ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗೆ ಕೊರೊನಾ ಮಧ್ಯೆ ಉಡುಗೊರೆ ಕಳಿಸಿದ ರಶ್ಮಿಕಾ ಮಂದಣ್ಣ!
ಸಧ್ಯ ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಸದ್ದು ಮಾಡುತ್ತಿರುವ ಕೊಡಗಿನ ನಟಿ ರಶ್ಮಿಕಾ ಮಂದಣ್ಣ ಅವರು ಟಾಲಿವುಡ್ ನಟ ಮಹೇಶ್ ಬಾಬು ಕುಟುಂಬಕ್ಕೆ ಕೊರೊನಾ ಲಾಕ್‌ಡೌನ್ ನಡುವೆಯೂ ಉಡುಗೊರೆ ಕಳಿಸಿದ್ದಾರೆ. ಈ ಬಗ್ಗೆ ಮಹೇಶ್ ಪತ್ನಿ ನಮ್ರತಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಾವಿನಕಾಯಿ, ಮಾವಿನಕಾಯಿ ಉಪ್ಪಿನಕಾಯಿ ಸೇರಿದಂತೆ ಆರ್ಗಾನಿಕ್ ಫುಡ್‌ಗಳನ್ನು ಉಡುಗೊರೆಯಾಗಿ ಮಹೇಶ್ ಬಾಬು ಮನೆಗೆ ರಶ್ಮಿಕಾ ಕಳುಹಿಸಿಕೊಟ್ಟಿದ್ದಾರೆ. ಕೂರ್ಗ್‌ನಿಂದ ಮಳೆಗಾಲದ ಉಡುಗೊರೆ ಕಳುಹಿಸಿಕೊಟ್ಟಿದ್ದಕ್ಕಾಗಿ ಮಹೇಶ್ ಬಾಬು ಪತ್ನಿ ನಮ್ರತಾ ರಶ್ಮಿಕಾಗೆ ಧನ್ಯವಾದ ಹೇಳಿದ್ದಾರೆ. ಅಷ್ಟೇ ಅಲ್ಲದೆ ಕೊರೊನಾ ವೈರಸ್ ದೇಶವ್ಯಾಪಿ ಹರಡಲು ಆರಂಭಿಸಿದ ನಂತರದಲ್ಲಿ ಇದೇ ಮೊದಲ ಬಾರಿಗೆ ಮಹೇಶ್ ಬಾಬು ಉಡುಗೊರೆ ಸ್ವೀಕರಿಸಿರುವುದಾಗಿ ನಮ್ರತ ತಿಳಿಸಿದ್ದಾರೆ.
ಬಹಳ ಕಡಿಮೆ ಅವಧಿಯಲ್ಲಿ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿರುವ ನಟಿ ರಶ್ಮಿಕಾಗೆ ಮಹೇಶ್ ಬಾಬು ‘ಸರಿಲೇರು ನಿಕೆವ್ವರು’ ಚಿತ್ರದಲ್ಲಿ ನಟಿಸುವ ಆಫರ್ ಸಿಕ್ಕಿತ್ತು, ಈ ಹಿಂದಿನ ಸಿನಿಮಾಗಳಲ್ಲಿನ ರಶ್ಮಿಕಾ ನಟನೆ ಹೋಲಿಸಿದರೆ ಈ ಚಿತ್ರದಲ್ಲಿ ಚೆನ್ನಾಗಿಯೇ ನಟಿಸಿದ್ದರು. ಈ ಸಿನಿಮಾ ಸಖತ್ ಹಿಟ್ ಆಯ್ತು, ರಶ್ಮಿಕಾಗೆ ಇನ್ನಷ್ಟು ಅವಕಾಶಗಳು ಸಿಗುವಂತೆ ಮಾಡಿತು.
ರಶ್ಮಿಕಾ ಅವರು ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ಪುಷ್ಪ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ತಮಿಳು ನಟ ಕಾರ್ತಿ ಜೊತೆಗೆ ‘ಸುಲ್ತಾನ್’ ಸಿನಿಮಾದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ರಶ್ಮಿಕಾಗೆ ಬಾಲಿವುಡ್‌ನಿಂದಲೂ ಕೂಡ ಆಫರ್ ಬರುತ್ತಿವೆ, ಆದರೆ ರಶ್ಮಿಕಾ ಲೆಕ್ಕಹಾಕಿ ನೋಡಿ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್ ಆರಂಭವಾದಾಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಈಗಾಗಲೇ ಅವರು ಸೋಶಿಯಲ್ ಮೀಡಿಯಾದಲ್ಲಿ ವೈಯಕ್ತಿಕ ವಿಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಪ್ರಸ್ತುತ ರಶ್ಮಿಕಾ ಮನೆಯವರ ಜೊತೆ ಕೊಡಗಿನ ಮನೆಯಲ್ಲಿ ನೆಲೆಸಿದ್ದಾರೆ.
ಇದನ್ನೂ ಓದಿ: ‘ವಿಜಯ್ ದೇವರಕೊಂಡನ ಜೊತೆ ಡೇಟಿಂಗ್ ಮಾಡುತ್ತಿಲ್ಲ’ – ರಶ್ಮಿಕಾ ಮಂದಣ್ಣ ಸ್ಪಷ್ಟ