ಸೋಮವಾರದಿಂದ ವಿಮಾನಯಾನ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧಾರ!
ಕೊರೊನಾ ಕಾರಣಕ್ಕೆ ಹಾಕಲಾಗಿದ್ದ ಲಾಕ್ಡೌನ್ನಿಂದಾಗಿ ಸ್ಥಗಿತಗೊಂಡಿದ್ದ ದೇಶೀಯ ನಾಗರಿಕ ವಿಮಾನ ಯಾನಗಳು ಸೋಮವಾರದಿಂದ ಪುನರಾರಂಭಗೊಳ್ಳಲಿವೆ ಎಂದು ಕೇಂದ್ರ ಸರ್ಕಾರ ಇಂದು ತಿಳಿಸಿದೆ.
ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
Domestic civil aviation operations will recommence in a calibrated manner from Monday 25th May 2020.
All airports & air carriers are being informed to be ready for operations from 25th May.
SOPs for passenger movement are also being separately issued by @MoCA_GoI.
— Hardeep Singh Puri (@HardeepSPuri) May 20, 2020
“ದೇಶೀಯ ನಾಗರಿಕ ವಿಮಾನಯಾನ ಕಾರ್ಯಾಚರಣೆಗಳು 2020 ರ ಮೇ 25 ರಿಂದ ಸೋಮವಾರ ಮಾಪನಾಂಕ ವಿಧಾನದ ರೀತಿಯಲ್ಲಿ ಪುನರಾರಂಭಗೊಳ್ಳಲಿವೆ. ಎಲ್ಲಾ ವಿಮಾನ ನಿಲ್ದಾಣಗಳು ಮತ್ತು ವಾಯುಯಾನ ಸಂಸ್ಥೆಗಳು ಮೇ 25 ರಿಂದ ಕಾರ್ಯಾಚರಣೆಗೆ ಸಿದ್ಧವಾಗುವಂತೆ ತಿಳಿಸಲಾಗುತ್ತಿದೆ“ ಎಂದು ಸಚಿವರು ಹೇಳಿದ್ದಾರೆ.
ಪ್ರಯಾಣಿಕರ ಸಂಚಾರಕ್ಕಾಗಿ ಎಸ್ಒಪಿಗಳನ್ನು ಪ್ರತ್ಯೇಕವಾಗಿ ಸಚಿವಾಲಯ ನೀಡುತ್ತಿದೆ ಎಂದು ಅವರು ಟ್ವಿಟ್ಟರಿನಲ್ಲಿ ಹೇಳಿದ್ದಾರೆ.
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಾಗ ಮಾರ್ಚ್ ಅಂತ್ಯದಲ್ಲಿ ವಿಮಾನ ಯಾನಗಳನ್ನು ಕೂಡಾ ನಿಲ್ಲಿಸಲಾಗಿತ್ತು.

