ಮಗಳ ಹತ್ಯೆಗೆ ಸುಪಾರಿ ಕೊಟ್ಟ ತಾಯಿ : ಆರೋಪಿಯಿಂದ ಬಯಲಾಯ್ತು ಕಹಿ ಸತ್ಯ!

ತಾಯಿಯೊಬ್ಬಳು ಮಗಳನ್ನು ಕೊಲ್ಲಲು 50,000 ರೂ, ಸುಪಾರಿ ಕೊಟ್ಟ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.

58 ವರ್ಷದ ಸುಕುರಿ ಗಿರಿ ಪುತ್ರಿ ಶಿಬಾನಿ ನಾಯಕ್ (36) ಹತ್ಯೆಗೆ ಪ್ರಮೋದ್ ಜೆನಾ (32) ಸೇರಿದಂತೆ ಇತರ ಇಬ್ಬರನ್ನು ನೇಮಿಸಿಕೊಂಡಿದ್ದಾಳೆ. ಸಾಲದಕ್ಕೆ ಮಗಳನ್ನು ಕೊಲ್ಲಲು 50,000 ಸುಪಾರಿ ಕೊಟ್ಟಿದ್ದಾಳೆ. ಪ್ರಾಥಮಿಕ ತನಿಖೆಯಲ್ಲಿ ಸುಕಿರಿ ಗಿರಿ ಅವರ ಪುತ್ರಿ ಶಿಬಾನಿ ನಾಯಕ್ (36) ಅಕ್ರಮ ಮದ್ಯ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರಿಂದ ಅವರ ಇಬ್ಬರ ಮಧ್ಯೆ ಮನಸ್ತಾಪಗಳಿದ್ದವು.

ತನ್ನ ಮಗಳನ್ನು ಅಕ್ರಮ ಮದ್ಯ ವ್ಯಾಪಾರದಿಂದ ತಡೆಯಲು ಸುಕುರಿ ಗಿರಿ ಮಾಡಿದ ಪ್ರಯತ್ನಗಳು ಯಾವುದೇ ಫಲಿತಾಂಶವನ್ನು ನೀಡಲು ವಿಫಲವಾದ ಕಾರಣ, ತನ್ನ ಮಗಳ ಹತ್ಯೆಗೆ ಮುಂದಾಗಿದ್ದಾಳೆ. ಈ ವೇಳೆ ಪ್ರಮೋದ್ ಜೆನಾನನ್ನು ಸಂಪರ್ಕಿಸಿದ್ದಾಳೆ ಮತ್ತು 50,000 ಕ್ಕೆ ಒಪ್ಪಂದವನ್ನು ಅಂತಿಮಗೊಳಿಸಿಕೊಂಡಿದ್ದಳು.

ಕೊಲೆಗಾರನಿಗೆ ತಾಯಿ ಸುಕುರಿ ಗಿರಿ 8,000 ಮುಂಗಡ ಹಣ ನೀಡಿದ್ದರು. ಒಪ್ಪಂದದಂತೆ ಶಿಬಾನಿ ನಾಯಕ್ ಅವರನ್ನು ಜನವರಿ 12 ರಂದು ಮಾರಕವಸ್ತುಗಳಿಂದ ಕೊಲ್ಲಲಾಯಿತು. ಶಿಬಾನಿ ಮೃತ ದೇಹವನ್ನು ನಾಗ್ರಾಮ್ ಗ್ರಾಮದ ಸೇತುವೆಯೊಂದರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಪ್ರಮೋದ್ ಜೆನಾ ನನ್ನೂ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಪ್ರವಾಶ್ ಪಾಲ್ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights