ಪಾನ್‌ಮಸಾಲ ಬ್ಯಾನ್‌ ಮಾಡುವಂತೆ ಕೋರ್ಟ್‌ ಮೊರೆ; PM Caresಗೆ ದೇಣಿಗೆ ನೀಡದ್ದೇನೆ ಎಂದ ಕಂಪನಿ!

ಕೊರೊನಾ ಸಮಯದಲ್ಲಿ ಕಂಪನಿಯೊಂದು PM CARES ನಿಧಿಗೆ ದೇಣಿಗೆ ನೀಡಿದರೆ ಅದನ್ನು ತನ್ನ ಪರವಾನಗಿಯೆಂದು ಭಾವಿಸಬಹುದೇ? ಎಂದು ಪ್ರಶ್ನೆ ಪಾನ್ ಮಸಾಲ ಕಂಪನಿಯ ವಿರುದ್ಧ ಭುಗಿಲೆದ್ದಿದೆ.

ಈ ವಾರ ಅಲಹಾಬಾದ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ಸಂದರ್ಭದಲ್ಲಿ ಹಾಜರಾದ ‘ರಜನಿಗಂಧ’ ಬ್ರಾಂಡ್ ಪಾನ್ ಮಸಾಲ ತಯಾರಕರಾದ ಧರಂಪಾಲ್ ಸತ್ಯಪಾಲ್ ಲಿಮಿಟೆಡ್ ಅವರು ಸಲ್ಲಿಸಿದ ಮನವಿಯು ಈ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ.

ಕೊರೊನಾ ವೈರಸ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಪಾನ್ ಮಸಾಲ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಪಿಐಎಲ್‌ ಒಂದು ದಾಖಲಾಗಿದೆ. ಏಕೆಂದರೆ ಇದನ್ನು ಬಳಸುವವರು ಪದೇ ಪದೇ ಉಗುಳುವುದರಿಂದಾಗಿ ಕೊರೊನಾ ವೈರಸ್ ಹರಡುವಿಕೆ ಅಧಿಕವಾಗುತ್ತದೆ ಎಂದು ದೂರಲಾಗಿದೆ.

ಇದಕ್ಕೆ ಪ್ರತಿಕ್ರಿಯೆಯಾಗಿ ರಜನಿಗಂಧ ತನ್ನ ಅಫಿಡವಿಟ್‌ನಲ್ಲಿ “ಈ ಕಠೋರ ಕ್ಷಣದಲ್ಲಿ ತನ್ನ ಜವಾಬ್ದಾರಿಗಳ ಬಗ್ಗೆ ತಿಳಿದಿದೆ.  ಹಾಗಾಗಿ ‘ಪಿಎಂ ಕೇರ್ಸ್’ ನಿಧಿಗೆ 10 ಕೋಟಿ ರೂ. ಮತ್ತು ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ಸಂಸ್ಥೆಗಳಿಗೆ ಸಹಾಯ ಮಾಡಲು 10 ಕೋಟಿ ರೂ ನೀಡಿದ್ದೇವೆ ಎಂದು ಹೇಳಿಕೊಂಡಿದೆ.

 

ಸೋಮವಾರ ಸಾರ್ವಜನಿಕ ವಲಯದಲ್ಲಿ ವೈರಲ್ ಆದ ಅಫಿಡವಿಟ್‌ನಲ್ಲಿ, “ಇದು ನೋಯ್ಡಾದಲ್ಲಿ ವೈದ್ಯರಿಗೆ (ಕರೋನಾ ಯೋಧರಿಗೆ) ಹೋಟೆಲ್ ಹಾಸಿಗೆಗಳನ್ನು ಕಾಯ್ದಿರಿಸುವುದು, ಅಗತ್ಯವಿರುವವರಿಗೆ ಆಹಾರ ಮತ್ತು ಪಡಿತರ ಒದಗಿಸುವುದಕ್ಕಾಗಿ ಗುರುದ್ವಾರ ಪ್ರಬಂಧಕ್ ಸಮಿತಿಯು ಅಗತ್ಯವಿರುವವರಿಗೆ ತಮ್ಮ ಸಾಮುದಾಯಿಕ ಆಹಾರ ಕೇಂದ್ರವನ್ನು ಮುಂದುವರಿಸಲು ಬೆಂಬಲ ನೀಡಿದೆ” ಎಂದು ಬರೆದುಕೊಂಡಿದೆ.

ಕುತೂಹಲಕಾರಿಯಾಗಿ, ರಾಷ್ಟ್ರೀಯ ಲಾಕ್ ಡೌನ್ ಘೋಷಣೆಯಾದ ಕೆಲವೇ ದಿನಗಳಲ್ಲಿ “ಸಾರ್ವಜನಿಕ ಆರೋಗ್ಯ” ದ ಹಿತದೃಷ್ಟಿಯಿಂದ ಪಾನ್ ಮಸಾಲ ಮಾರಾಟವನ್ನು ನಿಷೇಧಿಸಲು ಉತ್ತರ ಪ್ರದೇಶ ಸರ್ಕಾರ ಮಾರ್ಚ್ 25 ರಂದು ಆದೇಶಿಸಿತು. ಪಾನ್ ಮಸಾಲವನ್ನು ಅಗಿಯುವುದು ಮತ್ತು ಉಗುಳುವುದು COVID-19 ಹರಡುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ವೇಗಗೊಳಿಸುತ್ತದೆ ಎಂಬ ಎಚ್ಚರಿಕೆಯಿಂದ ಈ ಕ್ರಮ ಕೈಗೊಂಡಿತ್ತು.

Rajnigandha Flavoured Pan Masala 18 gm – Jhansi Kart

ಆದರೆ ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವಾಗಲೇ ಯುಪಿ ಸರ್ಕಾರವು ಮೇ 6 ರಂದು ಇದ್ದಕ್ಕಿದ್ದಂತೆ ಪಾನ್ ಮಸಾಲ ಮೇಲಿನ ನಿಷೇಧವನ್ನು ತೆಗೆದುಹಾಕಲು ನಿರ್ಧರಿಸಿತು. ತಂಬಾಕು ಅಥವಾ ನಿಕೋಟಿನ್ ಅನ್ನು ಹೊಂದಿರದ ಪಾನ್ ಮಸಾಲಾವನ್ನು ಮಾತ್ರ ಅನುಮತಿಸಲಾಗುವುದು ಎಂದು ತಿಳಿಸಿತು.

ನಿಷೇಧವನ್ನು ತೆಗೆದುಹಾಕುವ ಸರ್ಕಾರದ ಕ್ರಮ ಪ್ರಶ್ನಿಸಿ ಲಕ್ನೋ ಮೂಲದ ಪತ್ರಕರ್ತ ಸಂಜಯ್ ಶರ್ಮಾ ಅವರು ಪಿಐಎಲ್ ಸಲ್ಲಿಸಿದ್ದಾರೆ.

ಇತ್ತೀಚೆಗೆ ಯುಪಿ ಸರ್ಕಾರದ ಆಹಾರ ಸುರಕ್ಷತೆ ಮತ್ತು ಔಷಧಿಗಳ ಆಡಳಿತದ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಐಎಎಸ್ ಅಧಿಕಾರಿ ಅನಿತಾ ಸಿಂಗ್, ಉದ್ಯಮದ ಜೊತೆಗೆ ರೈತರ ಬಗೆಗಿನ ವಿಶಾಲ ಹಿತದೃಷ್ಟಿಯಿಂದ ಇದನ್ನು ಮಾಡಬೇಕಾಗಿದೆ ಎಂಬ ಮನವಿಯನ್ನು ಮಂಡಿಸಿದರು. “ನಿಷೇಧದ ಕಾರಣದಿಂದಾಗಿ ಪಾನ್ ಉದ್ಯಮ ಮತ್ತು ಕೃಷಿ ಸಮುದಾಯ ಎರಡೂ ಗಂಭೀರ ಪರಿಣಾಮ ಎದುರಿಸಿದೆ. ಮಸಾಲದ ಎಲ್ಲಾ ಕಚ್ಚಾ ವಸ್ತುಗಳು ರೈತರಿಂದ ಬರುವುದರಿಂದ ಉದ್ಯಮದ ಮೇಲಿನ ಇಲಾಖೆಯು ನಿಷೇಧವನ್ನು ತೆಗೆದುಹಾಕುವ ಕ್ರಮವನ್ನು ಅಂತಿಮ ನಿರ್ಧಾರವನ್ನು ಉನ್ನತ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.

ರಜನಿಗಂಧ ಕಂಪನಿಯು ತನ್ನ ಅಫಿಡವಿಟ್ನಲ್ಲಿ “ಪಾನ್‌ ಮಸಾಲ ಕೇವಲ ಮೌತ್ ಫ್ರೆಶನರ್ ಆಗಿದೆ, ಅದು ತಂಬಾಕನ್ನು ಹೊಂದಿರುವುದಿಲ್ಲ. ಸಾವಿರಾರು ಜನರ ಜೀವನೋಪಾಯವು ಪಾನ್‌ ಮಸಾಲದ ವ್ಯವಹಾರದೊಂದಿಗೆ ಸಂಬಂಧ ಹೊಂದಿದೆ. ಹಾಗಾಗಿ ನಾವು ಉತ್ಪನ್ನದ ಮಾರಾಟವನ್ನು ಸಮರ್ಥಿಸಿಕೊಳ್ಳುತ್ತೇವೆ. ಆದ್ದರಿಂದ ಇದು ಯಾವುದೇ ನಿಷೇಧದಿಂದ ಮುಕ್ತವಾಗಿರಬೇಕು” ಎಂದಿದೆ.

ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 8 ಕ್ಕೆ ನಿಗದಿಪಡಿಸಲಾಗಿದೆ. ಕೋರ್ಟ್ ಏನು ತೀರ್ಪು ನೀಡಲಿದೆ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights