ಪೆಟ್ರೋಲ್‌ ದರವನ್ನೂ ಹಿಂದಿಕ್ಕಿದ ಡೀಸೆಲ್‌; ಇಂದು ತೈಲಗಳ ಬೆಲೆ ಎಷ್ಟು ಗೊತ್ತಾ?

ದೇಶಾದ್ಯಂತ ಕಳೆದ 17 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಆದರೆ, ಇಂದು (ಬುಧವಾರ) ಡೀಸೆಲ್‌ ದರದಲ್ಲಾಗಿರುವ ಬದಲಾವಣೆ ಅಚ್ಚರಿಯನ್ನುಂಟು ಮಾಡಿದೆ. ಇಂದು ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಿದ್ದು, ಡೀಸೆಲ್‌ ದರವು ಪೆಟ್ರೋಲ್‌ಗಿಂತಲೂ ಅಧಿಕವಾಗಿವಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಪೆಟ್ರೋಲ್‌ ದರಕ್ಕಿಂತಲೂ ಡೀಸೆಲ್ ದರ ಹೆಚ್ಚಳವಾಗಿದೆ.

ದಿಲ್ಲಿಯಲ್ಲಿ ಬುಧವಾರ ಪೆಟ್ರೋಲ್‌ ದರ ₹79.76 ರೂ ಆಗಿದ್ದು, ಡೀಸೆಲ್‌ ದರವು ₹79.88 ರೂಗೆ ಏರಿಕೆಯಾಗಿದೆ. ಪೆಟ್ರೋಲ್‌ ನೆಲೆಗಿಂತಲೂ ಡೀಸೆಲ್‌ ದರ 12 ಪೈಸೆಯಷ್ಟು ಹೆಚ್ಚಾಗಿದೆ.

ಡೀಸೆಲ್‌ ದರವು ಪೆಟ್ರೋಲ್‌ ದರವನ್ನು ಹಿಂದಿಕ್ಕಿರುವುದು ದಿಲ್ಲಿಯಲ್ಲಿ ಮಾತ್ರವೇ. ಇತರೆ ರಾಜ್ಯಗಳಲ್ಲಿ ಪೆಟ್ರೋಲಿಗಿಂತ ಕಡಿಮೆ ದರದಲ್ಲೇ ಡೀಸೆಲ್‌ ಲಭ್ಯವಾಗುತ್ತಿದೆ. ಆದರೆ, ಡೀಸೆಲ್‌ ಮತ್ತು ಪೆಟ್ರೋಲ್‌ ಬೆಲೆಗಳ ಅಂತರ ಸಣ್ಣದಾಗುತ್ತ ಬರುತ್ತಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ 2012ರಲ್ಲಿ ದಿಲ್ಲಿಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳ ಅಂತರ 30.25 ರೂಪಾಯಿಯಷ್ಟಿತ್ತು. ಅಂದರೆ, 2012ರ ಜೂನ್‌ 18ರಂದು ಪೆಟ್ರೋಲ್‌ ಬೆಲೆ 71.16 ರೂಪಾಯಿ ಇದ್ದರೆ, ಡೀಸೆಲ್‌ ಬೆಲೆ 40.91 ರೂಪಾಯಿ ಇತ್ತು. ಮುಂಬೈನಲ್ಲಿ ಕೂಡ ಬೆಲೆಗಳ ಅಂತರ 31.17 ರೂಪಾಯಿಯಷ್ಟಿತ್ತು. 2012ರ ಜೂನ್ 28ರಂದು ಪೆಟ್ರೋಲ್‌ ಬೆಲೆ 76.45 ರೂಪಾಯಿ ಇದ್ದರೆ, ಡೀಸೆಲ್ ಬೆಲೆ 45.28ರಷ್ಟುತ್ತು.

ಭಾರತದಲ್ಲಿ ಸಾಂಪ್ರದಾಯಿಕವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳ ನಡುವೆ ಹೆಚ್ಚು ಅಂತರವನ್ನು ಕಾಯ್ದುಕೊಳ್ಳಲಾಗಿತ್ತು. ಪೆಟ್ರೋಲ್‌ ಗಿಂತಲೂ ಡೀಸೆಲ್‌ ಬೆಲೆಯನ್ನು ಕಡಿಮೆ ನಿಗದಿಪಡಿಸಲಾಗಿತ್ತು. ಡೀಸೆಲ್‌ಅನ್ನು ಸಾರಿಗೆಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಬಳಸುವ ಕಾರಣ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಡೀಸೆಲ್‌ ಮೇಲೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳೆರಡೂ ಕಡಿಮೆ ತೆರಿಗೆ ವಿಧಿಸುತ್ತಿದ್ದವು. ಆದರೀಗ ಕೇಂದ್ರ ಮತ್ತು ರಾಜ್ಯಗಳೆರಡೂ ಡೀಸೆಲ್‌ ಮೇಲಿನ ತೆರಿಗೆಯನ್ನೂ ಹೆಚ್ಚಿಸುತ್ತ ಬಂದಿವೆ. ಹೀಗಾಗಿ ಡೀಸೆಲ್‌ ಬೆಲೆಯೂ ಪೆಟ್ರೋಲ್‌ ಬೆಲೆಯ ಸಮೀಪಕ್ಕೆ ಬಂದು ನಿಂತಿದೆ. ದಿಲ್ಲಿಯಲ್ಲಿ ಪೆಟ್ರೋಲ್‌ ಬೆಲೆಯನ್ನೇ ಹಿಂದಿಕ್ಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights