PM Cares ಮಾಹಿತಿ ನೀಡದ ಮೋದಿ ಸರ್ಕಾರ: ವೆಂಟಿಲೇಟರ್ ಖರೀದಿಯಲ್ಲಿ ಅಕ್ರಮದ ವಾಸನೆ

ಕೊರೋನಾ ಸಂಕಷ್ಟದ ಸಮಯದಲ್ಲಿ ದಿಢೀರನೇ ಘೋಷಣೆಯಾದ PM Cares ವಿಶೇಷ ನಿಧಿ ವಿವಾದದ ಸುಳಿಯಿಂದ ಹೊರಬರುತ್ತಿಲ್ಲ…  ಪಿಎಂ ಕೇರ್ಸ್ ಅನ್ನು ವಿವಾದದ ಕೇಂದ್ರಬಿಂದುವಿನಿಂದ ಹೊರತರುವ ಯಾವುದೇ ಪ್ರಯತ್ನವನ್ನು ಬಿಜೆಪಿ ಮಾಡುತ್ತಿಲ್ಲ, ಜೊತೆಗೆ ಮೋದಿ ಸರಕಾರ ಕೂಡಾ ಕ್ಲೀನ್ ಚಿಟ್ ಪಡೆಯುವ ಪ್ರಯತ್ನ ಮಾಡುತ್ತಿಲ್ಲ…

ಈ ನೀಧಿಯ ಬಗ್ಗೆ ಯಾವುದೇ ಮಾಹಿತ ನೀಡಲು ಪಿಎಂ ಸಚಿವಾಲಯ ನಿರಾಕರಿಸಿದೆ. ಹೀಗಾಗಿ ನಿಧಿಗೆ ಈವರೆಗೆ ಎಷ್ಟು ಹಣ ದೇಣಿಗೆ ಬಂದಿದೆ, ಯಾವುದಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಇದನ್ನೇ ಮೋದಿ ವಿರೋಧದ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಈ ಹಣದ ಸದ್ವಿನಿಯೋಗದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಈ ನಿಧಿಯಲ್ಲಿನ ದುಡ್ಡು ಬಳಸಿಕೊಂಡು ವೆಂಟಿಲೇಟರುಗಳ ಖರೀದಿಯಲ್ಲಿ ಅಕ್ರಮದ ವಾಸನೆ ಇದೆ ಎಂದು ಅವರು ಆರೋಪಿಸಿದ್ದಾರೆ. ವೆಂಟಿಲೇಟರುಗಳ ಖರೀದಿಗೆ 2000 ಕೋಟಿ ರೂ ಮಂಜೂರಾಗಿದೆ. ತಲಾ ನಾಲ್ಕರಿಂದ ಐದು ಲಕ್ಷಗಳ ವೆಂಟಿಲೇಟರ್ ಬೆಲೆ ನಿಗದಿಯಾಗಿದೆ. ಆದರೆ ಅವುಗಳ ಪೂರೈಕೆ ಬೆಲೆ ಕೇವಲ 1-2 ಲಕ್ಷ ರೂಗಳಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಇದೇ ವಿಚಾರವಾಗಿ ಟ್ವಿಟರಿನಲ್ಲಿ#PMVentilatorScam ಎಂಬ ವಿಷಯ ಸಾಕಷ್ಟು ಗೌಜೆಬ್ಬಿಸಿದ್ದು, ನಾನಾ ರೀತಿಯ ಅಭಿಪ್ರಾಯಗಳಿಗೆ ಗ್ರಾಸ ಒದಗಿಸಿದೆ. ಈ ನಿಧಿಗೆ ಈವರೆಗೆ ಸುಮಾರು 10 ಸಾವಿರ ಕೋಟಿಗೂ ಹೆಚ್ಚಿನ ಹಣ ದೇಣಿಗೆ ರೂಪದಲ್ಲಿ ಸಂಗ್ರವಾಗಿದೆ ಎಂದು ಕೆಲವು ಸುದ್ದಿ ಮೂಲಗಳು ವರದಿ ಮಾಡಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights