ಶ್ರುತಿ ಹಾಸನ್ ಬಿಚ್ಚಿಟ್ಟ ಎಣ್ಣೆ ಗುಟ್ಟು
ಕೊರೊನಾ ವೈರಸ್ನಿಂದಾಗಿ ದೇಶವೇ ಲಾಕ್ ಆಗಿದೆ. ಒಂದೆಡೆ ಬಡವರು-ಕೂಲಿ ಕಾರ್ಮಿಕರು ಮನೆಗೂ ಹೋಗಲಾರದೆ, ಹೊಟ್ಟೆಗೆ ಆಹಾರವೂ ಇಲ್ಲದೆ ಪರದಾಡುತ್ತಿದ್ದಾರೆ. ಇದೆಲ್ಲದರ ನಡುವೆ ಲಾಕ್ಡೌನ್ ಮಾಡಿದ ಆರಂಭದ ದಿನಗಳಲ್ಲಿ ಕೊರೊನಾ ಸೋಂಕಿಗಿಂತ ಹೆಚ್ಚಾಗಿ ಕುಡಿಯುವ ಚಟ ಅಂಟಿಸಿಕೊಂಡಿದ್ದವೇ ಸಾವನ್ನಪ್ಪಿದ್ದರು. ಇಂದಿಗೂ ಕುಡಿತಕ್ಕೆ ಮದ್ಯ ಸಿಗದೆ ಹಲವಾರು ಜನರು ಚಡಪಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಎಣ್ಣೆ ಗುಟ್ಟು ಬಿಚ್ಚಿಟ್ಟಿದ್ದಾರೆ.
ಶ್ರುತಿ ಹಾಸನ್ ಕೆಲವು ತಿಂಗಳುಗಳಿಗೂ ಮುಂಚೆ ಸಿಕ್ಕಾಪಟ್ಟೆ ಕುಡಿಯುತ್ತಿದ್ದರಂತೆ. ಕುಡಿತವನ್ನೇ ಚಟವನ್ನಾಗಿಸಿಕೊಂಡಿದ್ದ ಶ್ರುತಿ ಹಾಸನ್ ಆರೋಗ್ಯ ಕೆಟ್ಟು ಆಸ್ಪತ್ರೆ ಸೇರಿದ ನಂತರ ತಮ್ಮ ಕುಡಿತಕ್ಕೆ ಫುಲ್ಸ್ಟಾಪ್ ಇಟ್ಟಿದ್ದರಂತೆ. ಕುಡಿತ ಬಿಟ್ಟ ನಂತರ ಅವರ ಲೈಫು ಸಿಕ್ಕಾಪಟ್ಟೆ ಕಲ್ಲರ್ ಫುಲ್ ಆಗಿದೆಯಂತೆ. ಇದಷ್ಟೇ ಅಲ್ಲದೆ, ಶ್ರುತಿ ಹಾಸನ್ ಹಳ್ಳಿಯಲ್ಲಿ ಮಹಿಳೆಯರು ಮದ್ಯೆ ಸೇವಿಸಲು ಕಾರಣವನ್ನು ಸಂಶೋಧಿಸಿದ್ದಾರೆ. ಹಳ್ಳಿಯಲ್ಲಿ ಪುರುಷರು ತಮ್ಮ ಪತ್ನಿಯರಿಗೆ ಜಾಸ್ತಿ ಹೊಡೆಯುತ್ತಾರೆ. ಗಂಡಂದಿರ ಏಟುಗಳನ್ನು ಸಹಿಸಿಕೊಳ್ಳಬೇಕಲ್ಲಾ. ಆ ಕಾರಣಕ್ಕಾಗಿ ಮಹಿಳೆಯರು ಮದ್ಯ ಸೇವಿಸುತ್ತಾರೆ ಎಂದು ಶ್ರುತಿ ಹಾಸನ್ ಹೇಳಿದ್ದಾರೆ.
ಹಳ್ಳಿಗಳಲ್ಲಷ್ಟೇ ಅಲ್ಲ, ಸಿಟಿಗಳಲ್ಲಿಯೂ ಪುರುಷಾಧಿತ್ಯದ ಪರಮಾವಧಿಯನ್ನು ಮೈಗೇರಿಸಿಕೊಂಡಿರುವ ಪುರುಷರು ತಮ್ಮ ಮನೆಯಲ್ಲಿನ ಮಹಿಳೆಯರ ಮೇಲೆ ದರ್ಪ ತೋರುವುದು ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಸಿನಿಮಾ ಸ್ಟಾರ್ಗಳೂ ಹೊರತಾಗಿಲ್ಲ. ಪುರುಷರ ದೌರ್ಜನ್ಯದಿಂದಾಗಿ ಬಳಲುವ ಮಹಿಳೆಯರು ಕುಡಿದು ಮತ್ತಷ್ಟು ಆರೋಗ್ಯ ಕೆಡಿಕೊಳ್ಳಲಾದೀತೆ…..?

