ರೈಲ್ವೇಯನ್ನೂ ಖಾಸಗಿ ಒಡೆತನಕ್ಕೆ ಮಾರಿದ ಮೋದಿ ಸರ್ಕಾರ: 2023ಕ್ಕೆ ಹಳಿ ಏರಲಿವೆ ಖಾಸಗೀ ರೈಲುಗಳು!

ಭಾರತ ಸ್ವಾತಂತ್ರ್ಯಾ ನಂತರದಲ್ಲಿ ಖಾಸಗೀ ಸ್ವಾಮ್ಯದ ಎಲ್ಲಾ ರೀತಿಯ ಉದ್ದಿಮೆಗಳನ್ನೂ ರಾಷ್ಟ್ರೀಕರಣ ಮಾಡಿ ಸರ್ಕಾರದ ಒಡೆತನಕ್ಕೆ ತರುವ ಒಂದು ಪರ್ವ ಆರಂಭವಾಗಿತ್ತು. ಆದರೆ, 20ನೇ ಶತಮಾನದ ಕೊನೆಯ ದಶಕದಲ್ಲಿ ಮತ್ತೆ ಖಾಸಗೀ ಕೂಳರಿಗೆ ಮಣೆ ಹಾಕುವ ನೀತಿಗಳು ಭಾರತದಲ್ಲಿ ಆರಂಭವಾಗಿದ್ದವು. ಆದರೆ, ಈಗ 2010ರ ದಶಕದಲ್ಲಿ ಮತ್ತೆ ಖಾಸಗೀಕರಣದ ಪರ್ವ ಎದುರಾಗಿದೆ.

ದೇಶದ ಬೃಹತ್‌ ಜಾಲ ಹೊಂದಿರುವ ಹಾಗೂ ಗೌಪ್ಯತೆಗೆ ಸಂಬಂಧಿಸಿದ ಕೆಲವು ಕ್ಷೇತ್ರಗಳನ್ನು ಖಾಸಗೀ ಒಡೆತನಕ್ಕೆ ನೀಡಲಾಗಿರಲಿಲ್ಲ. ಆದರೆ, ಈಗ ಎಲ್ಲವೂ ಬಂಡವಾಳಿಗರ ಸ್ವತ್ತಾಗುತ್ತಿದೆ. ಭಾರತದ ಯುದ್ದ ವಿಮಾನಗಳನ್ನು ತಯಾರಿಸುತ್ತಿದ್ದ ಹೆಚ್‌ಎಎಲ್‌ಗೆ ಬೀಗ ಜಡಿದು, ಅನಿಲ್ ಅಂಬಾನಿಯ ರಿಲೆಯಾನ್ಸ್‌ ಕಂಪನಿಗೆ ನೀಡಲಾಗಿದೆ, ಈ ಬೆನ್ನಲ್ಲೇ, ದೇಶಾದ್ಯಂತ ವಿಸ್ತೃತ ಸಂಪರ್ಕ ಜಾಲಹೊಂದಿರುವ ಭಾರತೀಯ ರೈಲ್ವೇಯನ್ನೂ ಖಾಸಗೀ ಬಂಡವಾಳಿಗರಿಗೆ ಮಾರಾಟ ಮಾಡಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಯಾರಿ ನಡೆಸುತ್ತಿದೆ.

ರೈಲ್ವೇ ಖಾಸಗೀಕರಣಗೊಳ್ಳುವುದಿಲ್ಲ, ಆದರೆ, ಸರ್ಕಾರದ ರೈಲ್ವೇ ಜಾಲದ ಹಳಿಗಳ ಮೇಲೆ ಕೆಲವು ಖಾಸಗೀ ರೈಲುಗಳು ಸಂಚಿಸಲಿವೆ ಎಂದು ಸಧ್ಯಕ್ಕೆ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ಇದು ಅಧಿಕೃತವಾಗಿ ಖಾಸಗೀಕರಣವೆಂದು ಸದ್ಯಕ್ಕೆ ಘೋಷಸಿಲಾಗದಿದ್ದರೂ, ಬಂಡವಾಳಿಗರ ಅಂಕೆಗೆ ತಕ್ಕಂತೆ ಕಾರ್ಯನಿರ್ವಹಿಸುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರು ಹೇಳಿದ್ದಾರೆ.

ರೈಲ್ವೇ ಖಾಸಗೀಕರಣದ ಮೊದಲ ಹಂತದಲ್ಲಿ, ಮೊದಲ ಖಾಸಗಿ ರೈಲು ಸಂಚಾರ 2023ಕ್ಕೆ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ 12 ಖಾಸಗಿ ರೈಲುಗಳನ್ನು 2023ರಲ್ಲಿ ಭಾರತೀಯ ರೈಲ್ವೇಯ ಹಳಿ ಮೆಲೇರಲಿವೆ. ನಂತರದ, ಹಣಕಾಸು ವರ್ಷದಲ್ಲಿ ಇನ್ನೂ 45 ಮಾರ್ಗಗಳಲ್ಲಿ  ಟೈಮ್‌ಲೈನ್ ಪ್ರಕಾರ ಈ ರೈಲುಗಳ ಸಂಚಾರ ನಡೆಯಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಅದಲ್ಲದೆ 2027 ರ ವೇಳೆಗೆ ಯೋಜನೆಯ ಎಲ್ಲಾ 151 ಖಾಸಗಿ ರೈಲುಗಳು ಹಳಿ ಮೇಲೆ ಸಂಚರಿಸಲಿದೆ ಎನ್ನಲಾಗಿದೆ.

ಖಾಸಗಿ ಸಂಸ್ಥೆಗಳಿಗೆ ತನ್ನ ನೆಟ್‌ವರ್ಕ್‌ನಲ್ಲಿ ಪ್ರಯಾಣಿಕ ರೈಲುಗಳನ್ನು ಓಡಿಸಲು ಅವಕಾಶ ನೀಡುವ ಯೋಜನೆಗೆ ಚಾಲನೆ ನೀಡುವ ಉದ್ದೇಶದಿಂದ ರೈಲ್ವೆ ದೇಶಾದ್ಯಂತ 109 ಜೋಡಿ ಮಾರ್ಗಗಳಲ್ಲಿ 151 ಆಧುನಿಕ ಪ್ರಯಾಣಿಕ ರೈಲುಗಳನ್ನು ಓಡಿಸಲು ಕಂಪನಿಗಳಿಂದ ಆಹ್ವಾನಿಸಿದ್ದು,  ಈ ಯೋಜನೆಯು ಖಾಸಗಿ ವಲಯದಿಂದ ಸುಮಾರು  30,000 ಕೋಟಿ ರೂ.ಗಳನ್ನು ಆಕರ್ಷಿಸಲಿದೆ ಎಂದು ಹೇಳಲಾಗಿದೆ.

Why Modi govt plan to run 150 private trains by year-end seems ...
ಭಾರತದ ಮೊದಲ ಖಾಸಗಿ ರೈಲು

ಖಾಸಗಿ ರೈಲುಗಳ ಯೋಜನೆಯ ಭಾಗವಾಗಿ, 2022-23ರಲ್ಲಿ 12, 2023-2024ರಲ್ಲಿ 45, 2025-26ರಲ್ಲಿ 50 ಮತ್ತು ಅಂತಿಮವಾಗಿ 2026-2027ರ  ಅಂತ್ಯದಲ್ಲಿ 151 ರೈಲುಗಳು  ಹಳಿ ಮೇಲೆ ಸಂಚಾರ ನಡೆಸಲಿದೆ. ಜುಲೈ 8 ರಂದು ಪ್ರಾರಂಭವಾಗಿರುವ ಆರ್‌ಎಫ್‌ಕ್ಯೂ   ನವೆಂಬರ್ ವೇಳೆಗೆ ಅಂತಿಮಗೊಳ್ಳುವ ಸಾಧ್ಯತೆಯಿದೆ,  2021 ರ ಮಾರ್ಚ್ ವೇಳೆ ಬಿಡ್ ತೆರೆಯಲಾಗುತ್ತದೆ. 2021 ರ ಏಪ್ರಿಲ್ 31 ರೊಳಗೆ ಬಿಡ್ ದಾರರ ರ ಆಯ್ಕೆಯನ್ನು ಯೋಜಿಸಲಾಗಿದೆ ಎಂದು ರೈಲ್ವೆ ಹೇಳಿದೆ.

ರೈಲ್ವೆ ಪೂರ್ವ ನಿಗದಿತ ದಂಡವನ್ನೂ ಹೊಂದಿರಲಿದ್ದು  ಒಂದೊಮ್ಮೆ ನಿಗದಿತ ಕಾರ್ಯಕ್ಷಮತೆಯ ಮಾನದಂಡಗಳು ಮತ್ತು ಫಲಿತಾಂಶಗಳನ್ನು ಪೂರೈಸುವಲ್ಲಿ ವಿಫಲವಾದ ಕಾರಣ ಖಾಸಗಿ  ಪಾಲುದಾರರಿಂದ ಮರುಪಡೆಯಲಾಗುತ್ತದೆ. ಅಂತೆಯೇ, ರೈಲ್ವೆಯ ಕಡೆಯಿಂದ ವಿಫಲವಾದರೆ ರಿಯಾಯಿತಿ ಒಪ್ಪಂದದಲ್ಲಿ ದಂಡವನ್ನು ಮೊದಲೇ ನಿರ್ದಿಷ್ಟಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ ಸರ್ಕಾರಕ್ಕೆ ಆದಾಯ ಹರಿದು ಬರುತ್ತದೆ ಎಂದು ಜನರ ಕಣ್ಣಿಗೆ ಮಣ್ಣೆರಚಲಾಗುತ್ತಿದ್ದು, ರೈಲ್ವೇಯಲ್ಲೂ ಬಂಡವಾಳಿಗರ ಲೂಟಿಗೆ ಅವಕಾಶ ಮಾಡಿಕೊಡಲು ಸರ್ಕಾರ ಎಲ್ಲಾ ರೀತಿಯ ಸಿದ್ದತೆಗಳನ್ನು ನಡೆಸಿದೆ. ರೈಲ್ವೇಯನ್ನು ಖಾಸಗಿ ಒಡೆತನಕ್ಕೆ ಮಾರಿ, ಅದರಿಂದ ಸಿಗುವ ಕಮಿಷನ್‌ ಪಡೆಯಲು ಸರ್ಕಾರ ಮುಂದಾಗಿದ್ದು, ಆ ಕಮಿಷನ್‌ ಒಂದು ಭಾಗವನ್ನು ಸರ್ಕಾರದ ಆದಾಯವೆಂದು ಹೇಳಲು ಮುಂದಾಗಿದೆ.


ಇದನ್ನೂ ಓದಿ: ರೈತಾಪಿ ದುಡಿಮೆ ದೋಚಲು ಖಾಸಗಿ ಸಕ್ಕರೆ ಉದ್ಯಮಿಗಳ ಹುನ್ನಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights