ಸಿಎಸ್‌ಎ ಕ್ರಿಕೆಟ್‌ ಮಂಡಳಿಯನ್ನು ಅಮಾನತು ಗೊಳಿಸಿದ ಸೌತ್‌ ಆಫ್ರಿಕಾ!

ದಕ್ಷಿಣ ಆಫ್ರಿಕಾರದ ಕ್ರಿಕೆಟ್‌ ಮಂಡಳಿ ಕ್ರಿಕೆಟ್‌ ಸೌತ್ ಆಫ್ರಿಕಾ (ಸಿಎಸ್‌ಎ) ಮೇಲೆ ವರ್ಣ ತಾರತಮ್ಯ, ಭ್ರಷ್ಟಾಚಾರ ಸೇರಿದಂತೆ ಹಲವಾರು ಆರೋಪಗಳು ಕೇಳಿಬಂದಿದ್ದು, ಈ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ಸರ್ಕಾರ ಸಿಎಸ್‌ಎಯನ್ನು ಅಮಾನತು ಮಾಡಿದೆ.

ಸಿಎಸ್‌ಎ ವಿರುದ್ಧ 2019ರ ಡಿಸೆಂಬರ್‌ನಿಂದ ಹಲವಾರು ಭ್ರಷ್ಟಾಚಾರದ ಆರೋಪಗಳನ್ನು ಮಾಡಿರುವ ದಕ್ಷಿಣ ಆಫ್ರಿಕಾದ ಕ್ರೀಡಾ ಒಕ್ಕೂಟ ಮತ್ತು ಒಲಿಂಪಿಕ್ ಸಮಿತಿ (SASCOC)ಯು ಸಿಎಸ್‌ಎ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಅಧಿಕಾರಿಗಳಿಗೆ “ಆಡಳಿತದಿಂದ ಹೊರಹೋಗುವಂತೆ” ಪತ್ರ ಬರೆದಿದೆ.

ಸರ್ಕಾರ ಮತ್ತು ಕ್ರೀಡಾ ಒಕ್ಕೂಟಗಳ ನಡುವೆ ಸಂಪರ್ಕ ಕೊಂಡಿಯಾಗಿರುವ SASCOC, ಮಂಗಳವಾರ ನಡೆಸಿದ ಸಭೆಯಲ್ಲಿ ಸಿಎಸ್‌ಎ ವಿರುದ್ಧ ಕ್ರಮ ಕೈಗೊಳ್ಳಲು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ.

ಈ ಕಾರಣದಿಂದಾಗಿ, ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡವು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದಿದೆ. ಈ ರೀತಿಯಲ್ಲಿ ದಕ್ಷಿಣ ಆಫ್ರಿಕಾವು ಎರಡನೇ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಕ್ಕೆ ಒಳಗಾಗಿದೆ. ವರ್ಣಭೇದದ ಕಾರಣದಿಂದಾಗಿಯೇ 1970 ಮತ್ತು 1990ರ ನಡೆವೆ ಎರಡು ದಶಕಗಳ ಕಾಲ ಅಂತಾರಾಷ್ಟ್ರೀಯ ಕ್ರೀಡೆಯಿಂದ ನಿಷೇಧಿಸಲ್ಪಟ್ಟಿತ್ತು.

ತೀರಾ ಇತ್ತೀಚೆಗೆ ಜಿಂಬಾಬ್ವೆಯು ಕೂಡ ತನ್ನ ದೇಶದ ಕ್ರಿಕೆಟ್‌ ಮಂಡಳಿಯನ್ನು ಅಮಾನತುಗೊಳಿಸಿದೆ.

ಆದರೆ, ಕ್ರಿಕೆಟ್ ಮಂಡಳಿಯ ಕಾರ್ಯಚಟುವಟಿಕೆಯ ಮೇಲೆ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಐಸಿಸಿ ನಿಯಮ ಹೇಳುತ್ತದೆ. ಸರ್ಕಾರದ ಹಸ್ತಕ್ಷೇಪದಿಂದಾಗಿ ಕ್ರಿಕೆಟ್‌ ತಂಡವು ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳಿಂದ ಹೊರಗುಳಿಯುವಂತಹ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಐಸಿಸಿಯ ಅಭಿಪ್ರಾಯವಾಗಿದೆ.


ಇದನ್ನೂ ಓದಿ: ಕ್ರಿಕೆಟ್‌ ಪ್ರೇಮಿಗಳಿಗೆ ನಿರಾಶೆ: ಏಷ್ಯಾಕಪ್‌ 2020 ರದ್ದು ಮಾಡಿರುವುದಾಗಿ ಬಿಸಿಸಿಐ ಸ್ಪಷ್ಟನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights