ವಿದೇಶಿ ವಿದ್ಯಾರ್ಥಿಗಳನ್ನು ಹೊರಹಾಕುವ ನೀತಿ; ಟ್ರಂಪ್‌ ಆಡಳಿತದ ವಿರುದ್ಧ ಮೊಕದ್ದಮೆ ದಾಖಲಿಸಿದ 17 ಕಂಪನಿಗಳು!

ವಿದೇಶಿ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉಳಿಯದಂತೆ ತಡೆದು ಅವರನ್ನು ಸ್ವದೇಶಗಳಿಗೆ ವಾಪಸ್‌ ಕಳಿಸುವ ಟ್ರಂಪ್ ನೀತಿಯ ವಿರುದ್ಧ ಹಾರ್ವಡ್ ವಿಶ್ವವಿದ್ಯಾಲಯ ಮತ್ತು ಎಂಐಟಿ ಸಲ್ಲಿಸಿರುವ ಮೊಕದ್ದಮೆಗೆ ಗೂಗಲ್, ಫೇಸ್ ಬುಕ್ ಮತ್ತು ಮೈಕ್ರೋಸಾಫ್ಟ್ ಸೇರಿದಂತೆ ಅಮೆರಿಕಾದ 17ಕ್ಕೂ ಹೆಚ್ಚು ತಂತ್ರಜ್ಞಾನ ಕಂಪನಿಗಳು ಕೈಜೋಡಿಸಿವೆ.

ಕೊರೊನಾ ಸೋಂಕಿನ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ವಿದೇಶಿ ಪ್ರಯಾಣವನ್ನು ತಡೆಯುವ ಪ್ರಯತ್ನದ ಭಾಗವಾಗಿ, ಕನಿಷ್ಠ ಒಂದು ವೈಯಕ್ತಿಕ ಕೋರ್ಸ್ ನಲ್ಲಿ  ( ಒನ್-ಇನ್- ಪರ್ಸನ್  ಕೋರ್ಸ್ ) ಪಾಲ್ಗೊಳ್ಳದ ಹೊರತು ಅವರಿಗೆ ಅಮೆರಿಕಾದಲ್ಲಿ ಉಳಿಯಲು ಅವಕಾಶವಿಲ್ಲ ಎಂದು ಟ್ರಂಪ್ ಆಡಳಿತ ಘೋಷಿಸಿರುವ ವಿದೇಶಿ ವಿದ್ಯಾರ್ಥಿಗಳಿಗೆ ಹೊಸ ತಾತ್ಕಾಲಿಕ ವೀಸಾ ನೀತಿಯ ವಿರುದ್ಧ ನ್ಯೂಜೆರ್ಸಿ, ಕೊಲೊರಾಡೊ
ಮತ್ತಿತರ ಕೊಲಂಬಿಯಾ ಸೇರಿದಂತೆ ಅಮೆರಿಕಾದ 17 ರಾಜ್ಯಗಳು ಮತ್ತೊಂದು ಮೊಕದ್ದಮೆಯನ್ನು ಹೂಡುತ್ತಿವೆ.

ಅಮೆರಿಕಾದ ವ್ಯವಹಾರದಲ್ಲಿ ಅರ್ಧಕ್ಕೂ ಹೆಚ್ಚಿನ ಸಂಖ್ಯೆಯ ವಿದೇಶಿ ವಿದ್ಯಾರ್ಥಿಗಳ ನೇಮಕವನ್ನು ತಡೆಯುವುದರಿಂದ ಇಡೀ ಆರ್ಥಿಕತೆ ಹಾಗೂ ಕಂಪನಿಗಳಿಗೆ ನಷ್ಟವಾಗಲಿದೆ. ವಿದೇಶಿ ವಿದ್ಯಾರ್ಥಿಗಳು ದೇಶದಲ್ಲಿ ಉಳಿಯಲು ಅವಕಾಶವಿದ್ದ ಹಿಂದಿನ ನೀತಿಗಳಿಗೆ ಆದ್ಯತೆ ನೀಡಬೇಕೆಂದು ಕಂಪನಿಗಳು ಆಗ್ರಹಿಸಿವೆ.

ಅಮೆರಿಕಾದ ವ್ಯವಹಾರಕ್ಕಾಗಿ ವಿದೇಶಿ ವಿದ್ಯಾರ್ಥಿಗಳು ಪ್ರಮುಖ ಆದಾಯದ ಮೂಲವಾಗಿದ್ದಾರೆ. ವಿದೇಶಿ ವಿದ್ಯಾರ್ಥಿಗಳು ಅಮೆರಿಕಾದಲ್ಲಿ ಉಳಿದರೂ ಅಥವಾ ಅವರ ಸ್ವ ದೇಶಗಳಿಗೆ ಮರಳಿದರೂ ಪ್ರಮುಖ ನೌಕರರು ಅಥವಾ ಗ್ರಾಹಕರಾಗಿ ಅಮೆರಿಕಾ ವ್ಯವಹಾರದಲ್ಲಿ  ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ಕಂಪನಿಗಳು ಹೇಳಿವೆ.

ಅಮೆರಿಕಾದಲ್ಲಿರುವ ವಿದೇಶಿ ವಿದ್ಯಾರ್ಥಿಗಳು ದೇಶದ ಜಿಡಿಪಿ ಬೆಳವಣಿಗೆಯಲ್ಲಿ ಪ್ರಮುಖ ಕೊಡುಗೆ ನೀಡುತ್ತಿದ್ದು, ನಗರದಲ್ಲಿರುವ ಕಾಲೇಜ್ ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಹತ್ವಪೂರ್ಣವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಐಟಿ ಕಂಪನಿಗಳು ಹೇಳಿವೆ.

ಹೋಮ್ ಲ್ಯಾಂಡ್ ಸೆಕ್ಯೂರಿಟಿ ಇಲಾಖೆ, ಅಮೆರಿಕಾದ ಐಸಿಇ  ವಿರುದ್ಧ ಮ್ಯಾಸಚೂಸೆಟ್ಸ್ ಜಿಲ್ಲಾ ನ್ಯಾಯಾಲಯದಲ್ಲಿ ಕಂಪನಿಗಳು ದೂರು ದಾಖಲಿಸಿವೆ. ವಿದೇಶಿ ವಿದ್ಯಾರ್ಥಿಗಳನ್ನು ಹೊರಹಾಕಲು ಅಕ್ರಮ, ಕ್ರೂರ ನೀತಿಯನ್ನು ಫೆಡರಲ್ ಸರ್ಕಾರ ಜಾರಿಗೆ ತಂದಿವೆ ಎಂದು 18 ಅಟಾರ್ನಿ ಜನರಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿಅಮೆರಿಕಾದಲ್ಲಿ ಹೆಚ್‌-1ಬಿ ವೀಸಾ ವಿತರಣೆ ರದ್ದು; ಭಾರತೀಯ ವಲಸಿಗರಿಗೆ ನಿರಾಶೆ!


ಇದನ್ನೂ ಓದಿಯುಎಸ್ ಹೊಸ ನಿಯಮ : “ಆನ್‌ಲೈನ್ ಕ್ಲಾಸಸ್ ತೆಗೆದುಕೊಳ್ಳುವ ವಿದೇಶಿ ವಿದ್ಯಾರ್ಥಿಗಳು ತವರಿಗೋಗಿ”

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights