ಸಂಪೂರ್ಣ ನಿಷ್ಕ್ರಿಯವಾದ ಟಿಕ್ಟಾಕ್; ಸರ್ಕಾರದ ಆದೇಶ ಪಾಲಿಕೆ; ಮುಂದೇನು ಟಿಕ್ಟಾಕ್ ನಡೆ!
ಟಿಕ್ಟಾಕ್ ಈಗ ಭಾರತದಲ್ಲಿ ಕೆಲಸ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಕಳೆದ ರಾತ್ರಿ ಭಾರತ ಸರ್ಕಾರ ಟಿಕ್ಟಾಕ್ಗೆ ನಿಷೇಧ ಹೇರಿದ ನಂತರ, ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ನಿಂದ ತೆಗೆದುಹಾಕಲಾಗಿದೆ.
ಆದಾಗ್ಯೂ, ಇದು ಈಗಾಗಲೇ ಇನ್ಸ್ಟಾಲ್ ಮಾಡಿಕೊಂಡಿರುವವರ ಮೊಬೈಲ್ನಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿತ್ತು. ಆದರೆ ಈಗ, ಟಿಕ್ಟಾಕ್ ಅಪ್ಲಿಕೇಶನ್ ಡೆಸ್ಕ್ಟಾಪ್ ವೆಬ್ಸೈಟ್ ಸೇರಿದಂತೆ ಎಲ್ಲಾ ರೀತಿಯ ಮೊಬೈಲ್, ಟ್ಯಾಬ್ಗಳಲ್ಲಿಯೂ ಕಾರ್ಯನಿರ್ವಹಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಅಲ್ಲದೆ, ಬಳಕೆದಾರರಿಗೆ ಸೂಚನೆಯನ್ನೂ ನೀಡುತ್ತಿದ್ದು, ನಿಷೇಧದ ಬಗೆಗೆನ ಮಹಿತಿಯನ್ನು ಆ್ಯಪ್ ತೆರೆದಾಗ ಪ್ರದರ್ಶಿಸುತ್ತಿದೆ.
ಟಿಕ್ಟಾಕ್ ಅಪ್ಲಿಕೇಶನ್ ಈಗ ನೆಟ್ವರ್ಕ್ ದೋಷವನ್ನು ತೋರಿಸುತ್ತಿದ್ದು, ಮಾಹಿತಿಯಲ್ಲಿ ಹೀಗಿದೆ: “ಪ್ರಿಯ ಬಳಕೆದಾರರೇ, ನಾವು 59 ಅಪ್ಲಿಕೇಶನ್ಗಳನ್ನು ನಿರ್ಬಂಧಿಸುವ ಭಾರತ ಸರ್ಕಾರದ ನಿರ್ದೇಶನವನ್ನು ಅನುಸರಿಸುವ ಪ್ರಕ್ರಿಯೆಯಲ್ಲಿದ್ದೇವೆ. ಭಾರತದಲ್ಲಿ ನಮ್ಮ ಎಲ್ಲ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವುದು ನಮ್ಮ ಅತ್ಯಂತ ಆದ್ಯತೆಯಾಗಿದೆ.” ಎಂದು ಟಿಕ್ಟಾಕ್ ಭಾರತೀಯ ತಂಡದ ಸಹಿಯೊಂದಿಗೆ ಪ್ರದರ್ಶನವಾಗುತ್ತಿದೆ.
ಅದಷ್ಟೇ ಅಲ್ಲದೆ, ಅಪ್ಲಿಕೇಶನ್ನಲ್ಲಿ ಹೊಸದಾಗಿ ಅಪ್ಲೋಡ್ ಮಾಡಲು ಶಿಫಾರಸು ಮಾಡಿದ ವೀಡಿಯೊಗಳನ್ನು ಲೋಡ್ ಮಾಡುತ್ತಿಲ್ಲ. ಬದಲಿಗೆ ನೆಟ್ವರ್ಕ್ ದೋಷವನ್ನು ತೋರಿಸುತ್ತದೆ. ಸರ್ಕಾರದ ನಿರ್ದೇಶನಗಳನ್ನು ಅನುಸರಿಸಲು ಕಂಪನಿಯು ಈ ಯೋಜನೆಯನ್ನು ಪೂರ್ವಭಾವಿಯಾಗಿ ಮಾಡಿದೆ ಎಂದು ಹೇಳಲಾಗಿದೆ.
ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಟಿಕ್ಟಾಕ್ ಅಪ್ಲಿಕೇಷನ್ ಬದ್ದವಾಗಿದ್ದು, ಸರ್ಕಾರದ ಜೊತೆಗೆ ಚರ್ಚಿಸುತ್ತಿದೆ ಎಂದೂ ಕೂಡ ಅಪ್ಲಿಕೇಷನ್ ಮಾಹಿತಿಯಲ್ಲಿ ಹೇಳಲಾಗಿದೆ. ಸಧ್ಯ, ಟಿಕ್ಟಾಕ್ ಸಂಪೂರ್ಣ ನಿಷ್ಕಷ್ರಿಯವಾಗಿದೆ.
ಇದನ್ನೂ ಓದಿ: 59 ಚೀನೀ ಆ್ಯಪ್ ನಿಷೇಧ; TikTok ಕಂಪನಿಗಾಗುತ್ತಾ ನಷ್ಟ! CEO ಹೇಳಿದ್ದೇನು?