ಭಾರತದ ಆರ್ಥಿಕ ಸಮಸ್ಯೆಗೆ ಮರುಪಾವತಿಯಾಗದ ಸಾಲವೇ ಕಾರಣ: ರಘುರಾಮ್‌ ರಾಜನ್

ಭಾರತದ ಆರ್ಥಿಕ ಸಮಸ್ಯೆಗೆ ಬ್ಯಾಂಕುಗಳಲ್ಲಿ ಮರುಪಾವತಿಯಾಗದ ಸಾಲ (NPA) ವೇ ಕಾರಣವಾಗಿದೆ. ಭಾರತೀಯ ಬ್ಯಾಂಕುಗಳು ಉದ್ಯಮಿಗಳಿಗೆ ನೀಡಿರುವ ಸಾಲದ ಗಾತ್ರವು ಮುಂದಿನ ಆರು ತಿಂಗಳಲ್ಲಿ ಯಾರೂ ಊಹಿಸದ ಮಟ್ಟಕ್ಕೆ ಬೆಳೆಯಲಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಗಮನ ಹರಿಸದಿದ್ದರೆ, ಮತ್ತಷ್ಟು ಬಿಕ್ಕಟ್ಟು ಎದುರಾಗಿದೆ ಎಂದು ಆರ್‌ಬಿಐ ಮಾಜಿ ಗವರ್ನರ್‌ ರಘುರಾಂ ರಾಜನ್‌ ಹೇಳಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ಹೇರಲಾದ ಲಾಕ್‌ಡೌನ್‌ಗಳು ಆರ್ಥಿಕ ವ್ಯವಹಾರಗಳಿಗೆ ಬಲವಾದ ಹೊಡೆತ ನೀಡಿವೆ. ಕೆಲವರು ಸಾಲದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರಕಾರವು ಹೇಳುವಂತೆ ಜನಧನ ಯೋಜನೆಯು ದೊಡ್ಡ ಯಶಸ್ಸೇನೂ ಪಡೆದಿಲ್ಲ. ಅದೂ ಕೂಡ ಜನರನ್ನು ಸರಿಯಾದ ರೀತಿಯಲ್ಲಿ, ಸರಿಯಾದ ಸಮಯಕ್ಕೆ ತಲುಪುವಲ್ಲಿ ವಿಫಲವಾಗಿದೆ ಎಂದು ರಾಜನ್‌ ಹೇಳಿದ್ದಾರೆ.

ಭಾರತದಲ್ಲಿ ಲಾಕ್‌ಡೌನ್ ಏರಿಕೆಯಾದ ಸಂದರ್ಭದಲ್ಲಿ ರಘುರಾಮ್ ರಾಜನ್ ಅವರು ದೇಶದ ಆರ್ಥಿಕತೆ ಕುರಿತು ಹೇಳಿಕೆ ನೀಡಿದ್ದರು. ಆರ್ಥಿಕತೆಯ ದೃಷ್ಠಿಕೋನದಲ್ಲಿ ಮಾತನಾಡುವುದಾದರೆ ಸ್ವಾತಂತ್ರ್ಯ ನಂತರ ಭಾರತ ಅತೀ ದೊಡ್ಡ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ ಹೇಳಿದ್ದರು.

ಕೃಷಿ ವಲಯವು ತುಸು ಆಶಾದಾಯಕವಾಗಿದೆ. ಇದು ದೇಶದ ಆರ್ಥಿಕತೆಗೆ ಸಂಬಂಧಿಸಿದಂತೆ ಇರುವ ಒಂದೇ ಒಂದು ಸಕಾರಾತ್ಮಕ ಕ್ಷೇತ್ರವಾಗಿದೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಆದರೆ, ಅದೂ ಕೂಡ ಆಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೂ ನಾವು ಹತಾಶೆಗೊಳ್ಳಬೇಕಿಲ್ಲ. ಸರಿಯಾದ ಸಂಕಲ್ಪ ಮತ್ತು ಆದ್ಯತೆಗಳ ಜೊತೆಗೆ ಶಕ್ತಿಯುತ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಳ್ಳುವುದಾದರೆ ಕೊರೊನಾವನ್ನು ನಿಯಂತ್ರಿಸಬಹುದು. ದೇಶದ ಭವಿಷ್ಯಕ್ಕೆ ಭದ್ರ ಬುನಾದಿಯನ್ನೂ ಹಾಕಬಹುದು ಎಂದು ರಾಜನ್‌ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights