ರಾಮ ಮಂದಿರ ಕಟ್ಟುವುದರಿಂದ ಕೊರೊನಾ ಹೋಗುತ್ತದೆ ಎಂದು ಮೋದಿ ಭಾವಿಸಿದ್ದಾರೆ: ಶರದ್ ಪವಾರ್‌

ಇಡೀ ಜಗತ್ತು ಕೊರೊನಾ ಸಂಕಷ್ಟದಲ್ಲಿ ನಲುಗಾಡುತ್ತಿದೆ. ಭಾರತದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ದಿನ ಕಳೆದಂತೆ ದ್ವಿಗುಣವಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಅಗತ್ಯವಿರುವ ತಯಾರಿಗಳನ್ನು ನಡೆಸದೇ ಕೊರೊನಾ ನಿಯಂತ್ರಣದಲ್ಲಿ ವಿಫಲವಾಗಿದೆ. ಈ ಮಧ್ಯೆ, ಕೊರೊನಾ ಬಿಕ್ಕಟ್ಟಿನ ನಡುವೆಯೂ ಆಗಸ್ಟ್‌ 05 ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಲು ಮಂದಾದಿದ್ದಾರೆ. ಮೋದಿಯವರ ನಡೆ ಸಧ್ಯ ದೇಶಾದ್ಯಂತ ಟೀಕೆಗೆ ಗುರಿಯಾಗಿದೆ.

ಕೊರೊನಾ ಲಾಕ್‌ಡೌನ್, ಸಾಮಾಜಿಕ ಅಂತರ, ಸಾಮಾಜಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಿರುವ ಸಂದರ್ಭದಲ್ಲಿಯೂ ಮೋದಿಯವರು ರಾಮಮಂದಿರಕ್ಕೆ ಅಡಿಪಾಯ ಹಾಕಲು ಮುಂದಾಗಿರುವುದನ್ನು ಪ್ರಶ್ನಿಸಿರುವ ಎನ್‌ಸಿಪಿ ಪಕ್ಷದ ನಾಯಕ ಶರದ್ ಪವಾರ್, “ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ, ಕೊರೋನಾದಿಂದ ಈ ದೇಶ ಮುಕ್ತವಾಗಲಿದೆಯೇ?” ಎಂದು ಪ್ರಶ್ನಿಸಿದ್ದಾರೆ.

Sharad Pawar takes a swipe at Modi, says 'some think coronavirus ...
ಶರದ್ ಪವಾರ್

“ದೇವಾಲಯವನ್ನು ನಿರ್ಮಿಸುವ ಮೂಲಕ ಕೊರೋನಾವನ್ನು ತೊಲಗಿಸಬಹುದು ಎಂದು ಕೆಲವರು ಭಾವಿಸಿದ್ದಾರೆಯೇ?, ಬಹುಶಃ ಅವರು ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡೆ ದೇವಾಲಯ ನಿರ್ಮಾಣ ಕಾರ್ಯಕ್ಕೆ ಯೋಜಿಸಿದ್ದಾರೆಯೇ? ನನಗೆ ಗೊತ್ತಿಲ್ಲ. ಆದರೆ, ಇಂತಹ ಸಂದರ್ಭದಲ್ಲಿ ದೇವಾಲಯಕ್ಕಿಂತ ಮಾರಣಾಂತಿಕ ವೈರಸ್‌ನಿಂದ ಜನರನ್ನು ರಕ್ಷಿಸುವುದು ಮತ್ತು ಸಹಾಯ ಮಾಡುವುದು ಮೊದಲ ಆದ್ಯತೆಯಾಗಬೇಕಿದೆ” ಎಂದು ಪವಾರ್ ಟೀಕಿಸಿದ್ದಾರೆ.

“ನನ್ನ ಪ್ರಕಾರ ಕೊರೋನಾ ವೈರಸ್ ಇದೀಗ ದೇಶಕ್ಕೆ ದೊಡ್ಡ ಬೆದರಿಕೆಯಾಗಿ ಬದಲಾಗಿದೆ. ತುರ್ತಾಗಿ ಈ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕಿದೆ. ಕೇಂದ್ರ ಮತ್ತು ರಾಜ್ಯ ಎರಡೂ ಸರ್ಕಾರಗಳೂ ಈ ವಿಚಾರದ ಮೇಲೆ ಗಮನವನ್ನು ಕೇಂದ್ರೀಕರಿಸಬೇಕಿದೆ” ಎಂದು ಶರದ್ ಪವಾರ್ ಸಲಹೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲು ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಆಗಸ್ಟ್ 05ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1.10 ರ ನಡುವೆ ಪ್ರಧಾನಿ ಮೋದಿ ಅಯೋಧ್ಯೆಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ರಾಮ ಮಂದಿರ ಕಟ್ಟುವುದರಿಂದ ಕೊರೊನಾ ಹೋಗುತ್ತದೆ ಎಂದು ಮೋದಿ ಭಾವಿಸಿದ್ದಾರೆ: ಶರದ್ ಪವಾರ್‌”

  • September 23, 2020 at 12:29 am
    Permalink

    First off I would like to say great blog! I had a quick question which I’d like to ask if
    you don’t mind. I was interested to find out how you center yourself and clear your thoughts prior to writing.
    I’ve had a difficult time clearing my mind in getting my thoughts out.
    I do enjoy writing however it just seems like the first 10 to 15 minutes are
    generally wasted just trying to figure out how to begin. Any suggestions or tips?
    Many thanks!

    Reply

Leave a Reply

Your email address will not be published.

Verified by MonsterInsights