ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರಕ್ಕೆ 102 ಶಾಸಕರ ಬೆಂಬಲ; ರೆಸಾರ್ಟ್‌ನತ್ತ ಶಾಸಕರು!

ರಾಜಸ್ಥಾನದಲ್ಲಿ ಅಕ್ಷಶಃ ರಾಜಕೀಯ ಆಡಂಬೋಲ ನಡೆಯುತ್ತಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಸರ್ಕಾರದಲ್ಲಿ ಅಸಮಾಧಾನಗೊಂಡಿದ್ದ ಸಚಿನ್ ಪೈಲಟ್‌ ಮತ್ತವರ 30 ಬೆಂಬಲಿಗರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವುದಾಗಿ ವರದಿಯಾಗಿತ್ತು. ಅದಕ್ಕಾಗಿ ಸಚಿನ್ ಪೈಲಟ್‌ ತಂಡ ದೆಹಲಿಗೆ ತೆರಳುವುದಾಗಿ ಹೇಳಲಾಗಿತ್ತು. ಈ ಬೆನ್ನಲ್ಲೇ ಸಚಿನ್‌ ಜೊತೆಗಿದ್ದವರು ಯೂ-ಟರ್ನ್ ಹೊಡೆದು ವಾಪಸ್‌ ಬಂದಿದ್ದರು. ಈ ಬೆಳವಣಿಗೆ ನಂತರ ಸಚಿನ್‌ ತಾವು ಬಿಜೆಪಿ ಸೇರುವುದಿಲ್ಲ ಎಂದು ಹೇಳಿದ್ದರು.

ಇದೆಲ್ಲದರ ನಡುವೆ ಇಂದು ಸಿಎಂ ಅಶೋಕ್ ಗೆಹ್ಲೋಟ್​ ಅವರ ನಿವಾಸದಲ್ಲಿ ನಡೆದಿರುವ ಸಭೆಯಲ್ಲಿ ಕಾಂಗ್ರೆಸ್​ನ 102 ಶಾಸಕರು ಪಾಲ್ಗೊಳ್ಳುವ ಮೂಲಕ ಸರ್ಕಾರಕ್ಕೆ ತಮ್ಮ ಬೆಂಬಲ ಇರುವುದಾಗಿ ಸೂಚಿಸಿದ್ದಾರೆ. ಈ ಶಾಸಕರ ಪೈಕಿ ಸಚಿನ್ ಪೈಲಟ್​ಗೆ ಅಕಾಡದಲ್ಲಿದ್ದ ಶಾಸಕರೂ ಇರುವುದರಿಂದ ಸಚಿನ್ ಪೈಲಟ್ ಬೆಂಬಲಿಗ ಶಾಸಕರ ಸಂಖ್ಯೆ ಕುಸಿದಿದೆ.

19 Gujarat Congress MLAs Moved To Rajasthan Resort After 3 Resign

ಬಿಜೆಪಿ ಸೇರುವುದಿಲ್ಲ ಎಂದು ಹೇಳಿರುವ ಸಚಿನ್‌ ಪೈಲಟ್‌ ಅವರು ತಮಗೆ ಸಿಎಂ ಅಶೋಕ್ ಗೆಹ್ಲೋಟ್​ ಹಾಗೂ ರಾಜ್ಯದ ಕೆಲವು ಕಾಂಗ್ರೆಸ್ ನಾಯಕರ ರಾಜಕೀಯ ನಿಲುವುಗಳಿಂದ ಅಸಮಾಧಾನಗೊಂಡು ಪಕ್ಷ ಬಿಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದರು. ಗೆಹ್ಲೋಟ್​ ಸರ್ಕಾರಕ್ಕಿರುವ 107 ಕಾಂಗ್ರೆಸ್​ ಶಾಸಕರ ಬೆಂಬಲದಲ್ಲಿ ಇಂದು ಸಿಎಲ್​ಪಿ ಸಭೆಯಲ್ಲಿ 102 ಶಾಸಕರು ಪಾಲ್ಗೊಂಡಿರುವುದರಿಂದ ಬಂಡಾಯ ಶಾಸಕರ ಬಣದಲ್ಲಿ ಸಚಿನ್ ಪೈಲಟ್ ಅವರನ್ನೂ ಸೇರಿ ಕೇವಲ ಐವರು ಕೈ ಶಾಸಕರು ಉಳಿದಂತಾಗಿದೆ.

ಸಿಎಲ್​ಪಿ ಸಭೆಯಲ್ಲಿ ಪಾಲ್ಗೊಳ್ಳದವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದ ಕಾಂಗ್ರೆಸ್ ನಾಯಕರು ಇದೀಗ ಬಂಡಾಯ ಶಾಸಕರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ. ಕಾಂಗ್ರೆಸ್ ಜೊತೆಗೆ ಮತ್ತೆ ಕೈಜೋಡಿಸಲು ಮನಸಿರುವ ಶಾಸಕರು ನನಗೆ ಕರೆ ಮಾಡಬಹುದು, ಪಕ್ಷದ ಬಾಗಿಲು ನಿಮಗೆ ಸದಾ ತೆರೆದಿರುತ್ತದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಆಹ್ವಾನ ನೀಡಿದ್ದಾರೆ.

ಅಲ್ಲದೆ, ರಾಜಸ್ಥಾನದಲ್ಲಿ ಎದ್ದಿರುವ ಬಂಡಾಯದ ಪರಿಣಾಮ ಇತರೆ ಶಾಸಕರು ಮೇಲೂ ಉಂಟಾಗದಿರಲಿ ಎಂಬ ಉದ್ದೇಶದಿಂದ ಕಾಂಗ್ರೆಸ್ ತನ್ನ ಶಾಸಕರನ್ನು ರೆಸಾರ್ಟ್​ಗೆ ಶಿಫ್ಟ್​ ಮಾಡಲು ಮುಂದಾಗಿದೆ.

https://twitter.com/ANI/status/1282585219682324480?ref_src=twsrc%5Etfw%7Ctwcamp%5Etweetembed%7Ctwterm%5E1282585219682324480%7Ctwgr%5E&ref_url=https%3A%2F%2Fkannada.news18.com%2Fnews%2Fnational-international%2Frajasthan-political-updates-rajasthan-congress-102-mlas-supported-cm-ashok-gehlot-resort-politics-sachin-pilot-sct-411013.html

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights