ಲಾಕ್‌ಡೌನ್‌ ಮಾಡಿ ಸುಮ್ಮನೆ ಕೂರಬೇಡಿ; ಸಮಯವನ್ನು ಸದ್ಬಳಕೆ ಮಾಡಿಕೊಳ್ಳಿ: ಸರ್ಕಾರಕ್ಕೆ ತಜ್ಞರ ಸೂಚನೆ

ಕೊರೊನಾ ಕೇಕೆಯ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿಯಿಂದ ಬೆಂಗಳೂರಿನಲ್ಲಿ ಹೇರಲಾಗಿರುವ ಲಾಕ್‌ಡೌನ್ ಅವಧಿಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಜ್ಞರು ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಈ ಹಿಂದೆ ಮಾಡಿದಂತೆ ಲಾಕ್‌ಡೌನ್ ಹೇರಿ ಸುಮ್ಮನೆ ಕೂರಬೇಡಿ. ಆರೋಗ್ಯ ಮೂಲಸೌಕರ್ಯ ಹೆಚ್ಚಿಸಿಕೊಳ್ಳುವುದು ಮತ್ತು ಪರೀಕ್ಷೆಗಳನ್ನು ಹೆಚ್ಚಿಸುವುದರ ಕಡೆ ಗಮನ ನೀಡಿ ಡಂದು ತಜ್ಞರು ಹೇಳಿದ್ದಾರೆ.

ಈ ಕಳೆದ ಕೆಲವಾರು ದಿನಗಳಿಂದ ಸಂಪರ್ಕಿತರ ಪತ್ತೆ ಸಂಪೂರ್ಣ ಸ್ಥಗಿತಗೊಂಡಿದ್ದು, ಸೋಂಕು ಹರಡಲು ಕಾರಣವಾಗಿದೆ. ಸೋಂಕಿಗೆ ಕಡಿವಾಣ ಹಾಕಬೇಕಾದರೇ ಸಂಪರ್ಕಿತರನ್ನು ಪತ್ತೆ ಮಾಡಿ ಪರೀಕ್ಷೆಗೆ ಒಳಪಡಿಸಲೇಬೇಕಿದೆ.

ಇದೇ ವೇಳೆ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಇನ್ನಷ್ಟು ಸುಧಾರಿಸಬೇಕಿದೆ. ಆಮ್ಲಜನಕ ವ್ಯವಸ್ಥೆ ಪೂರೈಕೆ, ವೆಂಟಿಲೇಟರುಗಳ ಲಭ್ಯತೆ ಎಲ್ಲವನ್ನೂ ಸುಸೂತ್ರ ಮಾಡಬೇಕಿದೆ.

ಇದಕ್ಕೆಲ್ಲ ಲಾಕ್‌ಡೌನ್ ಅವಧಿ ಅವಕಾಶ ಕಲ್ಪಿಸುತ್ತದೆ. ಆದರೆ ಇದಾವುದನ್ನೂ ಮಾಡದೇ ಕೇವಲ ಲಾಕ್‌ಡೌನ್ ಮಾಡಿ ಸೋಂಕು ತಪ್ಪಿಸಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದಾಗಿ ವರದಿಯಾಗಿದೆ.

ಈ ಮಧ್ಯೆ ರಾಜ್ಯದಲ್ಲಿ, ಅದರಲ್ಲಿಯೂ ಬೆಂಗಳೂರಿನಲ್ಲಿ ಸಂಪರ್ಕಿತರ ಪತ್ತೆ, ತಪಾಸಣೆ, ಚಿಕಿತ್ಸೆ- ಈ ಮೂರೂ ವಿಧಾಣ ಸಂಫೂರ್ಣ ವಿಫಲವಾಗಿದೆ ಎಂಬುದನ್ನು ಖುದ್ದು ವೈದ್ಯ ಶಿಕ್ಷಣ ಸಚಿವ ಸುಧಾಕರರೇ ಒಪ್ಪಿಕೊಂಡಿದ್ದಾರೆ.

ಸ್ಯ ಬೆಂಗಳೂರನ್ನು ಎಂಟು ವಲಯಗಳನ್ನಾಗಿ ವಿಂಗಡಿಸಿ ಪ್ರತಿ ವಲಯಕ್ಕೂ ಸಚಿವರ ಮೇಲುಸ್ತುವಾರಿ ವಹಸಿಲಾಗಿದೆ. ಅಲ್ಲದೇ ಪ್ರತಿ ವಲಯ ಮತ್ತು ಬೂತ್ ಮಟ್ಟದಲ್ಲಿ ಕೊರೋನಾ ಖಾರ್‍ಯಪಡೆಗಳನ್ನು ರಚಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights