60 ಕಿ.ಮೀಟರ್ ನಡೆದುಕೊಂಡು ಪ್ರಿಯತಮನನ್ನು ಸೇರಿದ ಯುವತಿ..!

ಪ್ರೀತಿ ಕುರುಡು. ಪ್ರೀತಿಯಿಂದ ಯಾವುದನ್ನ ಬೇಕಾದ್ರು ಗೆಲ್ಲಬಹುದು ಅನ್ನೋದಕ್ಕೆ ಇಲ್ಲೊಂದು ಪ್ರತ್ಯಕ್ಷ ನಿದರ್ಶನವಿದೆ.ಲಾಕ್ ಡೌನ್ ನಡುವೆಯೂ ಯುವತಿಯೊಬ್ಬಳು ಬರೋಬ್ಬರಿ 60 ಕಿ.ಮೀ ನಡೆದುಕೊಂಡು ಹೋಗಿ ಪ್ರೀತಿಸಿದ ಯುವಕನನ್ನು ಮದುವೆಯಾಗಿದ್ದಾಳೆ.

ಹೌದು… ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಹನುಮಾನ್‌ ಜಂಕ್ಷನ್‌ ನಿವಾಸಿ ಚಿತ್ಕಲಾ ಭವಾನಿ (19) ನಾಲ್ಕು ವರ್ಷಗಳಿಂದ ಸಾಯಿ ಪೊನ್ನಯ್ಯ ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಇವರ ಪ್ರೀತಿಗೆ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. ಜೊತೆಗೆ ಲಾಕ್ ಡೌನ್ ನಿಂದಾಗಿ ಇಬ್ಬರು ಪರಸ್ಪರ ಭೇಟಿಯಾಗುವುದು ಕೂಡ ಕಷ್ಟವಾಗಿತ್ತು. ಮನೆಯ ವಿರೋಧ ಹೆಚ್ಚಾಗುತ್ತಿದ್ದಂತೆ ಯುವತಿ ಪ್ರೀತಿಸಿದ ಪ್ರಿಯತಮನನ್ನು ಸೇರಲು 60 ಕಿ.ಮೀಟರ್ ನಡೆದುಕೊಂಡು ಹೋಗಿ ಆತನನ್ನು ಸೇರಿದ್ದಾಳೆ.

ಹೀಗೆ ಅದೆಷ್ಟೋ ಪ್ರೇಮಿಗಳು ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಮತ್ತೊಂದು ನಿದರ್ಶನ ಎಂದರೆ ಲಾಕ್‌ ಡೌನ್‌ ಹೊರತಾಗಿಯೂ ಮುಂಬಯಿನ 28 ವರ್ಷ ವಯಸ್ಸಿನ ವ್ಯಕ್ತಿ ಮೊದಲೇ ನಿಶ್ಚಯವಾದ ದಿನದಂದೇ ಮದುವೆಯಾಗಬೇಕು ಎಂದು ಗುರುವಾರ ಮದುವೆಯಾಗಿದ್ದಾರೆ. ಅವರ ಮದುವೆಗೆ ಬಂಧುಗಳು, ಸ್ನೇಹಿತರ ಅನು ಪಸ್ಥಿತಿಯಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.

ರಿಯಲ್‌ ಎಸ್ಟೇಟ್‌ ಉದ್ಯಮಿ ರಾಮ್‌ಕಿಶನ್‌ ಚವಾಣ್‌ ಮತ್ತು ರೀಮಾ ಸಿಂಗ್‌ 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಲಾಕ್‌ಡೌನ್‌ ಇರುವುದರಿಂದ ಮದುವೆಯನ್ನು ಮುಂದೂಡಲಿಲ್ಲ. ಸ್ಥಳೀಯ ಆಡಳಿತದ ಅನುಮತಿ ತೆಗೆದುಕೊಂಡು ದೇವಸ್ಥಾನದಲ್ಲಿ ಮದುವೆಯಾದೆವು ಎಂದು ರಾಮ್‌ ಕಿಶನ್‌ ಹೇಳಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ಪ್ರೇಮಿಗಳು ಬೇರೆಯಾಗುವ, ಬೇರೆ ಮಾಡುವ ಸಂದರ್ಭಗಳನ್ನ ಎದುರಿಸಬೇಕಾಗಿದೆ. ಆದರೂ ಹೀಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದ್ದು ಇಂಥಹ ವಿಚಾರದಲ್ಲಿ ಯುವಕ ಯುವತಿಯರು ಎಚ್ಚೆತ್ತುಕೊಳ್ಳಬೇಕಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights