ಫ್ಯಾಕ್ಟ್‌ಚೆಕ್: ‘ನಾರಿಲತಾ’ ಸ್ತ್ರೀ ರೂಪದ ಹೂವು ಅಸ್ಥಿತ್ವದಲ್ಲಿ ಇದೆಯೇ? ಈ ಸ್ಟೋರಿ ಓದಿ

“ನಾರಿಲತಾ” ಎಂಬ ಹೂವಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಹಿಮಾಲಯದ ತಪ್ಪಲಿನಲ್ಲಿ ಕಂಡುಬರುವ ಈ ಹೂವು ಮಹಿಳೆಯ ಆಕಾರದಲ್ಲಿ 20ವರ್ಷಗಳಿಗೊಮ್ಮೆ ಅರಳುತ್ತದೆ ಎಂದು ಪ್ರತಿಪಾದಿಸಿ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಪ್ರಸಾರವಾಗುತ್ತಿದೆ.

Parvathi Muthu on Twitter: "amazing flower narilatha flower ladies type  flower https://t.co/qQlbVgMLu9" / Twitter
ಸಾಮಾಜಿಕ ಮಾಧ್ಯಮದ ಬಳಕೆದಾರರಾದ ಮಂಜುನಾಥ್‌ಗೌಡ ಪಾಟೀಲ್‌ ಎಂಬುವರು ವೈರಲ್‌ ಫೋಟೋವನ್ನು ಪಠ್ಯದೊಂದಿಗೆ ಹಂಚಿಕೊಂಡಿದ್ದಾರೆ.  ಪಠ್ಯ ಈ ರೀತಿ ಇದೆ.

“ನಾರಿಲತಾ” ಹೆಸರಿಗೆ ತಕ್ಕಂತೆ ನಾರಿಯ ಅಥವಾ ಸ್ತ್ರೀಯ ರೂಪವನ್ನು ಹೋಲುವ ಹೂವು ಇದಾಗಿದೆ. ಸಾಕ್ಷಾತ್ ಸ್ತ್ರೀ ಸ್ವರೂಪವನ್ನೆ ಹೊಂದಿರುವ ಈ ಹೂವನ್ನು ನೋಡಿದಾಗ ಆಶ್ಚರ್ಯವೆನಿಸುತ್ತದೆ.ಇಂಥದ್ದೊಂದು ಹೂವಿದೆಯಾ? ಎಂಬ ಅನುಮಾನವು ಮೂಡುತ್ತದೆ.

” ನಾರಿಲತಾ” ಭಾರತದ ಹಿಮಾಲಯ,ಶ್ರೀಲಂಕಾ ಮತ್ತು ಥಾಯ್ಲೆಂಡಿನಲ್ಲಿ ಕಂಡು ಬರುತ್ತದೆ. ಬೆತ್ತಲೆ ಮಹಿಳೆಯ ಆಕಾರವನ್ನು ಹೋಲುವ ನಾರಿಲತಾ ಹೂವು ಬಹಳ ಅಪರೂಪದ್ದಾಗಿದೆ. ನಾರಿಲತಾ ಪ್ರತಿ ೨೦ ವರ್ಷಗಳ ಅಂತರದಲ್ಲಿ ಅರಳುತ್ತದೆ. ಸಂನ್ಯಾಸಿಗಳಂತೆ ಕಾಣುವ ಈ ಹೂವುಗಳನ್ನು ನೋಡುವಾಗ ದೃಷ್ಟಿಯು ಬದಲಾಗುವುದಿಲ್ಲ.ಮನಸ್ಸಿಗೆ ಒಂದು ಕ್ಷಣ ಮುದವೆನಿಸುತ್ತದೆ. ವಾವ್! ಎನಿಸುತ್ತಾ ಹೂ ಬಗ್ಗೆ ರೋಚಕತೆ ಮೂಡುತ್ತದೆ. ಎರಡು ದಶಕಗಳಿಗೊಮ್ಮೆ ಅರಳುವ ಈ ಹೂವು ಆರ್ಕಿಡ್ ಕುಟುಂಬಕ್ಕೆ ಸೇರಿದೆ. ಇದು ಹಬೇನೆರಿಯಾ ಎಂಬ ಸಣ್ಣ ಸಂಕುಲದ ಅಡಿಯಲ್ಲಿ ಬರುತ್ತದೆ. ಅಲ್ಲದೆ ಸುಮಾರು ಹತ್ತು ಹಬೇನೇರಿಯಾ ಜಾತಿಯ ಸಸ್ಯ ಗಡ್ಡೆಗಳು ಎಲ್ಲಾ ಹಬೇನೆರಿಯಾ ಮತ್ತು ಟೆರೆಸ್ಟ್ರೀಯಲ್ ಆರ್ಕಿಡ್ಗಳು ಆಗಿವೆ.

ಈ ಸಸ್ಯವನ್ನು ನೋಡಿದ ಸಾಮಾಜಿಕ ಮಾಧ್ಯಮದ ಬಳಕೆದಾರರು ಆಶ್ಚರ್ಯಗೊಂಡಿದ್ದಾರೆ. ನಿಜವಾಗಿಯೂ ಇಂತಹ ಹೂವು ಇದೆಯೇ ಎಂದು ನಿಬ್ಬೆರೆಗಾಗಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ವಿನಂತಿಸಿದ್ದಾರೆ. ಹಾಗಿದ್ದರೆ ಈ ಹೂವಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕೆಲವು ವೆಬ್‌ಸೈಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ನಾರಿಲತಾ ಎಂದು ಕರೆಯಲ್ಪಡುವ ಮಹಿಳೆಯ ಆಕಾರದ ಹೂವನ್ನು ನೀವು ಆನ್‌ಲೈನ್‌ನಲ್ಲಿ ನೋಡಿದಾಗ, ವಾವ್ ಎನ್ನದೇ ಇರಲು ಸಾಧ್ಯವೇ ಇಲ್ಲ. ಈ ಹೂವನ್ನು ಹೇಗೆ ಪಡೆಯಬಹುದು ಎಂದು ಯೋಚನೆಗೆ ಒಳಗಾಗಿರುತ್ತೀರಿ.ಆದರೆ ಇದು ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ? ಎಂದು ಪರಿಶೀಲಿಸಿದಾಗ ಅನೇಕ ವೆಬ್‌ಸೈಟ್‌ಗಳಲ್ಲಿನ ಮಾಹಿತಿಯು ಈ ವಿಷಯದ ಬಗ್ಗೆ ತಪ್ಪುದಾರಿಗೆಳೆಯುತ್ತಿದೆ ಎಂದು ತಿಳಿದು ಬಂದಿದೆ.

ಪ್ರಕೃತಿಯು ನಮಗೆ ಸಾಕಷ್ಟು ಸುಂದರವಾದ ಸಸ್ಯಗಳು ಮತ್ತು ಹೂವುಗಳನ್ನು ನೀಡಿದೆ. ಅದನ್ನು ನೋಡಿ ಸಂತಸ ಪಡಬೇಕು. ಕೆಲವು ನಿಜವಾಗಿಯೂ ಅನನ್ಯವಾಗಿವೆ. ಆದರೆ ಕೆಲವರು ಜನಪ್ರಿಯತೆಯನ್ನು ಗಳಿಸಲು ಕೆಲವನ್ನು ಫೋಟೋಶಾಪ್‌ನಿಂದ ರಚಿಸುತ್ತಾರೆ. ಅಂತಹ ರಚನೆಗೆ ಒಂದು ಉದಾಹರಣೆ ನಾರಿಲತಾ ಹೂವು. ಇಲ್ಲದ ಹೂಗಳನ್ನು ಇದೆ ಎಂಬುದಾಗಿ ಚಿತ್ರಿಸಿ ಜನರನ್ನು ತಪ್ಪುದಾರಿಗೆಳೆಯಬಾರದು ಎಂದು mavcure.com ವರದಿ ಮಾಡಿದೆ.

Narilatha : Is This Really Exist ?Find Out

ವೆಬ್‌ನಲ್ಲಿ ನೀಡಲಾದ ಮಾಹಿತಿಯು ಭಾರತದಲ್ಲಿ ಹಿಮಾಲಯದಲ್ಲಿ ಬೆಳೆಯುತ್ತದೆ ಮತ್ತು 20 ವರ್ಷಗಳ ಮಧ್ಯಂತರದಲ್ಲಿ ಅರಳುತ್ತದೆ ಎಂದು ಸೂಚಿಸುತ್ತದೆ. ಅವುಗಳನ್ನು ವಿಶ್ವದ ಅತ್ಯಂತ ಅಪರೂಪದ ಹೂವು ಎಂದು ಪರಿಗಣಿಸಲಾಗಿದೆ ಎಂದು ಉಲ್ಲೇಖಿಸುತ್ತದೆ. ಆದರೆ ಈ ಸಸ್ಯವು ಹಿಮಾಲಯ ಪ್ರದೇಶದಲ್ಲಿ ಅಸ್ತಿತ್ವದಲ್ಲಿಲ್ಲ ಮತ್ತು ಜನಪ್ರಿಯತೆಯನ್ನು ಗಳಿಸಲು ಕೆಲವು ವೆಬ್‌ಸೈಟ್‌ಗಳು ಸೃಷ್ಟಿಸಿದ ನಕಲಿ ಸುದ್ದಿಯಾಗಿದೆ ಎಂದು ಪರಿಶೀಲನೆಯಿಂದ ತಿಳಿದುಬಂದಿದೆ.

‘ನಾರಿಲತ’ ಎಂಬ ಹೂ  ನಿಜವಾಗಿಯೂ ಇದೆಯೇ? 

ನಾರಿಲತಾ ಎಂಬ ಹೂವಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈವಿದ್ಯಮಯ ಕತೆಯೊಂದಿಗೆ ಹಂಚಿಕೊಳ್ಳುವಾಗ ಇದು ಹಿಮಾಲಯ, ಇಂಡೋನೇಷಿಯಾ ಮತ್ತು ಶ್ರೀಲಂಕಾದಲ್ಲಿ ಇದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗಿದೆ. ಆದರೆ ಇದು ವಾಸ್ತವವಾಗಿ ಫೋಟೊಶಾಪ್‌ನಿಂದ ರಚಿಸಲಾದ ಹೂವು ಎಂಬುದು ವಾಸ್ತವ.

Narilatha Plant

ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಲಾದ ಚಿತ್ರಗಳು ಹಸಿರು ಬಣ್ಣದಲ್ಲಿ ಚಿತ್ರಿಸಿದ ಸೆರಾಮಿಕ್ ಪ್ರತಿಮೆಯನ್ನು ಹೋಲುತ್ತವೆ. ವೆಬ್‌ಸೈಟ್ ಮಾಲೀಕರು ತಮ್ಮ ವೆಬ್‌ಸೈಟ್‌ನಲ್ಲಿ ಟ್ರಾಫಿಕ್ ಮತ್ತು ಜನಪ್ರಿಯತೆಯನ್ನು ಗಳಿಸಲು ಬಳಸುವ ಮಾರುಕಟ್ಟೆ ತಂತ್ರದ ಭಾಗವಾಗಿದೆ ಎಂಬುದು ಸ್ಪಷ್ಟವಾಗಿದೆ.

ಇಷ್ಟು ಮಾತ್ರವಲ್ಲದೆ ಹಲವು ವೆಬ್ ಸೈಟ್ ಗಳಲ್ಲಿ ಕೇವಲ 2-3 ಚಿತ್ರಗಳು ಪದೇ ಪದೇ ಅಪ್ ಲೋಡ್ ಆಗುತ್ತಿದ್ದವು. ಇದು ನಿಜವಾದ ಹೂವಾಗಿದ್ದರೆ, ಹೆಚ್ಚಿನ ಚಿತ್ರಗಳು, ವೀಡಿಯೊಗಳು ಮತ್ತು ವೈಜ್ಞಾನಿಕ ಸಂಶೋಧಕರ, ಸಸ್ಯ ಶಾಸ್ತ್ರಜ್ಞರ ಅಭಿಪ್ರಾಯಗಳು ಇರಬೇಕಿತ್ತು. ಆದರೆ ಅಂತಹ ಯಾವುದೇ  ತಜ್ಙರ ಹೇಳಿಕೆಗಳಿಲ್ಲ. ಈ ಹೂವಿನ ಬಗ್ಗೆ ಪ್ರಸಾರವಾದ ಯಾವ ಲೇಖನಗಳಲ್ಲಿಯೂ ಯಾವುದೇ ವಿಶ್ವಾಸಾರ್ಹತೆಯನ್ನು ಹೊಂದಿಲ್ಲ.

ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಪೋಸ್ಟ್‌ಗಖನ್ನು ಹಂಚಿಕೊಂಡಾಗ ಅದರ ಬಗ್ಗೆ ಕುತೂಹಲ ಮತ್ತು ಆಸಕ್ತಿ ಹುಟ್ಟುವುದು ಸಹಜ. ಆದರೆ ಇದನ್ನೆ ಬಂಡವಾಳ ಮಾಡಿಕೊಳ್ಳುವ ಕೆಲವರು ಸುಳ್ಳು ಕತೆಗಳೊಂದಿಗೆ ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ನಾರಿಲತ ಎಂಬ ಹೂವು ಫೋಟೊಶಾಪ್‌ ನ ಕೂಸು ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಬರೆದಿರುವ, ಗೀಚಿದ ನೋಟುಗಳನ ಬ್ಯಾನ್ ಮಾಡಿದೆಯೇ RBI?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights