂದು ನನ್ನೆದುರು ನಿಂತಳು. ನಿಮ್ಮನ್ನು ಟಿವಿಯಲ್ಲಿ ನೋಡಿದ್ದೇನೆ ಎಂದಳು. ಈ ಬಾಲೆಯ ಹೆಸರು ಮಹನ್ಯಾ. ಸ್ಕೂಲ್ ಯಾವಾಗ ಪ್ರಾರಂಭ ಮಾಡುತ್ತೀರಾ ಎಂದು ಮಹನ್ಯಾ ಕೇಳಿದಳು. ಯಾವಾಗ ಶುರು ಮಾಡಬೇಕು? ಎಂದು ನಾನು ಮರು ಪ್ರಶ್ನೆ ಹಾಕಿದೆ. ಕೊರೋನಾ ಹೋದ ಮೇಲೆ ಶಾಲೆ ಪುನಾರಂಭ ಮಾಡಿ ಎಂದಳು ಒಂದನೇ ತರಗತಿಯಲ್ಲಿ ಓದುತ್ತಿರುವ ಚಿನ್ನಾರಿ ಮಹನ್ಯಾ. ಆಗ ನಾನು ತುಂಬಾ ದಿನ ಕೊರೋನಾ ಹೋಗದಿದ್ದರೆ ಏನು ಮಾಡೋದು ಎಂದು ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿದ ಮಹನ್ಯಾ, ಇಲ್ಲ. ಕೊರೋನಾ ಹೋದ ಮೇಲೇ ಶಾಲೆ ಓಪನ್ ಮಾಡಿ ಎಂದಳು. ಶಾಲೆ ಓಪನ್ ಮಾಡದಿದ್ದರೆ ನೀನು ಏನು ಮಾಡ್ತೀ ಎಂಬ ನನ್ನ ಪ್ರಶ್ನೆಗೆ ಮನೇಲೇ ಇರುತ್ತೇನೆ. ಟಿವಿ ನೋಡ್ತೀನಿ. ಆಟ ಆಡುತ್ತೇನೆ ಎಂದು ಬೀಗುತ್ತಾ ನುಡಿದಳು ಮಹನ್ಯಾ. ಇವೆಲ್ಲವನ್ನೂ ವಿಡಿಯೋ ಮಾಡಿಕೊಳ್ಳುತ್ತಿದ್ದದ್ದು ದೂರದಲ್ಲಿ ನಿಂತಿದ್ದ ಅವರಮ್ಮ.’

ವಿಧಾನಸೌಧಕ್ಕೆ ಹೊರಟಿದ್ದೆ. ಈ young friend ಬಂದು ನನ್ನೆದುರು ನಿಂತಳು."ನಿಮ್ಮನ್ನು ಟಿವಿ ಯಲ್ಲಿ ನೋಡಿದ್ದೇನೆ" ಎಂದಳು ಮಹನ್ಯಾ ಎಂಬ ಈ…

Posted by Suresh Kumar S on Wednesday, June 3, 2020

ಪುಟ್ಟ ಬಾಲಕಿಯ ಮನವಿಯನ್ನು ಆಲಿಸಿರುವ ಶಿಕ್ಷಣ ಸಚಿವರು ಶಾಲೆಗಳನ್ನು ತೆರೆಯುವ ವಿಚಾರದಲ್ಲಿ ಆತುರದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ಆದರೆ, ಶಾಲೆಗಳು ಯಾವಾಗ ತೆರೆಯುತ್ತವೆ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights