ಫ್ಯಾಕ್ಟ್‌ಚೆಕ್: ಹಿಮಾಲಯನ್ ಗ್ರಿಫನ್ ರಣಹದ್ದು ಪತ್ತೆಯಾಗಿದ್ದು ಇದೇ ಮೊದಲಲ್ಲ

ರಾಮಾಯಣದ ಜಟಾಯು (ಪೌರಾಣಿಕ ಪಕ್ಷಿ) ಪ್ರಪ್ರಥಮ ಬಾರಿಗೆ ಕಲಿಯುಗದಲ್ಲಿ ಜೀವಂತವಾಗಿ ಪತ್ತೆಯಾಗಿದ್ದು, ಉತ್ತರ ಪ್ರದೇಶದ ಕಾನ್ಪುರದಲ್ಲಿ ದರ್ಶನ ನೀಡಿದೆ ಎಂಬ ಹೇಳಿಕೆಯೊಂದಿಗೆ ಜನರ ಗುಂಪಿನಿಂದ ಸುತ್ತುವರಿದಿರುವ ಬೃಹತ್ ರಣಹದ್ದಿನ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಸಂಬಂಧಿತ ಕೀವರ್ಡ್‌ಗಳೊಂದಿಗೆ ಸರ್ಚ್ ಮಾಡಿದಾಗ, ಕಾನ್ಪುರದಲ್ಲಿ 09 ಜನವರಿ 2023 ರಂದು ಹಿಮಾಲಯನ್ ಗ್ರಿಫನ್ ರಣಹದ್ದು ರಕ್ಷಿಸಿದ್ದ  ಸ್ಥಳೀಯರು  ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ ಎಂದು ANI ವರದಿ ಮಾಡಿದೆ. ಪ್ರಸ್ತುತ, ಈ ಪಕ್ಷಿಯನ್ನು ಅಲೆನ್‌ನಲ್ಲಿ ಪಶುವೈದ್ಯರ ತಂಡವು ಫಾರೆಸ್ಟ್ ಮೃಗಾಲಯದ ಪಶುವೈದ್ಯಕೀಯ ಆಸ್ಪತ್ರೆ, ಮೇಲ್ವಿಚಾರಣೆ ಮಾಡುತ್ತಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಆದರೆ, ಹಿಮಾಲಯನ್ ಗ್ರಿಫನ್ ರಣಹದ್ದು ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ 2016ರಲ್ಲಿ ಕಾಶ್ಮೀರದ ದಾಲ್ ಸರೋವರದ ದಡದಲ್ಲಿ ಇದೇ ಜಾತಿಗೆ ಸೇರಿದ (ಜಿ. ಹಿಮಾಲಯನ್ಸಿಸ್) ರಣಹದ್ದನ್ನು ರಕ್ಷಿಸಲಾಗಿತ್ತು. ಅಂತೆಯೇ, 2018, 2020 ಮತ್ತು 2021 ರಲ್ಲಿ, ಈ ರಣಹದ್ದುಗಳು ಕ್ರಮವಾಗಿ ತಮಿಳುನಾಡು, ಸಿಂಗಾಪುರ ಮತ್ತು ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡವು. ಇದಲ್ಲದೆ, 2016 ರಲ್ಲಿ, ಹರಿಯಾಣದ ಪಿಂಜೋರ್‌ನಲ್ಲಿರುವ ರಣಹದ್ದು-ಸಂತಾನೋತ್ಪತ್ತಿ ಕೇಂದ್ರವು ಈ ರಣಹದ್ದುಗಳ ಜೋಡಿಯನ್ನು 10 ವರ್ಷಗಳ ಕಾಲ ಪೋಷಿಸಿದ ನಂತರ ಮೊದಲ ಬಾರಿಗೆ ಕಾಡಿಗೆ ಬಿಡುಗಡೆ ಮಾಡಿತು.

ಒಟ್ಟಾರೆಯಾಗಿ ಹೇಳುವುದಾದರೆ, ಹಿಮಾಲಯನ್ ಗ್ರಿಫನ್ ರಣಹದ್ದು ಜೀವಂತವಾಗಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ, ರಣಹದ್ದುಗಳನ್ನು ಸಾರ್ವಜನಿಕರು ಗುರುತಿಸಿ ರಕ್ಷಿಸಿದ ಹಲವಾರು ನಿದರ್ಶನಗಳಿವೆ. ಈಗ ಪತ್ತೆಯಾದ ಹಿಮಾಲಯನ್ ಗ್ರಿಫನ್ ರಣಹದ್ದನ್ನು  ರಾಮಾಯಣದ ಜಟಾಯು (ಪೌರಾಣಿಕ ಪಕ್ಷಿ) ಪ್ರಪ್ರಥಮ ಬಾರಿಗೆ ಕಲಿಯುಗದಲ್ಲಿ ಜೀವಂತವಾಗಿ ಪತ್ತೆಯಾಗಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ‘ನಾರಿಲತಾ’ ಸ್ತ್ರೀ ರೂಪದ ಹೂವು ಅಸ್ಥಿತ್ವದಲ್ಲಿ ಇದೆಯೇ? ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights