FACT CHECK | ಕೇರಳದ ಮುಸ್ಲಿಂ ವ್ಯಕ್ತಿ ಹಿಂದೂಗಳಿಗೆ ಹಂಚುವ ಹಾಲಿನಲ್ಲಿ ಸ್ನಾನ ಮಾಡಿದ್ದು ನಿಜವೇ?

ಕೇರಳದ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂಗಳಿಗೆ ಹಾಲು ಹಂಚುವ ಮುನ್ನ ಅದನ್ನು ಹಲಾಲ್ ಮಾಡಲು ಸ್ನಾನ ಮಾಡುತ್ತಿದ್ದಾನೆ ಎಂಬ ಹೇಳಿಕೆಯಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ. “ಹಾಲನ್ನು ಹಲಾಲ್ ಮಾಡಲು ಅವರು ಏನು ಮಾಡುತ್ತಾರೆ? ಹಾಲಿನಲ್ಲಿ ಸ್ನಾನ ಮಾಡಿ ಹಿಂದೂಗಳಿಗೆ ಹಂಚುತ್ತಾರೆ” ಎಂಬ ಬರಹದೊಂದಿಗೆ ವ್ಯಕ್ತಿಯೊಬ್ಬರು ಹಾಲಿನಲ್ಲಿ ಸ್ನಾನ ಮಾಡುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

“ಕೇರಳದ ಮುಸ್ಲಿಂ ವ್ಯಕ್ತಿಯೊಬ್ಬರು ಹಾಲಿನಲ್ಲಿ ಸ್ನಾನ ಮಾಡಿ ಅದನ್ನು ಹಿಂದೂಗಳಿಗೆ ವಿತರಿಸುವ ಮೊದಲು ‘ಹಲಾಲ್’ ತಯಾರಿಸುತ್ತಿದ್ದಾರೆ” ಎಂದು ಪ್ರತಿಪಾದಿಸಿದ ವಿಡಿಯೋ ಒಂದನ್ನು ಎಕ್ಸ್‌ ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 9 ನವೆಂಬರ್ , 2020ರಂದು NDTV ವಿಡಿಯೋ ಕುರಿತು ಪ್ರಕಟಿಸಿದ ಸುದ್ದಿಯೊಂದು ಲಭ್ಯವಾಗಿದೆ. ವರದಿಯ ಪ್ರಕಾರ “ಕೆಲಸಗಾರನೊಬ್ಬ ಹಾಲಿನ ತೊಟ್ಟಿಯಲ್ಲಿ ಸ್ನಾನ ಮಾಡುತ್ತಿರುವ ದೃಶ್ಯಗಳು ಆನ್‌ಲೈನ್‌ನಲ್ಲಿ ವೈರಲ್ ಆದ ಬಳಿಕ ಟರ್ಕಿ(ತುರ್ಕಿ) ಯಲ್ಲಿ ಡೈರಿ ಪ್ಲಾಂಟ್ ಅನ್ನು ಮುಚ್ಚಲಾಗಿದೆ ಎಂದು ತಿಳಿಸಲಾಗಿದೆ.
ಈ ಕುರಿತು ಮತ್ತಷ್ಟು ಸರ್ಚ್ ಮಾಡಿದಾಗ, ಟರ್ಕಿಯ ಸುದ್ದಿ ಸಂಸ್ಥೆ TRT ಹೇಬರ್ ಜೂನ್ 10, 2022 ರ ವರದಿಯಲ್ಲಿ ವೈರಲ್ ವೀಡಿಯೊದ ಚಿತ್ರವನ್ನು ಪ್ರಕಟಿಸಿದೆ. ಈ ವರದಿ ಪ್ರಕಾರ ಈ ಘಟನೆಯು ಟರ್ಕಿಯ ಕೊನ್ಯಾ ಎಂಬ ನಗರದಲ್ಲಿ ಈ ಘಟನೆ ನಡೆದಿದೆ. ಹಾಲಿನ ವ್ಯಾಟ್‌ನಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿಯನ್ನು ಎಮ್ರೆ ಸಯಾರ್ ಎಂದು ಗುರುತಿಸಲಾಗಿದ್ದು, ಅವರ ಸಹೋದ್ಯೋಗಿ ಉಗುರ್ ತುರ್ಗುಟ್ ತಮ್ಮ ವೀಡಿಯೊವನ್ನು ಟಿಕ್‌ ಟಾಕ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ವೀಡಿಯೊ ವೈರಲ್ ಆದ ನಂತರ ಇಬ್ಬರನ್ನೂ ಬಂಧಿಸಲಾಗಿದೆ.

ವರದಿಯ ಪ್ರಕಾರ, ಅವರು ಸ್ನಾನ ಮಾಡಿದ ದ್ರವವು ಹಾಲು ಅಲ್ಲ ಎಂದು ಅವರು ಹೇಳಿದ್ದಾರೆ. ಟಬ್ ಸೋಂಕುನಿವಾರಕ ಬೇಸಿನ್ ಎಂದು ಅವರು ವಾದಿಸಿದರು. ನಂತರ ನ್ಯಾಯಾಲಯವು ಅಕ್ಟೋಬರ್ 2021 ರಲ್ಲಿ ಇಬ್ಬರನ್ನೂ ಖುಲಾಸೆಗೊಳಿಸಿತು. ಸಯಾರ್ ನಂತರ 120,000 ಲಿರಾಗಳಿಗೆ ಒತ್ತಾಯಿಸಿ ಮೊಕದ್ದಮೆ ಹೂಡಿದರು. ಸಯಾರ್ ಈ ಪ್ರಕರಣವನ್ನು ಗೆದ್ದರು, ಮತ್ತು ಕೊನ್ಯಾದಲ್ಲಿನ ನ್ಯಾಯಾಲಯವು ಅವನಿಗೆ 1,150 ಲಿರಾಗಳನ್ನು ಪಾವತಿಸಬೇಕೆಂದು ಆದೇಶಿಸಿತು. ಈ ಘಟನೆಯು 2020 ರ ನವೆಂಬರ್‌ನಲ್ಲಿ ನಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನವೆಂಬರ್ 13, 2020 ರ ಇಂಡಿಯನ್ ಎಕ್ಸ್ಪ್ರೆಸ್ ವರದಿ ಲಭ್ಯವಗಿದೆ. ವರದಿಯ ಪ್ರಕಾರ, “ಟರ್ಕಿಯ ಡೈರಿ ಸ್ಥಾವರದಲ್ಲಿ ಕೆಲಸಗಾರ ಹಾಲಿನ ಟಬ್‌ನಲ್ಲಿ ಸ್ನಾನ ಮಾಡುತ್ತಾನೆ; ವಿಡಿಯೋ ವೈರಲ್ ಆದ ನಂತರ ಬಂಧನ” ಶೀರ್ಷಿಕೆಯೊಂದಿಗೆ ಸುದ್ದಿಯನ್ನು ಪ್ರಕಟಿಸಲಾಗಿದೆ.

ಜೂನ್ 13, 2022 ರ ಹುರಿಯೆಟ್ ಡೈಲಿ ನ್ಯೂಸ್‌ನ ವರದಿಯ ಪ್ರಕಾರ, ವೀಡಿಯೊದಲ್ಲಿ ‘ಹಾಲಿನ ಸ್ನಾನ’ ಮಾಡುತ್ತಿರುವ ವ್ಯಕ್ತಿ ಎಮ್ರೆ ಸಯಾರ್ ಮತ್ತು ತನ್ನ ಟಿಕ್‌ಟಾಕ್ ಖಾತೆಯಲ್ಲಿ ತುಣುಕನ್ನು ಹಂಚಿಕೊಂಡ ಉಯೂರ್ ತುರ್ಗುಟ್ ಅವರನ್ನು 2020 ರಲ್ಲಿ ಘಟನೆಯ ನಂತರ ಬಂಧಿಸಲಾಯಿತು.

“ಈ ಪ್ರಕರಣದ ಪ್ರಾಸಿಕ್ಯೂಟರ್ ಪಾತ್ರೆಯಲ್ಲಿರುವ ವಸ್ತು ಹಾಲು ಅಲ್ಲ, ಬಿಸಿ ನೀರು ಮತ್ತು ಹಾಲನ್ನು ಹೋಲುವ ದ್ರವ ಎಂದು ಹೇಳಿದರು. ನ್ಯಾಯಾಲಯವು ಅಕ್ಟೋಬರ್ 2021 ರಲ್ಲಿ ಸಯಾರ್ ಮತ್ತು ಉಯೂರ್ ಅವರನ್ನು ಖುಲಾಸೆಗೊಳಿಸಿತು. ನ್ಯಾಯಾಲಯದ ತೀರ್ಪಿನ ನಂತರ, ಸಯಾರ್ ರಾಜ್ಯ ಖಜಾನೆಯ ವಿರುದ್ಧ ಮೊಕದ್ದಮೆ ಹೂಡಿದರು, ಆರ್ಥಿಕ ಮತ್ತು ಆರ್ಥಿಕೇತರ ಹಾನಿಗಳಿಗೆ ಪರಿಹಾರವಾಗಿ ಒಟ್ಟು 120,000 ಟರ್ಕಿಶ್ ಲಿರಾಗಳನ್ನು ಒತ್ತಾಯಿಸಿದರು. ಆದರೆ ಕೊನ್ಯಾ ನ್ಯಾಯಾಲಯವು ಅವರಿಗೆ ಪರಿಹಾರವಾಗಿ 1,150 ಲಿರಾಗಳನ್ನು ಮಾತ್ರ ಪಾವತಿಸಬೇಕು ಎಂದು ಆದೇಶಿಸಿದೆ ಎಂದು ವರದಿ ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ,ವೈರಲ್ ವಿಡಿಯೋ ಟರ್ಕಿಯ ಕೊನ್ಯಾ ಎಂಬಲ್ಲಿನ ಹಾಲಿನ ಡೈರಿಯೊಂದರ ತೊಟ್ಟಿಯಲ್ಲಿ ವ್ಯಕ್ತಿಯೊಬ್ಬ ಹಾಲಿನ  ಸ್ನಾನ ಮಾಡಿದ್ದ ಹಳೆಯ ವಿಡಿಯೋವನ್ನು ತಿರುಚಿ ಕೇರಳದ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂಗಳಿಗೆ ಹಂಚುವ ಹಾಲಿನಲ್ಲಿ ಸ್ನಾನ ಮಾಡಿದ್ದಾನೆ ಎಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪ್ರಧಾನಿ ಮೋದಿಯಿಂದ ಯೋಗಿಗೆ ಅವಮಾನವಾಗಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights