Fact Check: ಭೂತ ಚೇಷ್ಟೆಯಿಂದ ಚಲಿಸುತ್ತಿತ್ತಾ ಉದ್ಯಾನವನದ ಜಿಮ್ ಉಪಕರಣ?

ದೆಹಲಿಯ ಸಾರ್ವಜನಿಕ ಉದ್ಯಾನವನವೊಂದರಲ್ಲಿ ಜಿಮ್ ಮಾಡಲು ಅಳವಡಿಸಲಾದ ಉಪಕರಣವೊಂದು, ಯಾರೂ ಅದನ್ನು ಬಳಸದಿದ್ದರೂ, ದೆವ್ವ,ಭೂತದ ಕಾರಣದಿಂದ ತನ್ನಿಂದ ತಾನೇ ಚಲಿಸುತ್ತದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆದರೆ ಆ ವಿಡಿಯೋ ದೆಹಲಿಯ ಬದಲಿಗೆ ಉತ್ತರ ಪ್ರದೇಶದ ಝಾನ್ಸಿಯ ಸಾರ್ವಜನಿಕ ಉದ್ಯಾನವನದ್ದಾಗಿದೆ ಎಂದು ಫ್ಯಾಕ್ಟ್ಲಿ ಪತ್ತೆ ಹಚ್ಚಿದೆ. ದೆವ್ವದ ಚೇಷ್ಟೆಯಿಂದ ಜಿಮ್ ಉಪಕರಣ  ಚಲಿಸುತ್ತಿದೆ ಎಂಬ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಝಾನ್ಸಿ ಪೊಲೀಸರು ಟ್ವೀಟ್‌ ಮಾಡುವುದರ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಈ ವ್ಯಾಯಾಮ ಉಪಕರಣಕ್ಕೆ ಹೆಚ್ಚಿನ ಪ್ರಮಾಣದ ಎಣ್ಣೆ ಮತ್ತು ಗ್ರೀಸ್‌ ಹಾಕಿರುವ ಕಾರಣದಿಂದ ಒಮ್ಮೆ ಅದನ್ನು ಮುಟ್ಟಿದರೆ ಕೆಲವು ಸೆಕಂಡ್ ಗಳ ಕಾಲ ತಾನೇ ತಾನಾಗಿ ಅದು ಚಲಿಸುತ್ತಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾರೋ ಕಿಡಿಗೇಡಿಗಳು ಈ ರೀತಿ ಒಮ್ಮೆ ಆ ಉಪಕರಣವನ್ನು ತಳ್ಳಿ ನಂತರ ಅದರ ವಿಡಿಯೋ ಮಾಡಿ  ಹರಿಯಬಿಟ್ಟಿದ್ದಾರೆ ಎಂದು ತಿಳಿಸಿರುವ ಪೊಲೀಸರು, ಯಾವುದೇ ಭೂತಚೇಷ್ಟೆ ಇದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಒಮ್ಮೆ ಪೊಲೀಸರೊಬ್ಬರು ಜಿಮ್ ಉಪಕರಣವನ್ನು ಮುಟ್ಟಿ ಅದು ಹೆಚ್ಚಿನ ಸಮಯದವರೆಗೆ ತಾನಾಗಿಯೇ ಚಲಿಸುವುದರ ವಿಡಿಯೋ ಮಾಡಿ ಅಪ್‌ಲೋಡ್‌ ಮಾಡಿದ್ದಾರೆ.

ಮೂಲಗಳು:
ಪ್ರತಿಪಾದನೆ 
1. ಫೇಸ್ಬುಕ್ ಪೋಸ್ಟ್ (ಆರ್ಕೈವ್)
ನಿಜಾಂಶ 
1. ಝಾನ್ಸಿ ಪೊಲೀಸರ ಮೊದಲ ಟ್ವೀಟ್: https://twitter.com/jhansipolice/status/1271646518521413632
2. ಝಾನ್ಸಿ ಪೊಲೀಸರ ಎರಡನೇ ಟ್ವೀಟ್:  https://twitter.com/jhansipolice/status/1271701267232903168

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights