ಕಲಬುರ್ಗಿ ಆಸ್ಪತ್ರೆಯಲ್ಲಿ ಹಂದಿಗಳ ಆಟ; ರಾಷ್ಟ್ರೀಯ ಸುದ್ದಿಮಾಡಿದ್ದಕ್ಕೆ ಬಿಜೆಪಿಗೆ ಅಭಿನಂದನೆ: ಪ್ರಿಯಾಂಕ್ ಖರ್ಗೆ
ಕಲಬುರ್ಗಿಯ ಜಿಲ್ಲಾ ಆಸ್ಪತ್ರೆ ಜಿಮ್ಸ್‌ನಲ್ಲಿ ವೈದ್ಯರು ಮತ್ತು ರೋಗಿಗಳಿಗಿಂತ ಹೆಚ್ಚಾಗಿ ಹಂದಿಗಳೇ ಬಿಂದಾಸ್ ಆಗಿ ಅಡ್ಡಾಡುತ್ತಿವೆ. ಸದ್ಯ ಜಿಮ್ಸ್ ಆಸ್ಪತ್ರೆಯಲ್ಲಿ ಹಂದಿಗಳು ಅಲೆದಾಡುತ್ತಿರುವ ಸುದ್ದಿಯಲ್ಲಿ ರಾಷ್ಟ್ರೀಯ ಸುದ್ದಿವಾಹಿನಿಯೊಂದು ಪ್ರಸಾರ ಮಾಡಿತ್ತು. ಈ ಸುದ್ದಿ ರಾಷ್ಟ್ರವ್ಯಾಪಿ ಪ್ರಸಾರವಾಗಿದೆ. ಈ ಬಗ್ಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಸಿದ್ದು, “ಆಸ್ಪತ್ರೆಯಲ್ಲಿ ಹಂದಿಗಳು ಅಡ್ಡಾಡುವುದನ್ನು ರಾಷ್ಟ್ರವ್ಯಾಪಿ ಹೈಲೆಟ್ ಮಾಡಿದ ಬಿಜೆಪಿ ಸರ್ಕಾರಕ್ಕೆ ಅಭಿನಂದನೆ” ಎಂದು ವ್ಯಂಗ್ಯವಾಗಿ ಟೀಕಿಸಿದ್ದಾರೆ.
“ಜಿಮ್ಸ್ ಹಂದಿಗಳ ತಾಣವಾಗಿರುವುದು ರಾಷ್ಟ್ರೀಯ ವಾಹಿನಿಗಳಲ್ಲಿಯೂ ವರದಿಯಾಗಿದೆ. ಕಲ್ಯಾಣ ಕರ್ನಾಟಕ ರಾಷ್ಟ್ರೀಯ ಮಟ್ಟದಲ್ಲಿ ಹೈಲೈಟ್ ಆಗಿದೆ. ಹೀಗೆ ಹೈಲೈಟ್ ಆಗುವಂತೆ ಮಾಡಿರುವ ಬಿಜೆಪಿಗೆ ಅಭಿನಂದನೆ” ಎಂದು ಪ್ರಿಯಾಂಕ್ ಖರ್ಗೆ ಟ್ಟೀಟ್ ಮಾಡಿದ್ದಾರೆ.
“ದೇಶದಲ್ಲಿಯೇ ಮೊದಲ ಕೊರೊನಾ ಸಾವಿನ ವರದಿಯಾದದ್ದು ಕಲಬುರ್ಗಿಯಲ್ಲಿ. ಇಷ್ಟಾದರೂ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ನಾವೆಲ್ಲಾ ಏನು ಪಾಠ ಕಲಿತಿದ್ದೇವೆ. ಬೇರೆಯವರಿಗೆ ಏನು ಸಂದೇಶ ರವಾನಿಸಿದ್ದೇವೆ. ಸ್ಟಾಂಡರ್ಡ್ ಅಪರೇಷನ್ ಪ್ರೊಸಿಜರ್ ನಿಯಮ ಪಾಲನಿಯಾಗಿದೆಯೇ. ಕೊರೊನಾ ನಿಯಂತ್ರಣಕ್ಕೆ ಆದ್ಯತೆ ನೀಡುವ ಬದಲಿಗೆ, ಬಿಜೆಪಿ ಸರ್ಕಾರ ಲಾಭ ಮಾಡಿಕೊಳ್ಳೋದರಲ್ಲಿ ಬಿಜಿಯಾಗಿದೆ” ಎಂದು ಪ್ರಿಯಾಂಕ್ ಕಿಡಿಕಾರಿದ್ದಾರೆ.
Congratulations @BJP4Karnataka you have put Kalayana Karnataka on national TV. The 1st reported COVID death in the country was Kalaburagi. What are the lessons we have learnt? What did we teach others? What are the SOPs being followed? NOTHING!
BJP Govt is busy making profits! https://t.co/WcezceiNbo— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) July 19, 2020
ಕಲಬುರ್ಗಿಯ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ಹಂದಿ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಎರಡು ದಿನಗಳಲ್ಲಿ 620 ಹಂದಿಗಳನ್ನು ಪಾಲಿಕೆ ಮಹಾನಗರ ಪಾಲಿಕೆ ಹಿಡಿದ್ದಾರೆ. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಕೇಂದ್ರದಲ್ಲಿಯೇ ಹಂದಿಗಳು ಬೇಕಾಬಿಟ್ಟಿ ಅಡ್ಡಾಡುತ್ತಿದ್ದವು. ಹಂದಿಗಳ ದೊಡ್ಡ ಹಿಂಡೇ ಜಿಮ್ಸ್ ಆಸ್ಪತ್ರೆಯಲ್ಲಿ ಅಡ್ಡಾಟ ನಡೆಸಿತ್ತು. ಕೆಲ ಹಂದಿಗಳನ್ನು ಹಿಡಿಯಾಲಗಿದ್ದು, ಇನ್ನೂ ಹಂದಿಗಳ ಕಾರ್ಯಾಚರಣೆ ಮುಂದುವರೆಸಲಾಗಿದೆ.
ಹಂದಿಗಳ ಹಾವಳಿ ಕುರಿತು ಹಲವಾರು ಜನ ಈ ಬಗ್ಗೆ ದೂರು ನೀಡಿದ್ದರೂ ಜಿಮ್ಸ್ ನಿರ್ದೇಶಕರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಕಿಡಿಕಾರಿದ್ದಾರೆ. ಹೀಗಾಗಿ ನಾನೇ ಖುದ್ದು ಜಿಮ್ಸ್ ಗೆ ಭೇಟಿ ನೀಡಿದ್ದೇನೆ. ಎರಡು ದಿನಗಳಲ್ಲಿ ಕೆಲ ಹಂದಿಗಳನ್ನು ಹಿಡಿಯಲಾಗಿದೆ. ಉಳಿದ ಹಂದಿಗಳನ್ನೂ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶರತ್ ಬಿ. ಮಾಹಿತಿ ನೀಡಿದ್ದಾರೆ.
ಜಿಮ್ಸ್ ನಲ್ಲಿ ಹಂದಿಗಳು ಬಿಂದಾಸ್ ಆಗಿ ಅಡ್ಡಾಡುವುದರ ಬಗ್ಗೆ ನ್ಯೂಸ್ 18 ವರದಿ ಮಾಡಿತ್ತು. ಇದರ ಬೆನ್ನ ಹಿಂದೆಯೇ ಜಿಮ್ಸ್ ಗೆ ಭೇಟಿ ನೀಡಿದ್ದ ಡಿಸಿ ಶರತ್ ಬಿ, ಜಿಲ್ಲಾ ಪಂಚಾಯತ್ ಸಿಇಒ ಪಿ.ರಾಜಾ ಹಾಗೂ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಜಿಮ್ಸ್ ಅದ್ವಾನದ ಸ್ಥಿತಿ ಪರಿಶೀಲಿಸಿದ್ದರು. ಹಂದಿಗಳಿಗೆ ಹೆಡೆಮುರಿಗೆ ಕಟ್ಟಲು ಆದೇಶಿಸಿದ್ದರು. ಹಂದಿ ಮಾಲೀಕನ ವಿರುದ್ಧ ಎಫ್.ಐ.ಆರ್. ದಾಖಲಿಸಲೂ ಸೂಚಿಸಲಾಗಿದೆ.
ಇದನ್ನೂ ಓದಿ: ಸೋಂಕಿತರ ಮನೆಗೆ ಬೋರ್ಡು ನವಯುಗದ ಸಾಮಾಜಿಕ ತಾರತಮ್ಯ, ಅಸ್ಪೃಶ್ಯತೆಗೆ ಕಾರಣ: ಎಚ್ಡಿಕೆ ಕಿಡಿ

