ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ನಾಯಕ ಮತ್ತವರ ಕುಟುಂಬದ ಸದಸ್ಯರ ಹತ್ಯೆ: ಭಯೋತ್ಪಾದಕರಿಂದ ಕೃತ್ಯ

ಜಮ್ಮು  ಮತ್ತು ಕಾಶ್ಮೀರ ರಾಜ್ಯದ ಬಂಡಿಪೋರದ ಭಾರತೀಯ ಜನತಾ ಪಕ್ಷದ ಮಾಜಿ ಅಧ್ಯಕ್ಷ ವಾಸಿಮ್ ಬಾರಿ ಅವರ ತಂದೆ ಮತ್ತು ಸಹೋದರನನ್ನು ಜುಲೈ 8 ರ ಬುಧವಾರದಂದು ಭಯೋತ್ಪಾದಕರು ಗುಂಡು ಹಾರಿಸಿದ ಕೊಂದಿದ್ದಾರೆ ಎಂದು ಜಮ್ಮು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಅವರ ಹೇಳಿಕೆಯನ್ನ ಉಲ್ಲೇಖಿಸಿ ANI ವರದಿ ಮಾಡಿದೆ.

“ಕುಟುಂಬದ ಭದ್ರತೆಗಾಗಿ 8 ಜನರನ್ನು ನೇಮಿಸಲಾಗಿತ್ತು. ಆದರೆ ದುರದೃಷ್ಟವಶಾತ್, ಈ ಘಟನೆಯ ಸಮಯದಲ್ಲಿ ಅವರಲ್ಲಿ ಯಾರೂ ಕೂಡ ಅಲ್ಲಿರಲಿಲ್ಲ” ಎಂದು ಸಿಂಗ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಹತ್ಯೆಯ ಬಗ್ಗೆ ದೂರವಾಣಿಯಲ್ಲಿ ವಿಚಾರಿಸಿ, ವಾಸಿಮ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಟ್ವೀಟ್ ಮಾಡಿದ್ದಾರೆ.

ಈ ಘಟನೆ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಅವರ ಅಂಗಡಿಯ ಹೊರಗೆ ನಡೆದಿದೆ ಎಂದು ವರದಿಯಾಗಿದೆ.

ಮೂವರ ತಲೆಗೆ ಗುಂಡು ಬಿದ್ದು ಗಾಯಗಳಾಗಿವೆ ಎಂದು ವೈದ್ಯಕೀಯ ಅಧಿಕಾರಿಯೊಬ್ಬರು  ಹೇಳಿದ್ದಾರೆ. “ಮೂವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಈಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು” ಎಂದು ಅಧಿಕಾರಿ ಹೇಳಿದರು.

ವಾಸಿಮ್ ಬಾರಿ ಮತ್ತು ಅವರ ಸಹೋದರ ಹಾಗೂ ತಂದೆಯನ್ನು ರಕ್ಷಿಸುವಲ್ಲಿನ ನಿರ್ಲಕ್ಷ್ಯದ ಆರೋಪದ ಮೇಲೆ ಏಳು ಪೊಲೀಸರನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ PTI ಹೇಳಿದೆ.

‘ಪಕ್ಷಕ್ಕೆ ಭಾರಿ ನಷ್ಟು’

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಈ ಘಟನೆಯು “ಪಕ್ಷಕ್ಕೆ ದೊಡ್ಡ ನಷ್ಟ” ಎಂದು ಹೇಳಿದ್ದು, “ಅವರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

https://twitter.com/JPNadda/status/1280920112636194816?ref_src=twsrc%5Etfw%7Ctwcamp%5Etweetembed%7Ctwterm%5E1280920112636194816%7Ctwgr%5E&ref_url=https%3A%2F%2Fnaanugauri.com%2Fassassination-of-former-bjp-leader-his-family-action-by-jammu-kashmiri-terrorist%2F

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights