ಹಸಮಣೆ ಏರಿದ ಕಾಮಿಡಿ ಕಿಲಾಡಿ ರನ್ನರ್ ಅಪ್ ತುಕಾಲಿ ಸ್ಟಾರ್ ಸಂತು…
ಕಾಮಿಡಿ ಕಿಲಾಡಿಗಳು ಸೀಸನ್ ಮೂರರ ರನ್ನರ್ ಅಪ್ ಆಗಿ ಹೊರಬಂದ ತುಕಾಲಿ ಸ್ಟಾರ್ ಸಂತು ಎಂದೇ ಖ್ಯಾತಿ ಪಡೆದಿದ್ದ ಸಂತೋಷ್ ಅವರು ಲಾಕ್ ಡೌನ್ ನಡುವೆಯೂ ಮದುವೆಯಾಗಿದ್ದಾರೆ.


ಹೌದು… ದೇಶಾದ್ಯಂತ ಲಾಕ್ ಡೌನ್ ಇರುವುದಿರಂದ ಯಾವುದೇ ಮದುವೆಗಳು ನಡೆಯುತ್ತಿಲ್ಲ. ಈಗಾಗಲೇ ನಿಗದಿ ಆಗಿರುವ ಕೆಲ ಮದುವೆಗಳು ಸರಳವಾಗಿ ಹತ್ತು ಇಪ್ಪತ್ತು ಜನರ ನಡುವೆ ಅನುಮತಿ ಪಡೆದು ನಡೆಯುತ್ತಿವೆ. ಹೀಗೆ ನಡೆದ ಮದುವೆಗಳಲ್ಲಿ ಕಾಮಿಡಿ ಕಿಲಾಡಿ ಸಂತೋಷ್ ಮದುವೆ ಕೂಡ ಒಂದು.ಲಾಕ್ ಡೌನ್ ಇರುವ ಕಾರಣ ಅನುಮತಿ ಪಡೆದು ಸರಳವಾಗಿ 20 ಜನರ ಸಮ್ಮುಖದಲ್ಲಿ ಏ.10ರ ರಂದು ಮದುವೆ ನಡೆಯಿತು.


ಕನ್ನಡದ 12 ಸಿನಿಮಾಗಳಲ್ಲಿ ನಟನೆ ಮಾಡಿದ ಸಂತೋಷ್ ಕಲರ್ ಕನ್ನಡ ವಾಹಿನಿ ಮಜಾಭಾರತ ಹಾಗೂ ಜೀ ಟಿವಿಯ ಕಾಮಿಡಿ ಕಿಲಾಡಿ ಕಾರ್ಯಕ್ರಮದ ಮೂಲಕ ಮನೆ ಮಾತಾಗಿದ್ದಾರೆ. ಸಂತೋಷ್ ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸಿಪುರ ತಾಲೂಕಿನ ಉದ್ದೂರು ಹೊಸಹಳ್ಳಿ. ಸರಳ ವಿವಾಹದ ಮೂಲಕ ಸಂತೋಷ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಜೊತೆಗೆ ಲಾಕ್ ಡೌನ್ ಇರುವುದರಿಂದ ಎಲ್ಲರನ್ನು ಮದುವೆಗೆ ಕರಿಯಲು ಸಾಧ್ಯವಾಗಿಲ್ಲ ಎಂದು ಸೋಷಿಯಲ್ ಮಿಡಿಯಾದಲ್ಲಿ ಕ್ಷಮೆ ಕೇಳಿದ್ದಾರೆ. ಕಾಮಿಡಿ ಕಿಲಾಡಿಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಕೋರಿದ್ದಾರೆ.

