ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಜೋಡೆತ್ತುಗಳ ಭೇಟಿ : ಮತ್ತೆ ಒಂದಾಗುತ್ತಾ ಜೆಡಿಎಸ್- ಕಾಂಗ್ರೆಸ್..?

ಹವಮಾನ ವೈಪರಿತ್ಯದಿಂದಾಗಿ ವಿಮಾನ ಟೇಕಾಫ್ ಆಗಲು ತಡವಾಗಿ  ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಜೋಡೆತ್ತುಗಳ ಭೇಟಿಯಾಗಿದ್ದಾರೆ.

ಹೌದು… ಮೈತ್ರಿ ಸರ್ಕಾರ ಬಿದ್ದ ಬಳಿಕ ಹಾವು ಮುಂಗುಸಿ ರೀತಿ ಕಿತ್ತಾಡ್ತಾಯಿದ್ದ ಮಾಜಿ ಸಿಎಮ್ ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿ.ಕೆ ಶಿವಕುಮಾರ್ ಸದ್ಯ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದಾರೆ.ಬೆಳಗಾವಿಯಿಂದ ಚಿಕ್ಕಬಳ್ಳಾಪುರಕ್ಕೆ ಹೊರಟಿದ್ದ ಎಚ್‌ಡಿಕೆ ಹೆಲಿಕಾಪ್ಟರ್ ಹವಾಮಾನ ವೈಪರಿತ್ಯದಿಂದ ಹುಬ್ಬಳ್ಳಿಯಲ್ಲಿ ತುರ್ತು ಭೂಸ್ಪರ್ಶವಾಗಿದೆ. ಇತ್ತ ಐಟಿ ನೋಟೀಸ್ ಹಿನ್ನೆಲೆಯಲ್ಲಿ ಪ್ರಚಾರ ಮೊಟಕುಗೊಳಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಡಿ.ಕೆ. ಶಿವಕುಮಾರ್ ಪ್ರಯಾಣ ಬೆಳಿಸಿದ್ದ ವಿಮಾನಕ್ಕೆ ಹವಾಮಾನ ವೈಪರಿತ್ಯದ ಕಾರಣ ಟೇಕಾಫ್‌ಗೆ ಅನುಮತಿ ಸಿಗಲಿಲ್ಲ. ಇದರಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಎಚ್‌ಡಿಕೆ ಮತ್ತು ಡಿಕೆಶಿ ಇಬ್ಬರು ಭೇಟಿ ಮಾಡಿದ್ದಾರೆ.

ಈ ವೇಳೆ ಉಪ ಚುನಾವಣೆ, ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿದ್ದು ಜೋಡಿತ್ತುಗಳ ಭೇಟಿ ಕುತೂಹಲ ಕೆರಳಿಸಿದೆ. ಉಪ ಚುನಾವಣೆ ಫಲಿತಾಂಶದ‌ ಬಳಿಕ ಜೆಡಿಎಸ್- ಕಾಂಗ್ರೆಸ್ ಒಂದಾಗುವ ವಿಚಾರಕ್ಕೆ ಇವರಿಬ್ಬರ ಭೇಟಿ ಪುಷ್ಟಿಕೊಟ್ಟಂತಾಗಿದೆ.

 

ಈ ವೇಳೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಮ್ ಎಚ್.ಡಿ. ಕುಮಾರಸ್ವಾಮಿ ನನಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಇಚ್ಚೆ ಇಲ್ಲ. ನಾನು ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಯಾರೋಬ್ಬರು ಮಾತನಾಡುತ್ತಿಲ್ಲ. ನನ್ನ ಕೆಲಸದ ಬಗ್ಗೆ ನಮ್ಮವರು, ಕಾಂಗ್ರೆಸ್‌ನವರು ಮಾತಮಾಡಲಿಲ್ಲ. ೨೫ ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದೆ. ಕಾಂಗ್ರೆಸ್ ಶಾಸಕರುಗಳ‌ ಕ್ಷೇತ್ರಗಳಿಗೆ ೧೯ ಸಾವಿರ‌ ಕೋಟಿ‌ ಕೊಟ್ಟಿದ್ದೆ.
ರಾಜ್ಯ ರಾಜಕೀಯದಲ್ಲಿ ಏನ್ ಬೇಕಾದ್ರು ಬದಲಾವಣೆ ಆಗಬಹುದು. ನಾನು ಸರ್ಕಾರ ಇರುತ್ತೆ ಅಂದಿದ್ದೆ, ಆದ್ರೆ ಬಿಜೆಪಿ ಸರ್ಕಾರ ಅಂತಾ ಹೇಳಿಲ್ಲ. ಡಿಸೆಂಬರ್ ೯ ರ ನಂತರ ಎಲ್ಲವೂ ಗೊತ್ತಾಗುತ್ತೆ‌. ಅಪ್ಪ ಮಕ್ಕಳ‌ ಪಕ್ಷವನ್ನು ಮನೆಗೆ ಕಳಿಸುವುದಾಗಿ ಹೇಳಿದ್ದ ಎಲ್ಲರೂ ಮನೆಗೆ ಹೋಗಿದ್ದಾರೆ. ರಮೇಶ್ ಜಾರಕಿಹೊಳಿ ಸಹ ಮನೆಗೆ ಹೋಗ್ತಾರೆ ಎಂದರು.

ಡಿ.ಕೆ. ಶಿವಕುಮಾರ್‌ಗೆ ಐಟಿ ನೋಟೀಸ್ ನೀಡಿದ ವಿಚಾರ ಮಾತನಾಡಿದ ಹೆಚ್ ಡಿಕೆ,  ಇದು ಬಿಜೆಪಿ‌ ನಾಯಕರ ಅಧಿಕಾರ‌ ದುರ್ಬಳಕೆ. ಚುನಾವಣೆ ಸಂದರ್ಭದಲ್ಲಿ ತರಾತುರಿಯಲ್ಲಿ ನೋಟೀಸ್ ನೀಡುವ ಅಗತ್ಯವಿರಲಿಲ್ಲ. ಚುನಾವಣೆ ಮುಗಿಯುವವರೆಗೂ ಅವಕಾಶ ಕೊಡಬೇಕಿತ್ತು. ಕಾಂಗ್ರೆಸ್-ಜೆಡಿಎಸ್ ಯಾವುದೇ ಒಳ ಒಪ್ಪಂದ ಮಾಡಿಕೊಂಡಿಲ್ಲ. ಜೆಡಿಎಸ್ ೬ರಿಂದ ೮ ಸ್ಥಾನ ಗೆಲ್ಲುವ ಆಶಾಭಾವ ಇದೆ. ಉಪ ಚುನಾವಣೆಯ ಫಲಿತಾಂಶದ ನಂತರ ಅಚ್ಚರಿಯ ಬದಲಾವಣೆ ಆಗಲಿದೆ. ಖರ್ಗೆ ಅವರು ಸಿಹಿ ಸುದ್ದಿ ಕೊಡುವುದಾಗಿ ಹೇಳಿದ್ದಾರೆ. ಸಿದ್ದರಾಮಯ್ಯ ನಾನು ಮುಖ್ಯಮಂತ್ರಿಯಾಗುವೆ ಅಂತಾರೆ. ಕಾಂಗ್ರೆಸ್‌ನವರು ಅವರ ಪಾಡಿಗೆ ಅವರು ಚುನಾವಣೆ ಮಾಡುತ್ತಿದ್ದಾರೆ.
ನಾವು ಅಂದುಕೊಂಡಂತೆ ಎಲ್ಲವೂ ನಡೆಯಬೇಕಂತಿಲ್ಲ. ಸಿದ್ದರಾಮಯ್ಯ, ಖರ್ಗೆ, ಮೋಯ್ಲಿ ಅವರದ್ದೇ ಲೆಕ್ಕಾಚಾರದ ಮೇಲೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಶ್ರೀನಿವಾಸ ಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದ ಎಚ್‌ಡಿಕೆ.
ಶ್ರೀನಿವಾಸ ಪ್ರಸಾದ್‌ಗೆ ಪಕ್ಷದ ಬದಲಿಸಿದ ದೊಡ್ಡ ಅನುಭವ ಇದೆ. ಶ್ರೀನಿವಾಸ ಪ್ರಸಾದ್ ಚಪಲಕ್ಕೆ ಮಾತನಾಡುವುದನ್ನು ನಿಲ್ಲಿಸಲಿ. ಅಧಿಕಾರಕ್ಕಾಗಿ ಓಡಾಡುವವರಿಗೆ ನನ್ನ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಬಿಜೆಪಿ, ಕಾಂಗ್ರೆಸ್ ನವರು ಸರ್ಕಾರ ಮಾಡಲು ನಮ್ಮನೇ ಹುಡುಕಿಕೊಂಡು ಬಂದ್ರು. ಅವರು ಸಂಕಷ್ಟಕ್ಕಿಡಾದಾಗ ನಮ್ಮನ್ನು ಬಳಸಿಕೊಳ್ತಾರೆ. ನಮ್ಮ ಕೊಡೆಯ ಕೆಳಗೆ ಕಾಂಗ್ರೆಸ್-ಬಿಜೆಪಿ ಆಶ್ರಯ ಪಡೆದಿದ್ದರು ಎಂದರು.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights