ಕೈ ಮುಖ್ಯಸ್ಥ ಪಿಜುಶ್ ಮೇಲಿನ ದಾಳಿ ಖಂಡಿಸಿ ತ್ರಿಪುರದಲ್ಲಿ 12 ಗಂಟೆಗಳ ಕಾಲ ಬಂದ್ ಗೆ ಕರೆ..!

ತ್ರಿಪುರ ಕಾಂಗ್ರೆಸ್ ಮುಖ್ಯಸ್ಥ ಪಿಜುಶ್ ಬಿಸ್ವಾಸ್ ಅವರ ವಾಹನದ ಮೇಲೆ ಭಾನುವಾರ ಬೆಳಗ್ಗೆ ದಾಳಿ ನಡೆದಿದ್ದರ ಹಿನ್ನೆಲೆ 12 ಗಂಟೆಗಳ ಬಂದ್ ಗೆ ಕಾಂಗ್ರೆಸ್ ಕರೆ ಕೊಟ್ಟಿದೆ.

ಭಾನುವಾರ ಬೆಳಿಗ್ಗೆ ರಾಜ್ಯ ರಾಜಧಾನಿ ಅಗರ್ತಲಾದಿಂದ 20 ಕಿ.ಮೀ ದೂರದಲ್ಲಿರುವ ಬಿಶಾಲ್ಗಢದ ಕಾಂಗ್ರೆಸ್ ಕ್ಷೇತ್ರ ಕಚೇರಿಯ ಹೊರಗೆ ಈ ದಾಳಿ ಮಾಡಲಾಗಿದೆ. ಕಾರು ಮುಂಭಾಗದ ವಿಂಡೋಶೀಲ್ಡ್ ಬಿರುಕುಗೊಂಡು ಕಾರಿನ ಗಾಜು ಚೂರುಚೂರಾಗಿವೆ. ಮುರಿದ ಗಾಜಿನ ಚೂರುಗಳು ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಬಿದ್ದಿವೆ. ಈ ಘಟನೆಯಲ್ಲಿ ಹಲವು ಕಾಂಗ್ರೆಸ್ ಕಾರ್ಯಕರ್ತರು ಗಾಯಗೊಂಡಿದ್ದಾರೆ, ಹಾಗೆಯೇ ಮಧ್ಯಪ್ರವೇಶಿಸಲು ಪ್ರಯತ್ನಿಸಿದ ಪೊಲೀಸರು ಸಹ ಗಾಯಗಳಾಗಿವೆ. ರಾಜ್ಯದಲ್ಲಿ ಬಿಜೆಪಿ ಬೆಂಬಲಿಗರು ಈ ದಾಳಿಯನ್ನು ಮಾಡಿದ್ದಾರೆಂದು ಆರೋಪಿಸಿ ಪ್ರತಿಭಟಿಸಲು ತ್ರಿಪುರದ ಕಾಂಗ್ರೆಸ್ ಕಾರ್ಯಕರ್ತರು 12 ಗಂಟೆಗಳ ಕಾಲ ಸ್ಥಗಿತಗೊಳಿಸಿದೆ. ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಪಿಜುಶ್ ಬಿಸ್ವಾಸ್ ಅವರ ವಾಹನದ ಮೇಲೆ ಹಲ್ಲೆ ನಡೆಸಿದ ನಂತರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಈ ಬಿಗ್ಗೆ ಮಾತನಾಡಿದ ಬಿಸ್ವಾಸ್, “ನನ್ನನ್ನು ಕೊಲ್ಲುವ ಉದ್ದೇಶದಿಂದ ಬಿಜೆಪಿಯ ಸಶಸ್ತ್ರ ಗೂಂಡಾಗಳ ಗುಂಪು ನನ್ನ ಮೇಲೆ ಮತ್ತು ನನ್ನ ಪಕ್ಷದ ಸಹೋದ್ಯೋಗಿಗಳ ಮೇಲೆ ಹಲ್ಲೆ ನಡೆಸಿತು. ಪೊಲೀಸರು ಸ್ಥಳದಲ್ಲಿದ್ದರು ಆದರೆ ಮೂಕ ಪ್ರೇಕ್ಷಕರಾಗಿದ್ದರು. ಬಿಜೆಪಿ ಕಾರ್ಯಕರ್ತರು ನನ್ನ ಕಾರನ್ನು ಧ್ವಂಸಗೊಳಿಸಿದ್ದಾರೆ. ನನ್ನನ್ನು, ನನ್ನ ಚಾಲಕ ಮತ್ತು ಇತರ ಐದು ಕಾಂಗ್ರೆಸ್ ಅನ್ನು ಗಂಭೀರವಾಗಿ ಗಾಯಗೊಳಿಸಿದ್ದಾರೆ ” ಎಂದು ತಿಳಿಸಿದರು.

ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಈ ದಾಳಿಯನ್ನು ಖಂಡಿಸಿದ್ದು, ಘಟನೆಯ ಬಗ್ಗೆ ತನಿಖೆಗೆ ಒತ್ತಾಯಿಸಿದೆ. ರಾಜ್ಯ ಕಾಂಗ್ರೆಸ್ ಮುಖ್ಯಸ್ಥರ ಮೇಲಿನ ಹಲ್ಲೆ ಪಕ್ಷದೊಳಗಿನ “ಆಂತರಿಕ ಹೋರಾಟ” ದ ಪರಿಣಾಮವಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ. “ನಮ್ಮ ಪಕ್ಷವು ರಾಜಕೀಯ ಹಿಂಸಾಚಾರವನ್ನು ನಂಬುವುದಿಲ್ಲ. ನಮ್ಮ ಕಾರ್ಯಕರ್ತರು ಈ ಘಟನೆಯಲ್ಲಿ ಭಾಗಿಯಾಗಿಲ್ಲ” ಎಂದು ಬಿಜೆಪಿ ವಕ್ತಾರ ನಬೆಂಡು ಭಟ್ಟಾಚಾರ್ಯ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights