ರಷ್ಯಾದಲ್ಲಿ 23 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಪತನ : 15 ಮಂದಿ ದುರ್ಮರಣ!
ರಷ್ಯಾದಲ್ಲಿ 23 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದ್ದು, ಕನಿಷ್ಠ 15 ಮಂದಿ ಸಾವನ್ನಪ್ಪಿರುವ ಶಂಕೆ ಇದೆ ಎನ್ನಲಾಗಿದೆ.
ಭಾನುವಾರ ಲೆಟ್ ಎಲ್ -410 ಟರ್ಬೊಲೆಟ್ ವಿಮಾನ ರಷ್ಯಾದ ಟಾಟರ್ಸ್ತಾನ್ ಪ್ರ್ಯಾಂತ್ಯದ ಮೆಂಜೆಲಿನ್ಸ್ಕ್ ನಗರದಲ್ಲಿ ಬೆಳಗ್ಗೆ 9:11 ಕ್ಕೆ (ಮಾಸ್ಕೋ ಸಮಯ) ಅಪಘಾತಕ್ಕೀಡಾಗಿ 15 ಜನರು ಸಾವನ್ನಪ್ಪಿದ್ದಾರೆ.
ರಷ್ಯಾದ ಸುದ್ದಿ ಸಂಸ್ಥೆ TASS ನ ವರದಿಯ ಪ್ರಕಾರ, ಇದುವರೆಗೆ ಏಳು ಜನರನ್ನು ರಕ್ಷಿಸಲಾಗಿದೆ. 23 ಪ್ರಯಾಣಿಕರ ಪೈಕಿ, 21 ಮಂದಿ ಪ್ಯಾರಾಚೂಟ್ ಡೈವರ್‌ಗಳು ಎನ್ನಲಾಗುತ್ತಿದೆ.
“ಏಳು ಜನರನ್ನು ರಕ್ಷಿಸಲಾಗಿದೆ” ಎಂದು ಎಎಫ್‌ಪಿ ತನ್ನ ಟೆಲಿಗ್ರಾಮ್ ಚಾನೆಲ್‌ನಲ್ಲಿ ರಷ್ಯಾದ ತುರ್ತು ಸಚಿವಾಲಯವನ್ನು ಉಲ್ಲೇಖಿಸಿದೆ.
“ಇನ್ನೂ ನಾಲ್ಕು ಜನರನ್ನು ಅಗ್ನಿಶಾಮಕ ಮತ್ತು ಪಾರುಗಾಣಿಕಾ ತಂಡಗಳು ರಕ್ಷಣೆ ಕೆಲಸ ಮುಂದುವರೆಸಿದೆ. ಒಟ್ಟಾರೆ ಏಳು ಜನರನ್ನು ರಕ್ಷಿಸಲಾಗಿದೆ” ಎಂದು TASS ಸುದ್ದಿ ಸಂಸ್ಥೆ ಮೂಲವೊಂದನ್ನು ಉಲ್ಲೇಖಿಸಿದೆ.
ವಿಮಾನ ಪತನಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ.