೬ನೇ ತರಗತಿ ಪೋರನ ಬುಕ್ ನಲ್ಲಿತ್ತು ಲವ್ ಲೇಟರ್ : ಡಿಸಿ ಕೈಗೆ ಸಿಕ್ಕ ಬಾಲಕ
೬ನೇ ತರಗತಿ ಪೋರನೊಬ್ಬ ಬುಕ್ ನಲ್ಲಿ ಲವ್ ಲೇಟರ್ ಬರೆದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ಗೆ ಸಿಕ್ಕಿ ಬಿದ್ದ ಘಟನೆ ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದಲ್ಲಿ ನಡೆದಿದೆ.
ಮಳೆಯಿಂದ ಬಿದ್ದ ಮನೆಗಳ ಪರಿಶೀಲನೆಗೆ ಡಿಸಿ ತೆರಳಿದ್ದಾಗ ಲವ್ ಲೇಟರ್ ಬರೆಯುತ್ತಿದ್ದ ಬಾಲಕ ಡಿಸಿ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಪೋರನ ಕೈಯಲ್ಲಿದ್ದ ಬುಕ್ ಕಸಿದು ನೋಡಿದ್ರೆ ಅದರಲ್ಲಿ ಐ ಲವ್ ಯು ಎಂದು ಬರೆಯಲಾಗಿತ್ತು.
ಉಪ್ಪಿನಬೆಟಗೇರಿ ಕಲ್ಮೇಶ್ವರ ಗುಡಿ ಓಣಿಯಲ್ಲಿನ ತನ್ನ ಮನೆ ಎದುರು ಬುಕ್ ನಲ್ಲಿ ಬರೆಯುತ್ತ ಕುಳಿತಿದ್ದ ೬ ನೇ ತರಗತಿಯ ಬಾಲಕನ ಬುಕ್ ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಓಣಿಯಲ್ಲಿನ ಮಕ್ಕಳನ್ನು ಮಾತನಾಡಿಸುತ್ತ ಬಾಲಕನ ಬಳಿ ಬಂದಿದ್ದ ಡಿಸಿ, ಏನು ಬರೀತಾ ಇದಿಯಾ ಅಂತಾ ಹತ್ತಿರಕ್ಕೆ ಹೋಗಿ ಬುಕ್ ಹಿಡಿತಾ ಇದ್ದಂತೆ ಬಾಲಕ ಓಡಿ ಹೋಗಿದ್ದಾನೆ.
ಬುಕ್ ತೆಗೆದು ನೋಡಿದ್ರೆ ಅದರಲ್ಲಿತ್ತು ಐ ಲವ್ ಯು. ಬಾಲಕನ ಬರೆದಿದ್ದನ್ನು ನೋಡಿದ ಡಿಸಿ ದೀಪಾ ಚೋಳನ್ ಮುಗುಳ್ನಗುತ್ತ ಮುಂದೆ ಹೋಗಿದ್ದಾರೆ.