ಚೀನಾದಿಂದ ಓಡಿಬಂತು ಕಳ್ಳ ಕೊರೊನಾ- ಏನೇ ಆಗ್ಲಿ ಬೆಂಗಳೂರಿನಲ್ಲೇ ಇರೋಣ – ರೆಮೋ ಹಾಡು ವೈರಲ್
ಕೊರೊನಾ ವೈರಸ್ ಅಧಿಕಗೊಳ್ಳುತ್ತಿದ್ದಂತೆ ಸೇಫ್ ಆಗಿರಲು ಕೆಲ ಗಾಯಕರು ಕೆಲ ಹಾಡುಗಳನ್ನು ಬರೆದು ಹಾಡಿದ್ದಾರೆ. ಇದಕ್ಕೆ ಗಾಯಕಿ ಹಾಗೂ ಸಂಗೀತ ನಿರ್ದೇಶಕಿ ರೇಖಾ ಮೋಹನ್ ಕೂಡ ಹೊರತಾಗಿಲ್ಲಾ. ಅಂದಹಾಗೆ ರೇಖಾ ಮೋಹನ್ ಅನ್ನೋದಕ್ಕಿಂತ ಮಜಾ ಟಾಕೀಸ್ ನಲ್ಲಿ ಸುಜನ್ ಲೋಕೇಶ್ ಕಾಲೆಳೆಯುತ್ತಿದ್ದ ರೆಮೋ ಅಂತಲೇ ಕರೆಯಲ್ಪಡುವ ರೇಖಾ ಮೋಹನ ಕೊರೊನಾದಿಂದ ಬೆಂಗಳೂರು ಬಿಟ್ಟು ಹೋಗುತ್ತಿರುವ ಜನರಿಗಾಗಿ ಹಾಡೊಂದನ್ನ ಬರೆದು ಹಾಡಿದ್ದು ಸಾಕಷ್ಟು ವೈರಲ್ ಆಗಿದೆ.
ಕಳೆದ ಬಾರಿ ಕೊರೊನಾ ವೈರಸ್ ಹರಡದಂತೆ ಸೇಫ್ ಆಗಿರಲು ಹಾಡೊಂದನ್ನ ರಚಿಸಿ ಹಾಡಿ ಪೋಸ್ಟ್ ಮಾಡಿದ್ದ ರೆಮೋ. ಸದ್ಯ ಮತ್ತೊಂದು ಹಾಡಿಗೆ ಸಾಕಷ್ಟು ವೈರಲ್ ಆಗಿದ್ದಾರೆ.
https://www.instagram.com/remo_rekha/?utm_source=ig_embed
ಲಾಕ್ಡೌನ್ನಿಂದಾಗಿ ಮನೆಯಲ್ಲೇ ಲಾಕ್ ಆಗಿರುವ ರೆಮೊ ಆಗಾಗ ತಮ್ಮ ಹಾಡುಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ. ಅವರ ಲೆಟೆಸ್ಟ್ ಹಾಡೊಂದು ನೆಟ್ಟಿಗರು ಹಾಗೂ ಸೆಲೆಬ್ರಿಟಿಗಳ ಮನ ಗೆದ್ದಿದೆ.
https://www.instagram.com/remo_rekha/channel/?utm_source=ig_embed