ಹುಬ್ಬಳ್ಳಿಯಲ್ಲಿ “ಪಾಕ್ ಜಿಂದಾಬಾದ್” : ವಿಜಯಪುರದಲ್ಲಿ “ಲವ್ ಯೂ ಪಾಕ್ ಆರ್ಮಿ”
ಕಿಡಿಗೇಡಿಗಳು ಸರ್ಕಾರಿ ಶಾಲೆಯ ಗೋಡೆ ಮೇಲೆ ಪಾಕಿಸ್ತಾನ ಜಿಂದಾಬಾದ್ ಎಂದು ಬರೆದ ಘಟನೆ ಹುಬ್ಬಳ್ಳಿ ತಾಲೂಕಿನ ಬುಡರಶಿಂಗಿ ಗ್ರಾಮದಲ್ಲಿ ನಡೆದಿದೆ.
ಶಾಲೆಯ ಗೋಡೆ ಮೇಲೆ ಪಾಕಿಸ್ತಾನ್ ಜಿಂದಾಬಾದ್, ಟಿಪ್ಪು ಸುಲ್ತಾನ್ ಶಾಲೆ ಎಂದು ದುಷ್ಕರ್ಮಿಗಳು ಕನ್ನಡದಲ್ಲಿ ಬರೆದಿದ್ದಾರೆ.

ದೇಶದ್ರೋಹದ ಘೋಷಣೆ ಬೆನ್ನಲ್ಲೇ ವಿಜಯಪುರದಲ್ಲೂ ಮತ್ತೊಂದು ಯಡವಟ್ಟು ನಡೆದಿದೆ. ಪಾಕ್ ಆರ್ಮಿ ಪರವಾಗಿ ಬರೆದ ಬರಹವನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ತಾಳಿಕೋಟಿ ಯುವಕ ಶೇರ್ ಮಾಡಿದ ಬರಹ ಫೇಸ್ಬುಕ್ ನಲ್ಲಿ ವೈರಲ್ ಆಗಿದೆ.
ಫೆ.22 ರಂದು ಎ ಟು ಝಡ್ ಖಾತೆಯಲ್ಲಿ ಲವ್ ಯೂ ಪಾಕ್ ಆರ್ಮಿ ಎಂದು ಬರೆದ ಯುವಕ, ಬಳಿಕ ಅದೇ ಹೆಸರಿನಲ್ಲಿರುವ ಪೋಸ್ಟ್ ನ್ನು ಶೇರ್ ಮಾಡಿರುವ ತಾಳಿಕೋಟಿಯ ಮೇರು ಬ್ಯಾಗವಾಟ್. ಎ ಟು ಝಡ್ ಫೇಸಬುಕ್ ಖಾತೆಯ ದೇಶದ್ರೋಹಿಯನ್ನು ಪತ್ತೆ ಹಚ್ಚುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ.
ಎ ಟು ಝಡ್ ಹೆಸರಲ್ಲಿದ್ದ ಪೋಸ್ಟ್ ಶೇರ್ ಮಾಡಿದ್ದ ಮೇರು ಬ್ಯಾಗವಾಟ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಮುದ್ದೇಬಿಹಾಳ ಪೊಲೀಸರು.




