ಸರ್ಕಾರವನ್ನು ಟೀಕಿಸಿದ ಗುಜರಾತ್ ಹೈಕೋರ್ಟ್ ಪೀಠದಲ್ಲಿ ರಾತ್ರೋರಾತ್ರಿ ಬದಲಾವಣೆ

ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸುವುದರಲ್ಲಿ ವಿಫಲವಾಗಿರುವ ಗುಜರಾತ್ ಸರ್ಕಾರವನ್ನು ಟೀಕಿಸಿದ್ದ ಗುಜರಾತ್ ಹೈಕೋರ್ಟ್ ನ ಪೀಠ ಕೆಲವೇ ದಿನಗಳಲ್ಲಿ ಬದಲಾಗಿ ಹೋಗಿದೆ. ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ವಿಕ್ರಮ್ ನಾಥ್ ಅವರು ನೀಡಿರುವ ಆದೇಶದಲ್ಲಿ ನ್ಯಾಯಮೂರ್ತಿ ಜೆ ಬಿ ಪರ್ದಿವಾಲ ಮತ್ತು ನ್ಯಾಯಧೀಶ ಐ ಜೆ ವೋರ ಅವರುಗಳನ್ನು ಒಳಗೊಂಡಿದ್ದ ನ್ಯಾಯಪೀಠಕ್ಕೆ ಈಗ ತಮ್ಮನ್ನು ಮತ್ತು ಜೆ ಬಿ ಪರ್ದಿವಾಲ ಅವರನ್ನು ನೇಮಿಸಿದ್ದಾರೆ.

ಈ ವಾರದ ಮೊದಲಿನಲ್ಲಿ ಅಹಮದಾಬಾದಿನಲ್ಲಿ ಕೋವಿಡ್-19 ಸಂಬಂಧಿ ಸಾವುಗಳ ಸಂಖ್ಯೆ 1000 ಸಾವಿರ ಮುಟ್ಟಿದ ಸಂದರ್ಭದಲ್ಲಿ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಅಹಮದಾಬಾದ್ ನ ಸಿವಿಲ್ ಆಸ್ಪತ್ರೆಯ ಪರಿಸ್ಥಿತಿ ದಯನೀಯವಾಗಿದೆ ಎಂದಿದ್ದ ಕೋರ್ಟ್ ಕೊಟ್ಟಿಗೆಗಳಿಗಿಂತಲೂ ಕಡೆಯಾಗಿದೆ ಎಂದಿತ್ತು. ಅಹಮದಾಬಾದಿನಲ್ಲಿ ಸುಮಾರು 764 ಜನ ಸತ್ತಿದ್ದರೆ, ಈ ಸಿವಿಲ್ ಆಸ್ಪತ್ರೆಯಲ್ಲಿಯೇ ಸುಮಾರು 400 ಜನ ಮೃತಪಟ್ಟಿದ್ದರು.

“ಇವತ್ತಿನ ದಿನದಂತೆ ಸಿವಿಲ್ ಆಸ್ಪತ್ರೆಯ ಪರಿಸ್ಥಿತಿ ದಯನೀಯವಾಗಿದೆ ಎಂದು ತಿಳಿಯಲು ಬಹಳ ನೋವಾಗುತ್ತಿದೆ… ” ಎಂದಿದ್ದ ಕೋರ್ಟ್ ನ ಪೀಠ ಆರೋಗ್ಯ ಸಚಿವ ನಿತಿನ್ ಪಟೇಲ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಜಯಂತಿ ರವಿ ಅವರುಗಳನ್ನು ಆಸ್ಪತ್ರೆಗಳ ಕಳಪೆ ಸೌಲಭ್ಯಗಳ ಬಗ್ಗೆ ತರಾಟೆಗೆ ತೆಗೆದುಕೊಂಡಿತ್ತು.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights